Asianet Suvarna News Asianet Suvarna News

50 ಕಿ.ಮೀ ರೋಡ್ ಶೋ ನಡುವೆ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಪ್ರಧಾನಿ ಮೋದಿ!

ಪ್ರಧಾನಿ ನರೇಂದ್ರ ಮೋದಿ ಗುಜರಾತ್‌ನ ಅಹಮ್ಮದಾಬಾದ್‌ನಲ್ಲಿ 16 ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 50 ಕಿಲೋಮೀಟರ್ ರೋಡ್ ಶೋ ನಡೆಸಿದ್ದಾರೆ. ತಮ್ಮ ರೋಡ್‌ಶೋ ನಡುವೆ ತಮ್ಮ ವಾಹನ ನಿಲ್ಲಿಸಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. 
 

Gujarat Election 2022 PM Modi stops convoy during a roadshow Gandhinagar from Ahmedabad to give way to an ambulance ckm
Author
First Published Dec 1, 2022, 8:46 PM IST

ಅಹಮ್ಮದಾಬಾದ್(ಡಿ.01): ಗುಜರಾತ್ ಮೊದಲ ಹಂತದ ಮತದಾನ ನಡೆದಿದೆ. ಇದೀಗ ಎರಡನೇ ಹಂತದ ಮತದಾನಕ್ಕೆ ಬಿರುಸಿನ ತಯಾರಿಗಳು, ಪ್ರಚಾರ ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಹಮ್ಮದಬಾದ್‌ನ 16 ವಿಧಾಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. 50 ಕಿಲೋಮೀಟರ್ ರೋಡ್‌ಶೋ ನಡೆಸಿದ್ದಾರೆ. ಎರಡೂ ಬದಿಗಳಲ್ಲಿ ಕಿಕ್ಕಿರಿದು ಜನ ನಿಂತು ಮೋದಿ ಮೋದಿ ಘೋಷಣೆ ಕೂಗಿದ್ದಾರೆ. ಅದ್ದೂರಿ ಸ್ವಾಗತ ಕೋರಿದ್ದಾರೆ. ಜನರಿಂದ ಕಿರಿದಾದ ದಾರಿಯಲ್ಲಿ ಮೋದಿ ಸಾಗುತ್ತಿದ್ದ ವೇಳೆ ಇದೇ ದಾರಿಯಲ್ಲಿ ತುರ್ತು ಸೇವೆಯೊಂದಿಗೆ ಆ್ಯಂಬುಲೆನ್ಸ್ ಸಾಗಿ ಬಂದಿದೆ. ತಕ್ಷಣ ಕಾರ್ಯಪ್ರವೃತ್ತರಾದ ಮೋದಿ, ತಮ್ಮ ವಾಹನವನ್ನು ಬದಿಯಲ್ಲಿ ನಿಲ್ಲಿಸಲು ಸೂಚಿಸಿದ್ದಾರೆ. ಬಳಿಕ ಮೋದಿ ಅಂಗರಕ್ಷಕರಿಗೆ ಸೂಚನೆ ನೀಡಿದ್ದಾರೆ. ಈ ಮೂಲಕ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ.  ಆ್ಯಂಬುಲೆನ್ಸ್ ಮುಂದೆ ಸಾಗಲು ಅನುವು ಮಾಡಿಕೊಟ್ಟ ಘಟನೆ ರೋಡ್‌ಶೋನಲ್ಲಿ ನಡೆದಿದೆ.

ಮೋದಿ ರೋಡ್ ಶೋ ನರೋದಾ ಗಾಮ್‌ನಿಂದ ಆರಂಭಗೊಂಡಿದೆ. ಗಾಂಧಿನಗರ ದಕ್ಷಿಣ ವಿಧಾಸಭಾ ಕ್ಷೇತ್ರದಲ್ಲಿ ಈ ರೋಡ್ ಶೋ ಅಂತ್ಯಗೊಳ್ಳಲಿದೆ. ತಮ್ಮ 50 ಕಿಲೋಮೀಟರ್ ರೋಡ್‌ಶೋನಲ್ಲಿ 35 ಐತಿಹಾಸಿಕ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಮೋದಿ ಗೌರವ ಸೂಚಿಸಲಿದ್ದಾರೆ. ದೀನದಯಾಳ್ ಉಪಾಧ್ಯಯ, ಸರ್ದಾರ ವಲ್ಲಭಾಯ್ ಪಟೇಲ್, ಸುಭಾಷ್ ಚಂದ್ರಬೋಸ್ ಸ್ಮಾರಕಗಳಲ್ಲಿ ವಾಹನ ನಿಲ್ಲಿಸಿ ಮೋದಿ ನಮನ ಸಲ್ಲಿಸಲಿದ್ದಾರೆ. ಹೀಗೆ ವೇಗವಾಗಿ ಸಾಗುತ್ತಿದ್ದ ವೇಳೆ ಹಿಂಬದಿಯಿಂದ ಆ್ಯಂಬುಲೆನ್ಸ್ ಆಗಮಿಸಿದೆ.

