ಬಂಧನಕ್ಕೊಳಗಾಗಿದ್ದ ಜಿಗ್ನೇಶ್ ಮೇವಾನಿ ಬಿಡುಗಡೆ ಹೊರಬಂದ ಮೇವಾನಿಯಿಂದ ಪುಷ್ಪೂ ಮೂವಿ ಸ್ಟೈಲ್ ಅಸ್ಸಾಂ ಕೋರ್ಟ್‌ನಿಂದ ಜಿಗ್ನೇಶ್ ಮೇವಾನಿ ಜಾಮೀನು
ನವದೆಹಲಿ(ಏ.29): ಏರಡು ಪ್ರಕರಣಗಳಲ್ಲಿ ಬಂಧನಕ್ಕೊಳಗಾದಿದ್ದ ಗುಜರಾತ್ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿಗೆ ಅಸ್ಸಾಂ ಕೋರ್ಟ್ ಜಾಮೀನು ನೀಡಿದೆ. ಜಾಮೀನು ಸಿಕ್ಕ ಬೆನ್ನಲ್ಲೇ ಜಿಗ್ನೇಶ್ ಮೇವಾನಿ ಪುಷ್ಟಾ ಸಿನಿಮಾದ ಸಿಗ್ನೇಚರ್ ಸ್ಟೈಲ್ ಮಾಡಿ, ನಾನೂ ಯಾರಿಗೂ ತಲೆಭಾಗುವುದಿಲ್ಲ ಎಂದು ಮೇವಾನಿ ಹೇಳಿದ್ದಾರೆ.
ಮಹಿಳೆಯನ್ನು ಬಳಸಿ ನನ್ನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗಟ್ಟುವ ಹೇಡಿತನದ ಕೆಲಸವನ್ನು ಬಿಜೆಪಿ ಮಾಡಿದೆ. ಅಸ್ಸಾಂ ಮಹಿಳಾ ಪೇದೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಅಸ್ಸಾಂ ಕೋರ್ಟ್ ಜಾಮೀನು ನೀಡಿದೆ. ನನ್ನ ಬಂಧನ ಸರಳ ವಿಷಯವಲ್ಲ. ಬಿಜೆಪಿ ಅಧಿಕಾರ ಬಳಸಿ ಈ ಪ್ರಕರಣ ನನ್ನ ಮೇಲೆ ಕಟ್ಟುವ ಪ್ರಯತ್ನ ನಡೆದಿದೆ ಎಂದು ಮೇವಾನಿ ಹೇಳಿದ್ದಾರೆ.
ಪ್ರಧಾನಿ ಮೋದಿಯನ್ನು ಟೀಕಿಸಿ ಜೈಲುಪಾಲಾಗಿದ್ದ ಜಿಗ್ನೇಶ್ ಮೇವಾನಿಗೆ ಜಾಮೀನು, ಅದರ ಬೆನ್ನಲ್ಲೇ ಮತ್ತೆ ಅರೆಸ್ಟ್!
ನನ್ನ ಟ್ವೀಟ್‌ಗೆ ಪಶ್ಚಾತಾಪವಿಲ್ಲ. ಹೆಮ್ಮೆ ಇದೆ. ಕೋಮುಸಂಘರ್ಷ ನಿಯಂತ್ರಿಸಿ ಸೌಹಾರ್ಧತೆ ಕಾಪಾಡುವಂತೆ ಪ್ರಧಾನಿಗೆ ಮನವಿ ಮಾಡಿದ್ದೇನೆ. ಇದನ್ನು ಹೇಳುವ ಹಕ್ಕು ನನಗಿದೆ ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಜಾಮೀನು ಸಿಕ್ಕ ಬೆನ್ನಲ್ಲೇ ಇನ್ನೊಂದು ಕೇಸಲ್ಲಿ ಮೇವಾನಿ ಬಂಧನ
ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಪಡೆದ ಖುಷಿಯಲ್ಲಿದ್ದ ಗುಜರಾತ್ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿಯನ್ನು ಅಸ್ಸಾಂ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ. ‘ಕೆಲವರು ಗೂಡ್ಸೆಯನ್ನು ದೇವರೆಂದು ಪರಿಗಣಿಸಿದ್ದಾರೆ’ ಎಂದು ಮೇವಾನಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದರು. ಈ ಕೇಸಲ್ಲಿ ಬಂಧಿತರಾಗಿದ್ದ ಮೇವಾನಿ ಅವರಿಗೆ ಸೋಮವಾರ ಮಧ್ಯಾಹ್ನ ಕೋಕ್ರಾಝಾರ್ ಜಿಲ್ಲಾ ಕೋರ್ಟು æಜಾಮೀನು ನೀಡಿತು. ಆದರೆ, ಜೈಲಿನಿಂದ ಬಿಡುಗಡೆಯಾಗುವ ಮೊದಲೇ ಮತ್ತೊಂದು ಪ್ರಕರಣದಲ್ಲಿ (ಅಧಿಕಾರಿಗಳಿಗೆ ಬೆದರಿಕೆ ಹಾಗೂ ವಿಚಾರಣೆ ವೇಳೆ ಪೊಲೀಸರಿಗೆ ನಿಂದನೆ) ಮೇವಾನಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಾಂಗ್ರೆಸ್ ಇಲ್ಲದೆ ಭಾರತ ಉಳಿಯುವುದಿಲ್ಲ; ಪಕ್ಷ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಹೊಗಳಿದ ಕನ್ಹಯ್ಯ!
