ಗಾಂಧೀನಗರ (ಫೆ. 29): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ 3 ಗಂಟೆಗಳ ಅಹಮದಾಬಾದ್‌ ಭೇಟಿಗೆ ಸರ್ಕಾರ 100 ಕೋಟಿ ರು. ವೆಚ್ಚ ಮಾಡಿದೆ ಎಂಬ ವಿಪಕ್ಷಗಳ ಆರೋಪವನ್ನು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ತಳ್ಳಿ ಹಾಕಿದ್ದಾರೆ.

ಟ್ರಂಪ್‌ ಭೇಟಿಯಿಂದ ದೇಶಕ್ಕಾದ ಲಾಭವೇನು?

ಈ ಬಗ್ಗೆ ರಾಜ್ಯ ವಿಧಾನಸಭೆಗೆ ಮಾಹಿತಿ ನೀಡಿರುವ ಅವರು, ಟ್ರಂಪ್‌ ಭೇಟಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ರಾಜ್ಯ ಸರ್ಕಾರ 8 ಕೋಟಿ ರು. ಬಿಡುಗಡೆ ಮಾಡಿತ್ತು. ಇದರ ಜೊತೆಗೆ ಅಹಮದಾಬಾದ್‌ ಮಹಾನಗರ ಪಾಲಿಕೆ 4.5 ಕೋಟಿ ರು.ಗಳನ್ನು ಬಿಡುಗಡೆ ಮಾಡಿತ್ತು. ಮೊಟೆರಾ ಸ್ಟೇಡಿಯಂ ಬಳಿ ರಸ್ತೆಗೆ ಹಿಂದೆಯೇ ಹಣ ಬಿಡುಗಡೆ ಆಗಿತ್ತು ಎಂದಿದ್ದಾರೆ.

ಫೆಬ್ರವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