ಗುಜರಾತಲ್ಲಿ 6 ತಿಂಗಳಲ್ಲಿ ಹೃದಯಾಘಾತಕ್ಕೆ 1052 ಬಲಿ: ಶೇ.80ರಷ್ಟು ಜನ 11ರಿಂದ 25ರ ವಯಸ್ಸಿನವರು

ಗುಜರಾತ್‌ ರಾಜ್ಯದಲ್ಲಿ ಕಳೆದ 6 ತಿಂಗಳಿನಲ್ಲಿ ಹೃದಯಾಘಾತಕ್ಕೆ 1,052 ಮಂದಿ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ಮೃತಪಟ್ಟವರಲ್ಲಿ ಶೇ.80ರಷ್ಟು ಮಂದಿ 11ರಿಂದ 25 ವರ್ಷದ ವಯೋಮಾನದವರು ಎಂದು ಸಚಿವ ಕುಬೇರ್‌ ದಿನೋದರ್‌ ಹೇಳಿದ್ದಾರೆ.

Gujarat 1052 killed by heart attacks in 6 months 80 of them are in the age group of 11 to 25 akb

ಅಹಮದಾಬಾದ್‌: ಕೋವಿಡ್‌ ಸಾಂಕ್ರಾಮಿಕದ ಬಳಿಕ ದೇಶದ ಯುವ ಸಮೂಹದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ ಎಂಬ ಆತಂಕಗಳ ನಡುವೆಯೇ, ಗುಜರಾತ್‌ ರಾಜ್ಯದಲ್ಲಿ ಕಳೆದ 6 ತಿಂಗಳಿನಲ್ಲಿ ಹೃದಯಾಘಾತಕ್ಕೆ 1,052 ಮಂದಿ ಬಲಿಯಾಗಿದ್ದಾರೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಅಲ್ಲದೇ ಮೃತಪಟ್ಟವರಲ್ಲಿ ಶೇ.80ರಷ್ಟು ಮಂದಿ 11ರಿಂದ 25 ವರ್ಷದ ವಯೋಮಾನದವರು ಎಂದು ಸಚಿವ ಕುಬೇರ್‌ ದಿನೋದರ್‌ ಹೇಳಿದ್ದಾರೆ.

ರಾಜ್ಯದಲ್ಲಿ ಹೃದಯಾಘಾತದ (Heart Attack) ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳ ಸುಮಾರು 2 ಲಕ್ಷ ಶಿಕ್ಷಕರು ಮತ್ತು ಪ್ರಾಧ್ಯಾಪಕರಿಗೆ ಸಿಪಿಆರ್‌ ಮಾಡುವ ತರಬೇತಿಯನ್ನು ನೀಡಲಾಗಿದೆ. ವೈದ್ಯಕೀಯ ತುರ್ತು ಸಮಯದಲ್ಲಿ ಇದು ಸಹಾಯ ಒದಗಿಸಲಿದೆ ಎಂದು ಅವರು ಹೇಳಿದ್ದಾರೆ.

ಹೃದಯಾಘಾತದಿಂದ ಮತ್ತೆ ಮೂಡಿತು ಒಲವು; ಡಿವೋರ್ಸ್‌ ಆಗಿ ಐದು ವರ್ಷದ ನಂತ್ರ ಒಂದಾದ ಜೋಡಿ

ರಾಜ್ಯದಲ್ಲಿ ಯುವಜನತೆ ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಕ್ರಿಕೆಟ್‌ ಆಡುತ್ತಿರುವಾಗ ಮತ್ತು ಗರ್ಬಾ ನೃತ್ಯ ಮಾಡುತ್ತಿರುವಾಗ ಯುವಕರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹೀಗಾಗಿ ಪ್ರತಿಯೊಬ್ಬ ಶಿಕ್ಷಕರಿಗೂ ಸಿಪಿಆರ್‌ (CPR) ತರಬೇತಿಯಲ್ಲಿ ಭಾಗಿಯಾಗುವಂತೆ ನಾನು ಮನವಿ ಮಾಡುತ್ತೇನೆ. ಇದರಿಂದ ಒಂದಷ್ಟು ಜೀವಗಳನ್ನು ಉಳಿಸಬಹುದು. ರಾಜ್ಯಾದ್ಯಂತ 37 ವೈದ್ಯಕೀಯ ಕಾಲೇಜುಗಳಲ್ಲಿ ಸಿಪಿಆರ್‌ ತರಬೇತಿ ಶಿಬಿರಗಳನ್ನು ಆಯೋಜಿಸಲಾಗಿದೆ ಎಂದು ಅವರು ಹೇಳಿದರು. ಈ ಮೊದಲು ಇಂತಹುದೇ ತರಬೇತಿಯನ್ನು ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರಿಗೆ ನೀಡಲಾಗಿತ್ತು.

ಮಗನ ಮದುವೆಗೆ ಸಂಬಂಧಿಕರನ್ನು ಅಹ್ವಾನಿಸಲು ಮೈಸೂರಿಗೆ ತೆರಳಿದ್ದ ತಂದೆ ಬಸ್‌ನಲ್ಲೇ ಹೃದಯಾಘಾತದಿಂದ ಸಾವು

Latest Videos
Follow Us:
Download App:
  • android
  • ios