ಕ್ಲಾಸ್‌ರೂಮ್‌ಗೆ ನುಗ್ಗಿ ಗೂಂಡಾಗಳಿಂದ 15ರ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ; ಸುಮ್ಮನೇ ನೋಡ್ತಾ ನಿಂತ ಶಿಕ್ಷಕ!
ಶಾಲಾ ಕೊಠಡಿಯೊಳಗೆ ನುಗ್ಗಿದ ಗೂಂಡಾಗಳು 15 ವರ್ಷದ ಬಾಲಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇತ್ತ ಪೊಲೀಸರು ಹಲ್ಲೆಗೊಳಗಾದ ಬಾಲಕನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಲಕ್ನೋ: ಉತ್ತರ ಪ್ರದೇಶದ ಉನ್ನಾವ ಪ್ರದೇಶದ ಶಾಲೆಯ ಕೊಠಡಿಗೆ ನುಗ್ಗಿದ ಗೂಂಡಾಗಳು 15 ವರ್ಷದ ಬಾಲಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಕ್ಲಾಸ್‌ರೂಮ್‌ನಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಶಿಕ್ಷಕ ಮಾತ್ರ ನೋಡುತ್ತಾ ನಿಂತಿದ್ದರು. ತರಗತಿಯಲ್ಲಿದ್ದ ಇನ್ನುಳಿದ ಮಕ್ಕಳು ಭಯದಿಂದ ಒಂದೆಡೆ ಸರಿದು ಅಸಹಾಯಕರಾಗಿ ತಮ್ಮ ಗೆಳೆಯನ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ನೋಡಿದ್ದಾರೆ. ಈ ಎಲ್ಲಾ ದೃಶ್ಯಗಳು ತರಗತಿಯಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸದ್ಯ ಈ ಹಲ್ಲೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಕಾನೂನು ಸುವ್ಯವಸ್ಥೆ ಹದೆಗೆಟ್ಟಿರೋದಕ್ಕೆ ಇದುವೇ ಕಾರಣ ಎಂದು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ 8 ರಿಂದ 10 ಜನರು ಬಾಲಕನನ್ನು ಕೆಳಗೆ ಬೀಳಿಸಿ ಹಲ್ಲೆ ಮಾಡುತ್ತಿರೋದನ್ನು ಗಮನಿಸಬಹುದು. ಶಾಲೆಯ ಕೊಠಡಿಯೊಳಗೆ ಮಕ್ಕಳಿಗೆ ರಕ್ಷಣೆ ನೀಡುವುದು ಶಿಕ್ಷಕರ ಜವಾಬ್ದಾರಿಯಾಗಿರುತ್ತದೆ. ಆದ್ರೆ ಇಲ್ಲಿ ಶಿಕ್ಷಕ, ಹಲ್ಲೆಗೊಳಾಗುತ್ತಿರುವ ಬಾಲಕ ರಕ್ಷಣೆಗೂ ಮುಂದಾಗಿಲ್ಲ. ದುಷ್ಕರ್ಮಿಗಳು ಬಾಲಕನನ್ನು ಕ್ಲಾಸ್‌ರೂಮ್‌ನಿಂದ ಹೊರಗೆ ಎಳೆದೊಯ್ದು ಅಲ್ಲಿಯೂ ಹಲ್ಲೆ ನಡೆಸಿದ್ದಾರೆ. ಆಗಸ್ಟ್ 31ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅಂದು ಶಾಲೆಯಲ್ಲಿ ಎಲ್ಲ ಮಕ್ಕಳಂತೆ ಹಲ್ಲೆಗೊಳಗಾದ 15 ವರ್ಷದ ಬಾಲಕ ಸಹ ಪಾಠ ಕೇಳುತ್ತಿದ್ದನು.
