ನೂಪುರ್ ಶರ್ಮಾ, ಬಿಜೆಪಿ ಶಾಸಕನ ಹತ್ಯೆಗೆ ಸ್ಕೆಚ್ ಹಾಕಿದ್ದ ಮುಸ್ಲಿಮ್ ಮೌಲ್ವಿ ಅರೆಸ್ಟ್, ಪಾಕ್ ಜೊತೆ ಸಂಪರ್ಕ!
ಬಿಜೆಪಿ ಫೈರ್ ಬ್ರ್ಯಾಂಡ್ ನೂಪುರ್ ಶರ್ಮಾ ಹಾಗೂ ಶಾಸಕ ರಾಜಾ ಸಿಂಗ್ ಸೇರಿದಂತೆ ಕೆಲ ಹಿಂದೂಪರ ನಾಯಕ ಹತ್ಯೆಗೆ ಸ್ಕೆಚ್ ಹಾಕಿ ಸಿದ್ಧತೆ ನಡೆಸಿದ್ದ ಮುಸ್ಲಿಮ್ ಮೌಲ್ವಿಯನ್ನು ಬಂಧಿಸಲಾಗಿದೆ. ಬಂಧನದಿಂದ ಮಹಾ ಷಡ್ಯಂತ್ರ ಬಯಲಾಗಿದೆ.
ಸೂರತ್(ಮೇ.06) ಮುಸ್ಲಿಮ್ ಮೌಲ್ವಿ ಬಂಧನದಿಂದ ಮತ್ತೊಂದು ಮಹಾ ಷಡ್ಯಂತ್ರ ಬಯಲಾಗಿದೆ. ಬಿಜೆಪಿ ನಾಯಕರು, ಹಿಂದೂಪರ ಸಂಘಟನೆಗಳ ನಾಯಕರ ಹತ್ಯೆಗೆ ಸದ್ದಿಲ್ಲದ ನಡೆಯುತ್ತಿದ್ದ ತಯಾರಿ ಬಟಾ ಬಯಲಾಗಿದೆ. ದೆಹಲಿ ಬಿಜೆಪಿ ನಾಯಕ ನೂಪುರ್ ಶರ್ಮಾ, ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಸೇರಿದಂತೆ ಇತರ ಕೆಲ ನಾಯಕರ ಹತ್ಯೆಗೆ ಸ್ಕೆಚ್ ಹಾಕಿದ್ದ ಮುಸ್ಲಿಮ್ ಮೌಲ್ವಿ ಅಬೂಬಕರ್ ತಮೋಲಿಯನ್ನು ಸೂರತ್‌ನಲ್ಲಿ ಬಂಧಿಸಲಾಗಿದೆ. ಹತ್ಯೆಗೆ ಪಾಕಿಸ್ತಾನ ಹಾಗೂ ನೇಪಾಳದಿಂದ ಕರೆತಂದಿದ್ದ ಇಬ್ಬರು ಸಹಾಯಕರನ್ನೂ ಪೊಲೀಸರು ಬಂಧಿಸಿದ್ದಾರೆ.
ಹಿಂದೂಗಳನ್ನು ಒಗ್ಗೂಡಿಸುತ್ತಿದ್ದ ನಾಯಕರನ್ನು ಟಾರ್ಗೆಟ್ ಮಾಡಿ ಹತ್ಯೆಗೆ ಸ್ಕೆಚ್ ರೂಪಿಸಿರುವುದು ಈ ಬಂಧನದಿಂದ ಬಯಲಾಗಿದೆ. ಮೌಲ್ವಿ ಅಬೂಬಕರ್ ತಮೋಲಿ ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿಗಲು ಬಯಲಾಗಿದೆ. ಸನಾತನ ಸಂಘಟದ ರಾಷ್ಟ್ರೀಯ ಮುಖ್ಯಸ್ಥ ಉಪದೇಶ್ ರಾಣಾ ಹತ್ಯೆಗೆ ಪಾಕಿಸ್ತಾನ ಹಾಗೂ ನೇಪಾಳದ ಹಂತಕರಿಗೆ ಸುಪಾರಿ ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. 2019ರಲ್ಲಿ ಉತ್ತರ ಪ್ರದೇಶದ ಹಿಂದೂ ಸಮಾಜ ಸಂಘನೆ ಮುಖ್ಯಸ್ತ ಕಮಲೇಶ್ ತಿವಾರಿ ಹತ್ಯೆ ರೀತಿಯಲ್ಲೇ ಉಪದೇಶ್ ರಣಾ ಹತ್ಯೆಗೆ ಸಂಚು ರೂಪಿಸಲಾಗಿತ್ತು ಅನ್ನೋ ಮಾಹಿತಿ ಬಯಲಾಗಿದೆ.
