ಅಹಮ್ಮದಾಬಾದ್(ಡಿ.05):  ಕೊರೋನಾ ವೈರಸ್ ಕಾರಣ ಆಸ್ಪತ್ರೆ ದಾಖಲಾಗಿದ್ದ ಗುಜರಾತ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜಿಆರ್ ಉಧ್ವಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.  59 ವರ್ಷದ ಮುಖ್ಯನ್ಯಾಯಮೂರ್ತಿ ಜಿಆರ್ ಉಧ್ವಾನಿ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ರಾಜ್ಯದ ಒಪ್ಪಿಗೆ ಇಲ್ಲದೆ CBI ಅಧಿಕಾರ ವ್ಯಾಪ್ತಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್!..

ನವೆಬರ್ 19 ರಂದು ನ್ಯಾಯಮೂರ್ತಿ ಉಧ್ವಾನಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಹೀಗಾಗಿ ಅಹಮ್ಮದಾಬಾದ್‌ನ SAL ಆಸ್ಪತ್ರೆಗೆ ನವೆಂಬರ್ 22 ರಂದು ದಾಖಲಾಗಿದ್ದರು. ತೀವ್ರ ನಿಘಾ ಘಟಕದಲ್ಲಿ ಉಧ್ವಾನಿ ಅವರಿಗೆ ಚಿಕಿತ್ಸೆ  ನೀಡಲಾಗುತ್ತಿತ್ತು.

ಶ್ವಾಸಕೋಶದಲ್ಲಿ ಸೋಂಕು ತೀವ್ರವಾಗಿ ಕಾಣಿಸಿಕೊಂಡು ಉಸಿರಾಟದ ಸಮಸ್ಯೆ ಎದುರಿಸಿದ ಉಧ್ವಾನಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಡಿಸೆಂಮಬರ್ 3 ರಿಂದ ವೆಂಟಿಲೇಟರ್ ನೆರವು ನೀಡಲಾಗಿತ್ತು. ಮುಖ್ಯನ್ಯಾಯಮೂರ್ತಿ ಆರೋಗ್ಯ ತೀವ್ರವಾಗಿ ಕ್ಷೀಣಿಸಿತ್ತು. ಇಂದು(ಡಿ.05) ಬೆಳಗ್ಗೆ 7 ಗಂಟೆಗೆ ಹೃದಯಘಾತವಾಗಿದೆ. ಬೆಳಗ್ಗೆ 7.40ಕ್ಕೆ ಮುಖ್ಯನ್ಯಾಯಮೂರ್ತಿ ಜಿಆರ್ ಉಧ್ವಾನಿ ನಿಧನರಾಗಿದ್ದಾರೆ. 

2012ರಲ್ಲಿ ಜಿಆರ್ ಉಧ್ವಾನಿ ಗುಜರಾತ್ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2014ರಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿ ಜವಾಬ್ದಾರಿ ವಹಿಸಿಕೊಂಡರು.