ಆಯತಪ್ಪಿ ವರನ ಮೇಲೆ ಬಿದ್ದ ಸ್ನೇಹಿತ ವಿಡಿಯೋ ಇನ್ಸ್ಟಾಗ್ರಾಮ್‌ನಲ್ಲಿ ವೈರಲ್ ಮದುವೆಯ ಸುಂದರ ಮೋಜಿನ ಕ್ಷಣವಿದು
ಮದುವೆ ಮನೆ ಎಂಬುದು ತಮಾಷೆ, ತುಂಟಾಟ, ಮೋಜಿಗೆ ಹೇಳಿ ಮಾಡಿಸಿದ ಜಾಗ ಅದರಲ್ಲೂ ಮದುವೆ ನಿಮ್ಮ ಸ್ನೇಹಿತ ಅಥವಾ ಸ್ನೇಹಿತೆಯದ್ದು ಆಗಿದ್ದಲ್ಲಿ ಕೇಳುವುದೇ ಬೇಡ ಅಲ್ಲಿನ ಮೋಜಿನ ಮಜವೇ ಬೇರೆ. ಹಾಗೆಯೇ ಇಲ್ಲೊಬ್ಬ ವರನ ಸ್ನೇಹಿತನ ಮದುವೆ ಮನೆಯಲ್ಲಿ ತಮಾಷೆ ಮಾಡುತ್ತಾ ಹಾಗೆಯೇ ಆಯತಪ್ಪಿ ಕೆಳಗೆ ಬಿದ್ದಿದ್ದು, ನೋಡುಗರು ನಗೆ ಗಡಲಲ್ಲಿ ತೇಲುವಂತೆ ಮಾಡಿದ್ದಾನೆ.
ಈ ವಿಡಿಯೋದಲ್ಲಿ ವರನ ಸ್ನೇಹಿತರಿಬ್ಬರು ಕೂತಿದ್ದ ವಧು ವರರ ಮೇಲೆ ನೋಟನ್ನು ಸುರಿಯುತ್ತಿರುತ್ತಾರೆ. ಈ ವೇಳೆ ನೋಟು ಸುರಿದಾದ ಮೇಲೆ ಓರ್ವ ವರ ಕೂತಿದ್ದ ಆಸನದ ಪಕ್ಕದ ಕೈ ಇಡುವಂತಹ ಸ್ಟ್ಯಾಂಡ್ ಮೇಲೆ ಕೂರಲು ಹೋಗಿದ್ದು , ಹಾಗೆಯೇ ಆಯತಪ್ಪಿ ಕೂತಿದ ಜೋಡಿಯ ಮೇಲೆ ತಲೆ ಕೆಳಗಾಗಿ ಬೀಳುತ್ತಾನೆ.. ಈ ವೇಳೆ ಸ್ನೇಹಿತರ ಈ ತುಂಟಾಟಕ್ಕೆ ಸಿಟ್ಟುಗೊಂಡಂತೆ ಕಾಣುವ ವರ ಇಲ್ಲಿಂದ ಹೊರಟುಹೋಗು ಎಂದು ಹೇಳುವಂತೆ ವಿಡಿಯೋದಲ್ಲಿ ಕಾಣುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ ನಗೆ ಉಕ್ಕಿಸುವಂತಿದೆ.
ಭಾರಿ ಹಿಮಪಾತದಿಂದ ರಸ್ತೆ ಸ್ಥಗಿತ... ಜೆಸಿಬಿ ಏರಿ ಮದುವೆ ಮನೆಗೆ ಬಂದ ವರ
ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ದಿವ್ಯ ಶರ್ಮಾ ಎಂಬ ಇನ್ಸ್ಟಾ ಖಾತೆಯಿಂದ ಅಪ್‌ಲೋಡ್ ಮಾಡಲಾಗಿದ್ದು, 152,995 ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಬಹುತೇಕರು ಈ ವಿಡಿಯೋಗೆ ನಗುವ ಇಮೋಜಿಯನ್ನು ಕಾಮೆಂಟ್ ಮಾಡಿದ್ದಾರೆ.
