ಅಹಮದಾಬಾದ್‌ (ನ. 07): ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ರಾಜ್ಯಪಾಲರು ಸೇರಿದಂತೆ ವಿವಿಐಪಿಗಳ ಪ್ರಯಾಣಕ್ಕೆಂದೇ ಗುಜರಾತ್‌ ರಾಜ್ಯ ಸರ್ಕಾರ 191 ಕೋಟಿ ರು. ಮೌಲ್ಯದ ಹೊಸ ವಿಮಾನ ಖರೀದಿ ಮಾಡಿದೆ.

ಬಾಂಬಾರ್ಡಿಯರ್‌ ಚಾಲೆಂಜರ್‌ 650 ಎಂಬ 2 ಎಂಜಿನ್‌ನ ವಿಮಾನವನ್ನು ಸರ್ಕಾರ ಖರೀದಿ ಮಾಡಿದ್ದು, ಇನ್ನು ಒಂದೆರಡು ವಾರಗಳಲ್ಲಿ ಕೈ ಸೇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೊಸ ವಿಮಾನದಲ್ಲಿ ಒಟ್ಟು 12 ಮಂದಿ ಪ್ರಯಾಣಿಸಬಹುದಾಗಿದ್ದು, ಏಳು ಸಾವಿರ ಕಿ.ಮಿ ಎತ್ತರದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ. ಗಂಟೆಗೆ 870 ಕಿ.ಮಿ ವೇಗದಲ್ಲಿ ಹಾರಬಲ್ಲ ಸಾಮರ್ಥ್ಯ ಇರುವ ಇದರ ಒಂದು ಗಂಟೆಯ ವೆಚ್ಚ ಒಂದು ಲಕ್ಷಕ್ಕಿಂತ ಅಧಿಕ ಎಂದು ಅಂದಾಜಿಸಲಾಗಿದೆ.