PM Modi Reply Ravana Jibe: ಕಾಂಗ್ರೆಸ್‌ ಎಂದಿಗೂ ರಾಮನನ್ನು ನಂಬಿಲ್ಲ, ನನ್ನ ನಿಂದನೆಗೆ ರಾವಣನ ತಂದಿದ್ದಾರೆ!

ಈ ವೇಳೆ ಮೋದಿ ತಮ್ಮ ವಾಹನ ಬದಿಗೆ ನಿಲ್ಲಿಸಲು ಸೂಚಿಸಿದ್ದಾರೆ. ಇಷ್ಟೇ ಅಲ್ಲ ತಮ್ಮ ಬೆಂಗಾವಲು ವಾಹನವನ್ನು ಬದಿಗೆ ನಿಲ್ಲಿಸಿ ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಡಲು ಸೂಚಿಸಿದ್ದಾರೆ. ಮೋದಿ ಅಂಗರಕ್ಷಕರು ಆ್ಯಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

 

ಇಂದು ಗುಜರಾತ್‌ನಲ್ಲಿ ಮೊದಲ ಹಂತದ ಚುನಾವಣೆ ನಡೆದಿದೆ. ಎರಡನೇ ಹಂತದ ಚುನಾವಣೆ ಡಿಸೆಂಬರ್ 5 ರಂದು ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಹೊರಬೀಳಲಿದೆ.

Gujarat Elections 2022 ಪತ್ನಿ ರಿವಾಬ ಪರ ಪ್ರಚಾರ ಆರಂಭಿಸಿದ ರವೀಂದ್ರ ಜಡೇಜಾ; ಮೋದಿ ಭೇಟಿ ಮಾಡಿದ ತಾರಾ ಕ್ರಿಕೆಟಿಗ! 

ಗುಜರಾತ್ ಚುನಾವಣಾ ಸಮೀಕ್ಷೆ
ಈ ಬಾರಿ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಎಬಿಪಿ ನ್ಯೂಸ್‌ ನಡೆಸಿರುವ ಸಮೀಕ್ಷೆ ಅನ್ವಯ, ರಾಜ್ಯ ವಿಧಾನಸಭೆಯ 182 ಸ್ಥಾನಗಳ ಪೈಕಿ ಬಿಜೆಪಿ 134-142 ಸ್ಥಾನ ಗೆದ್ದು, ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ. ಮತ್ತೊಂದೆಡೆ ಎರಡೂವರೆ ದಶಕಗಳ ಬಳಿಕ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದ್ದ ಕಾಂಗ್ರೆಸ್‌ ಈ ಬಾರಿಯೂ ತೀವ್ರ ನಿರಾಸೆ ಅನುಭವಿಸಲಿದೆ. ಪಕ್ಷ ಕೇವಲ 28-36 ಸ್ಥಾನಗಳನ್ನು ಗೆಲ್ಲಿದೆ. ಇನ್ನೊಂದೆಡೆ ದೆಹಲಿ, ಪಂಜಾಬ್‌ ಬಳಿಕ ಗುಜರಾತ್‌ನಲ್ಲೂ ಅಧಿಕಾರಕ್ಕೆ ಏರುವ ಕನಸು ಕಾಣುತ್ತಿದ್ದ ಆಪ್‌ಗೂ ನಿರಾಶೆ ಕಾದಿದೆ. ಭಾರೀ ಪ್ರಚಾರದ ಹೊರತಾಗಿಯೂ ಆಪ್‌ ಕೇವಲ 7-15 ಸ್ಥಾನಗಳಿಗೆ ತೃಪ್ತಿಪಡಬೇಕಾಗಿ ಬರಲಿದೆ. ಇತರೆ ಪಕ್ಷಗಳು 0-2 ಸ್ಥಾನಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆ ಅಂದಾಜಿಸಿದೆ.

Follow Us:
Download App:
  • android
  • ios