ದಲಿತ ನಾಯಕರ ಟಾರ್ಗೆಟ್ ಬಿಡಿ: ಕೆಪಿಸಿಸಿ ಎಸ್ಸಿ ವಿಭಾಗ
ಪಿಎಸ್‌ಐ ಅಕ್ರಮ ನೇಮಕಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್ ನೀಡಿರುವುದನ್ನು ಕೆಪಿಸಿಸಿ ಪರಿಶಿಷ್ಟಜಾತಿ ವಿಭಾಗ ಖಂಡಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಭಾಗದ ರಾಜ್ಯಾಧ್ಯಕ್ಷ ಧರ್ಮಸೇನ, ಪ್ರಿಯಾಂಕ್ ಖರ್ಗೆ ಅವರ ಬೆಂಬಲಕ್ಕೆ ದಲಿತ ಸಂಘಟನೆಗಳು ನಿಲ್ಲಲಿವೆ. ದಲಿತ ನಾಯಕರನ್ನು ಟಾರ್ಗೆಟ್ ಮಾಡುವ ಕೆಲಸವನ್ನು ಸರ್ಕಾರ ಬಿಡಬೇಕು. ದಲಿತ ನಾಯಕರು ಬೆಳೆಯದಂತೆ ಚಿವುಟುವ ಕೆಲಸವನ್ನು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿದೆ. ಇದು ಹೀಗೆಯೇ ಮುಂದುವರೆದರೆ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು. ಗುಜರಾತ್‌ನಲ್ಲಿ ದಲಿತ ಮುಖಂಡರೂ ಆಗಿರುವ ಶಾಸಕ ಜಿಗ್ನೇಶ್ ಮೇವಾನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟ್ವೀಟ್ ಮಾಡಿದ್ದಕ್ಕೆ ರಾತ್ರೋರಾತ್ರಿ ಪೊಲೀಸರು ಬಂಧಿಸಿದ್ದಾರೆ. ಇದು ಸಂವಿಧಾನಕ್ಕೆ ವಿರೋಧವಾದುದು. ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಬಿಜೆಪಿಯ ಜಾತಿವಾದಿ ಮನಸ್ಥಿತಿಯನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುತ್ತದೆ ಎಂದು ಆರೋಪಿಸಿದರು.
ಜಿಗ್ನೇಶ್ ಮೇವಾನಿ ಬಂಧನ ಖಂಡಿಸಿ, ಬಿಡುಗಡೆಗೆ ಆಗ್ರಹಿಸಿ ದಸಂಸ ಪ್ರತಿಭಟನೆ
ಪ್ರಗತಿಪರ ಹೋರಾಟಗಾರ ಜಿಗ್ನೇಶ್ ಮೇವಾನಿ ಬಂಧನ ಖಂಡಿಸಿ, ಅವರ ಬಿಡುಗಡೆಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯವರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಗುರುವಾರ ಪ್ರತಿಭಟಿಸಿದರು.ಜಿಗ್ನೇಶ್ ಮೇವಾನಿ ಅವರ ಬಂಧನ ಅಭಿವ್ಯಕ್ತಿ ಸ್ವಾತಂತ್ರ್ಯದ ಬಂಧನವಾಗಿದೆ. ದೇಶದಲ್ಲಿ ಶಾಂತಿ ಸೌಹಾರ್ದತೆ ಕದಡುತ್ತಾ ಕೋಮುಗಲಭೆ ಸೃಷ್ಟಿಸುವ ಗಲಭೆಕೋರರನ್ನು ಹತ್ತಿಕ್ಕದೇ, ಕೋಮು ಸೌಹಾರ್ದತೆಗೆ ಮನವಿ ಮಾಡುವ ಪ್ರಗತಿಪರ ಹೋರಾಟಗಾರ ಜಿಗ್ನೇಶ್ ಮೆವಾನಿಯವರ ಬಂಧಿಸಿರುವುದು ಸರಿಯಲ್ಲ ಎಂದು ಅವರು ಖಂಡಿಸಿದರು.
