Asianet Suvarna News Asianet Suvarna News

ಗುಜರಾತ್ ಪಾಲಿಕೆ ಚುನಾವಣಾ ಫಲಿತಾಂಶ: ಭರ್ಜರಿ ಮುನ್ನಡೆಯತ್ತ ಬಿಜೆಪಿ!

ಬಿಜೆಪಿ ಭದ್ರಕೋಟೆ ಗುಜರಾತ್‌ನ 6 ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬೀಳುತ್ತಿದೆ. ಸದ್ಯ ಮತಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಬಿಜೆಪಿ ಭರ್ಜರಿ ಮುನ್ನಡೆ ಸಾಧಿಸಿದೆ. ಇತ್ತ ಸೂರತ್‌ನಲ್ಲಿ ಕಾಂಗ್ರೆಸ್‌ಗೆ ಆಮ್ ಆದ್ಮಿ ಪಕ್ಷ ಟಕ್ಕರ್ ನೀಡಿದೆ. ಚುನಾವಣಾ ಫಲಿತಾಂಶ ವಿವರ ಇಲ್ಲಿದೆ.

Gujarat Municipal Election Result BJP nears majority mark in Surat Vadodara sweeps in jamnagar ckm
Author
Bengaluru, First Published Feb 23, 2021, 2:48 PM IST

ಅಹಮ್ಮದಾಬಾದ್(ಫೆ.23): ಗುಜರಾತ್ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಇದೀಗ ಎಲ್ಲರ ಗಮನಸೆಳೆದಿದೆ. ಅಹಮ್ಮದಾಬಾದ್, ವಡೋದರ, ಸೂರತ್, ರಾಜ್‌ಕೋಟ್ ಜಾಮ್‌ನಗರ ಮತ್ತು ಭಾವ್‌ನಗರ್ ಒಟ್ಟು 6 ಮಹಾನಗರ ಪಾಲಿಕೆ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಒಟ್ಟು 578 ಸ್ಥಾನಗಳ ಮತ ಎಣಿಕೆಯಲ್ಲಿ ಬಿಜೆಪಿ ಸದ್ಯ 60 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 12 ಸ್ಥಾನದಲ್ಲಿ ಮುನ್ನಡೆ ಪಡೆದುಕೊಂಡಿದೆ.

ಬಿಜೆಪಿ ಭರ್ಜರಿ ಪ್ರವೇಶ : ಕಮಲ ಪಾಳಯಕ್ಕೆ ಬಂಪರ್

ವಡೋದರ, ರಾಜ್‌ಕೋಟ್ ಮತ್ತು ಜಾಮ್‌ನಗರದಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವಿನತ್ತ ಹೆಜ್ಜೆ ಹಾಕಿದೆ. ಬಿಜೆಪಿ ವಿರುದ್ದ ಬಾರಿ ಪ್ರಚಾರ ಕೈಗೊಂಡಿದ್ದ ಕಾಂಗ್ರೆಸ್‌ಗೆ ಈ ಬಾರಿಯೂ ಹಿನ್ನಡೆಯಾಗಿದೆ. ವಿಶೇಷ ಅಂದರೆ ಸೂರತ್ ಪಾಲಿಕೆಯಲ್ಲಿ ಬಿಜೆಪಿ ಸದ್ಯ 51 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ಆಮ್ ಆದ್ಮಿ ಪಕ್ಷ 17 ಸ್ಥಾನಗಳಲ್ಲಿ ಮುನ್ನಡೆ ಸಾಧಿಸೋ ಮೂಲಕ ಇದೇ ಮೊದಲ ಬಾರಿಗೆ ಸೂರತ್‌ನಲ್ಲಿ  AAP ಸಂಚಲನ ಮೂಡಿಸಿದೆ . ಆದರೆ ಪ್ರತಿ ಭಾರಿ ಬಿಜೆಪಿಗೆ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್ ಈ ಬಾರಿ ಸೂರತ್‌ನಲ್ಲಿ ಇನ್ನೂ ಖಾತೆ ತೆರೆದಿಲ್ಲ.

ಕರ್ನಾಟಕದ ಮತ್ತೊಂದು ಚುನಾವಣೆಗೆ ದಿನಾಂಕ ಘೋಷಣೆ...!.

ವಡೋದರ;
ವಡೋದರ ಪಾಲಿಕೆ ಚುನಾವಣಾ ಫಲಿತಾಂಶ ಬಿಜೆಪಿಯತ್ತ ವಾಲಿದೆ. 76 ಸ್ಥಾನಗಳ ಪೈಕಿ 45ಸ್ಥಾನದಲ್ಲಿ ಗೆಲುವು ಪಡೆದುಕೊಂಡಿರುವ   ಬಿಜೆಪಿ ಬಹುಮತ ಪಡೆದುಕೊಂಡಿದೆ. ಈ ಮೂಲಕ ಸತತ 4ನೇ ಬಾರಿಗೆ ವಡೋದರಲ್ಲಿ ಬಿಜೆಪಿ ಅಧಿಕಾರಕ್ಕೇರಲು ಸಜ್ಜಾಗಿದೆ.  

ಜಾಮ್‌ನಗರ:
ಜಾಮ್‌ನಗರ 64 ಸ್ಥಾನಗಳ ಪೈಕಿ ಬಿಜೆಪಿ 40 ಸ್ಥಾನ ಗೆದ್ದುಕೊಂಡಿದೆ.   ಈ ಮೂಲಕ ಜಾಮ್‌ನಗರದಲ್ಲೂ ಬಹುಮತ ಪಡೆದುಕೊಂಡಿದೆ. ಹೀಗಾಗಿ ಜಾಮ್‌ನಗರದಲ್ಲೂ ಬಿಜೆಪಿ ಅಧಿಕಾರಕ್ಕೇರಲು ರೆಡಿಯಾಗಿದೆ. 

ಸದ್ಯದ ಚಿತ್ರಣ:
ಸೂರತ್ ಮಹಾನಗರ ಪಾಲಿಕೆ - 120 ಸ್ಥಾನ

ಬಿಜೆಪಿ - 51 (ಗೆಲುವ)
AAP - 13 (ಗೆಲುವು)
ಕಾಂಗ್ರೆಸ್- 0 (ಗೆಲುವು)

ವಡೋದರ ಮಹಾನಗರ ಪಾಲಿಕೆ - 76 ಸ್ಥಾನ
ಬಿಜೆಪಿ - 45 (ಗೆಲುವು)
ಕಾಂಗ್ರೆಸ್- 7 (ಗೆಲುವು)

ಜಾಮ್‌ನಗರ ಮಹಾನಗರ ಪಾಲಿಕೆ  - 64 ಸ್ಥಾನ
ಬಿಜೆಪಿ - 40 (ಗೆಲುವು)
ಕಾಂಗ್ರೆಸ್- 5 (ಗೆಲುವು)
ಬಿಎಸ್‌ಪಿ - 3 (ಗೆಲುವು)

ಅಹಮ್ಮದಾಬಾದ್, ರಾಜ್‌ಕೋಟ್ ಹಾಗೂ ಭಾವ್‌ನಗರದಲ್ಲಿ ಆರಂಭಿಕ ಮುನ್ನಡೆ ಸಾಧಿಸಿರುವ ಬಿಜೆಪಿ ಬಹುಮತಗಳಿಸುವ ವಿಶ್ವಾಸದಲ್ಲಿದೆ. 

Follow Us:
Download App:
  • android
  • ios