ಈ ವೇಳೆ ಕ್ಲಾಸ್‌ರೂಮ್‌ಗೆ ನುಗ್ಗಿದ ಲಾಲೂ ಉರ್ಫ್ ಇರ್ಷಾದ್ ಅಹಮದ್, ನಿಹಾಲ್, ಶಾದಾಬ್ ಮತ್ತು ಶಹಜಾದ್ ಹಾಗೂ ಸಹಚರರು ಪಾಠ ಕೇಳುತ್ತಿದ್ದ ವಿದ್ಯಾರ್ಥಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ನೆಲಕ್ಕೆ ಬೀಳಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಒಂದು ಬಾಗಿಲಿನಿಂದ ಗೂಂಡಾಗಳು ಒಳಗೆ ನುಗ್ಗಿದ್ರೆ, ಮತ್ತೊಂದು ದ್ವಾರದಿಂದ ಕೆಲ ಮಕ್ಕಳು ಭಯದಿಂದ ಓಡಿ ಹೋಗಿದ್ದಾರೆ. ಶಾಲೆಯ ಗೇಟ್‌ವರೆಗೂ ಬಾಲಕನನ್ನು ಎಳೆದೊಯ್ಯುತ್ತಾ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಸೆಕ್ಸ್‌ಗಾಗಿ 286 ಯುವತಿಯರಿಗೆ ಬ್ಲಾಕ್‌ಮೇಲ್ ಮಾಡಿದ್ದ ಯುಟ್ಯೂಬರ್‌ಗೆ ಪ್ರಕಟವಾಯ್ತು ಶಿಕ್ಷೆ!
ಇತ್ತ ತಮ್ಮ ಮಗನ ಮೇಲೆ ಹಲ್ಲೆಯ ವಿಷಯ ತಿಳಿಯುತ್ತಲೇ ಶಾಲೆಗೆ ದೌಡಾಯಿಸಿದ ಪೋಷಕರು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕನ ಜೊತೆಯಲ್ಲಿಯೇ ಬಾಂಗರಮೂ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಅಚ್ಚರಿಯ ಘಟನೆ ಏನು ಅಂದ್ರೆ ಪೊಲೀಸರು ಹಲ್ಲೆಗೈದ ಗೂಂಡಾಗಳ ಹೇಳಿಕೆಯಾಧಾರದ ಮೇಲೆ ಪೊಲೀಸರು ಬಾಲಕನ ವಿರುದ್ಧವೇ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇತ್ತ ಬಾಲಕನ ಪೋಷಕರು ದೂರು ದಾಖಲಿಸಿಕೊಂಡರೂ ಪೊಲೀಸರು ಯಾವುದೇ ಕ್ರಮಕೈಗೊಂಡಿಲ್ಲ ಎಂದು ವರದಿಯಾಗಿದೆ.
ಬಾಲಕನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಶನಿವಾರ ಎಲ್ಲಾ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರಂನಲ್ಲಿ ವೈರಲ್ ಬಳಿಕ ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್ ಅರವಿಂದ್ ಚೌರಾಸಿಯಾ, ಪ್ರಕರಣದ ಮಾಹಿತಿ ಕೇಳಿದ್ದಾರೆ. ಸದ್ಯ ಗಾಯಗೊಂಡಿರುವ ಬಾಲಕ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಆತನಿಂದಲೂ ಪೊಲೀಸರು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇತ್ತ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅರವಿಂದ್ ಚೌರಾಸಿಯಾ, ಶಾಲೆಯಲ್ಲಿ ಬಾಲಕನ ಮೇಲೆ ಹಲ್ಲೆಯಾಗಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಬಾಲಕ ಪೋಷಕರ ದೂರಿನ ಅನ್ವಯ ಹೊಸ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಹಲ್ಲೆ ಯಾಕೆ ಆಯ್ತು ಮತ್ತು ಘಟನೆಗೆ ಕಾರಣ ಏನು ಎಂಬವುದು ತನಿಖೆಯಲ್ಲಿ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದ್ದಾರೆ.
"ಡ್ರೈ ಫ್ರೂಟ್ಸ್ ತಿನ್ನಲಾರೆ, ಅವಲಕ್ಕಿಯೇ ಬೇಕು" ಗಂಡ ಪೋಹಾ ಬೇಡ ಅಂದಿದ್ದಕ್ಕೆ ನೇಣಿಗೆ ಶರಣಾದ ನವವಿವಾಹಿತೆ
शिक्षा घर को बनाया गुंडो ने अपना अड्डा दबंगों की दबंगई : स्कूल में घुसकर आधा दर्जन दबंगों ने 15 वर्षीय छात्र को पीटा,पिटाई का
— जनाब खान क्राइम रिपोर्टर (@janabkhan08) September 8, 2024
उन्नाव में किसी बात को लेकर नाराज दबंगों ने स्कूल की कक्षा में घुसकर अध्यापक अथवा अन्य बच्चो के सामने एक छात्र को बुरी तरह पीटा
घटना का CCTV वायरल है pic.twitter.com/jUgYU1hCpI