ಸಿಎಎ ಪರ ಪ್ರತಿಭಟನೆ: ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆಗೆ ಸ್ಕೆಚ್!
ಉಪದೇಶ್ ರಾಣಾಗೆ 15 ಬಾರಿ ಕರೆ ಮಾಡಿ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು. ಮೌಲ್ವಿ ವ್ಯಾಟ್ಸ್ಆ್ಯಪ್ ಚಾಟ್ ಕೂಡ ಬಹಿರಂಗವಾಗಿದ್ದು, ಭಾರತದಲ್ಲಿ ಕೋಮುಗಲಭೆ ಸೃಷ್ಟಿಸಲು ಮಾಡಿದ್ದ ಪ್ಲಾನ್ ಬಯಲಾಗಿದೆ. ಹಿಂದೂ ನಾಯಕರ ಹತ್ಯೆ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಪ್ಲಾನ್ ಮಾಡಲಾಗಿತ್ತು. ಇದಕ್ಕಾಗಿ ಪಾಕಿಸ್ತಾನದ ಸುಪಾರಿ ಹಂತಕರು ಹಾಗೂ ನೇಪಾಳದ ಹಂತರಿಗೆ ಸೂಚನೆ ನೀಡಲಾಗಿತ್ತು. ಈ ಪೈಕಿ ಅರೆಸ್ಟ್ ಆಗಿರುವ ಪಾಕಿಸ್ತಾನ ಓರ್ವ ಹಾಗೂ ನೇಪಾಳದ ಓರ್ವನಿಗೆ ಭಾರತದ ದಾಖಲೆಗಳನ್ನು ಇದೇ ಮೌಲ್ವಿ ಮಾಡಿಸಿ ಕೊಟ್ಟಿದ್ದ.
ಇದೇ ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ಉಪದೇಶ್ ರಾಣಾ ಹತ್ಯೆ ಬಳಿಕ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ, ತೆಲಂಗಾಣ ಬಿಜೆಪಿ ಶಾಸಕ ರಾಜಾ ಸಿಂಗ್ ಸೇರಿದಂತೆ ಹಲವರನ್ನು ಹತ್ಯೆ ಮಾಡಲು ಪಟ್ಟಿ ರೆಡಿ ಮಾಡಿರುವುದು ಬಹಿರಂಗವಾಗಿದೆ. ಮೌಲ್ವಿ ಜೊತೆ ಬಂಧನವಾಗಿರುವ ನೆರೆ ರಾಷ್ಟ್ರದ ಇಬ್ಬರು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಮೌಲ್ವಿ ಪಾಕಿಸ್ತಾನದ ಜೊತೆ ನೇರ ಸಂಪರ್ಕದಲ್ಲಿರುವುದು ಈತನ ಮೊಬೈಲ್‌ನಿಂದ ಬಹಿರಂಗವಾಗಿದೆ. ಪಾಕಿಸ್ತಾನದ ಕೆಲ ಸಂಘಟನೆ, ಉಗ್ರರ ಮಾರ್ಗದರ್ಶನದಲ್ಲಿ ಈತ ಕೆಲಸ ನಿರ್ವಹಿಸುತ್ತಿದ್ದ ಅನ್ನೋದು ಪೊಲೀಸರ ತನಿಖೆಯಿಂದ ಬಯಲಾಗಿದೆ.
ಸಂಘ ಪರಿವಾರ ನಾಯಕರ ಹತ್ಯೆಗೆ ಸಂಚು: ಪೊಲೀಸ್ ಇಲಾಖೆ ಬಹಿರಂಗ..!