ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ನಾಯಕ, ಸಚಿವ ಪೂರ್ಣೇಶ್ ಮೋದಿ ಮನವಿ ಸಲ್ಲಿಸಿದ್ದಾರೆ.
ನವದೆಹಲಿ: ಮೋದಿ ಉಪನಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಬಿಜೆಪಿ ನಾಯಕ, ಸಚಿವ ಪೂರ್ಣೇಶ್ ಮೋದಿ ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ್ದ ನೋಟಿಸ್‌ಗೆ ಉತ್ತರಿಸಿದ ಪೂರ್ಣೇಶ್, ತಮ್ಮ ವಕೀಲರ ಮೂಲಕ 21 ಪುಟಗಳ ಲಿಖಿತ ಉತ್ತರವನ್ನು ಸಲ್ಲಿಸಿದ್ದಾರೆ.
ರಾಹುಲ್ ಗಾಂಧಿ ಅವರ ಹೇಳಿಕೆಯಿಂದ ಗುಜರಾತ್‌ನಲ್ಲಿರುವ ‘ಮೋದಿ ವಾನಿಕ್’ ಸಮುದಾಯದವರಿಗೆಲ್ಲಾ ಅವಮಾನವಾಗಿದೆ. ಹಾಗಾಗಿ ಈ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆಯಾಗಬೇಕಿರುವುದು ಸರಿಯಿದೆ. ರಾಹುಲ್ ಮೇಲ್ಮನವಿಯನ್ನು ಕೋರ್ಟ್ ವಜಾ ಮಾಡಬೇಕು ಎಂದು ಕೋರಿದ್ದಾರೆ. ಹಲವು ಅಪರೂಪದ ಪ್ರಕರಣಗಳಲ್ಲಿ ಶಿಕ್ಷೆಗೆ ತಡೆ ನೀಡಲಾಗುತ್ತದೆ. ಆದರೆ ರಾಹುಲ್ ಗಾಂಧಿ ಪ್ರಕರಣ ಈ ಗುಂಪಿಗೆ ಸೇರುವುದಿಲ್ಲ. ಈ ಪ್ರಕರಣದಲ್ಲಿ ನ್ಯಾಯಾಲಯ ನೀಡಿರುವ ತೀರ್ಪು ದೋಷಾತೀತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ವೈಯಕ್ತಿಕ ದ್ವೇಷದಿಂದ ಈ ಮಾತನ್ನು ರಾಹುಲ್ ಆಡಿದ್ದಾರೆ. ಆದರೆ ಇದಕ್ಕಾಗಿ ಮೋದಿ ಹೆಸರಿನ ಉಪನಾಮ ಹೊಂದಿರುವ ಎಲ್ಲರನ್ನು ಅವಮಾನಿಸುವುದು ತಪ್ಪು. ಹಾಗಾಗಿ ರಾಹುಲ್‌ಗಾಂಧಿಗೆ ನೀಡಿರುವ ಶಿಕ್ಷೆಗೆ ಯಾವುದೇ ಅನುಕಂಪ ತೋರಿಸಬಾರದು’ ಎಂದು ಅವರು ಹೇಳಿದ್ದಾರೆ.
ರಾಹುಲ್ ಕೇಸ್: ಪೂರ್ಣೇಶ್ ಮೋದಿ, ಗುಜರಾತ್ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಸೂರತ್ ಕೋರ್ಟ್ ನೀಡಿದ್ದ ಶಿಕ್ಷೆಯನ್ನು ಗುಜರಾತ್ ಹೈಕೋರ್ಟ್ ಎತ್ತಿಹಿಡಿದಿದ್ದ ಕಾರಣ ರಾಹುಲ್ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಆ.4ರಂದು ಈ ಅರ್ಜಿಯ ವಿಚಾರಣೆ ನಡೆಯಲಿದೆ.