ಇಂದಿನ ದಿನಗಳಲ್ಲಿ ಮದುವೆಯ ಸಾಕಷ್ಟು ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರತಿದಿನ ಇಂತಹ ತಮಾಷೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಭಾರತೀಯ ಮದುವೆಗಳು ಬಹುತೇಕ ಖುಷಿಯ ಕ್ಷಣದಿಂದ ಕೂಡಿರುತ್ತದೆ. ಇನ್ನು ವಧು ವರನ ಸ್ನೇಹಿತರಂತು ಮದುವೆಗೆ ಬರುವುದೇ ಜೊತೆಯಾಗಿ ಸೇರಿ ಮೋಜು ಮಾಡಲು. ಅಲ್ಲದೇ ಮಜಾ ಮಾಡಲು ಸಿಗುವ ಯಾವ ಅವಕಾಶವನ್ನು ಮಿಸ್ ಮಾಡಲು ಅವರು ಬಯಸುವುದಿಲ್ಲ ಎಂದರೆ ತಪ್ಪಾಗಲಾರದು.
ಹೂ ಹಾರ ಹಾಕಿಸಿಕೊಳ್ಳೋ ವೇಳೆ ಹುಡುಗಾಟ... ಕೈಗೆ ಸಿಗದೆ ಕಾಡಿಸಿದ ವಧು
ಮನೆಯಲ್ಲಿ ಒಂದು ಮದುವೆ ನಡೆಯುತ್ತೆ ಅಂದ್ರೆ ಮದ್ವೆ ಆಗೋರಿಗಿಂತ ಜಾಸ್ತಿ ಖುಷಿ ಪಡುವವರು ಆಕೆಯ ಅಥವಾ ಆತನ ಅಣ್ಣ ತಮ್ಮಂದಿರು ಅಕ್ಕ ತಂಗಿಯರು ಸ್ನೇಹಿತರು. ಅವರೆಲ್ಲರಿಗೂ ಕುಟುಂಬದವರೊಂದಿಗೆ ಸೇರಿ ಸಂಭ್ರಮಿಸಲು ಒಂದು ಸುಸಂದರ್ಭ. ಇನ್ನು ವಧುವಿನ ತಂಗಿಯರ ಸಂಭ್ರಮಕ್ಕಂತು ಎಲ್ಲೆಯೇ ಇರುವುದಿಲ್ಲ. ಹಾಗೆಯೇ ಇಲ್ಲೊಂದು ಕಡೆ ಅಕ್ಕನ ಮದುವೆಯಲ್ಲಿ ತಂಗಿ ಹಾಗೂ ಆಕೆಯ ಸ್ನೇಹಿತರ ಜಬರ್ದಸ್ತ್ ಡಾನ್ಸ್ ಕೆಲ ದಿನಗಳ ಹಿಂದೆ ಎಲ್ಲೆಡೆ ವೈರಲ್ ಆಗಿತ್ತು
ವಧುವಿನ ಸ್ನೇಹಿತರು ಮತ್ತು ಸಹೋದರಿ, ರಣವೀರ್ ಸಿಂಗ್ (Ranveer Singh) ಮತ್ತು ಅನುಷ್ಕಾ ಶರ್ಮಾ (Anushka Sharma) ಅಭಿನಯದ 2010 ರ ಬ್ಯಾಂಡ್ ಬಾಜಾ ಬಾರಾತ್ (Band Baaja Baaraat) ಚಿತ್ರದ ಸುನಿಧಿ ಚೌಹಾಣ್ (Sunidhi Chauhan) ಮತ್ತು ಮಾಸ್ಟರ್ ಸಲೀಂ (Saleem) ಅವರು ಹಾಡಿರುವ ಐನ್ವಯಿ ಐನ್ವಯಿ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದರು.
ವಧುವಿನ ಮೆಹಂದಿ ದಿನ ಚಿತ್ರೀಕರಣಗೊಂಡ ವಿಡಿಯೋ ಇದಾಗಿದೆ. ವಿಡಿಯೋದಲ್ಲಿರುವ ಹೆಣ್ಣು ಮಕ್ಕಳೆಲ್ಲ ಸುಂದರವಾದ ಬಣ್ಣಗಳ ಭಾರತೀಯ ಶೈಲಿಯ ಉಡುಗೆಯಲ್ಲಿ ಮಿಂಚುತ್ತಿದ್ದಾರೆ. ಜೊತೆಗೆ ಮದುವೆಗೆ ಮಾಡಿದ್ದ ಸುಂದರವಾದ ಅಲಂಕಾರ (decoration) ಕೂಡ ವಿಡಿಯೋದಲ್ಲಿ ಗಮನ ಸೆಳೆಯುತ್ತಿದೆ. ಇತ್ತ ಇವರ ಸರ್‌ಪ್ರೈಸ್ ಡಾನ್ಸ್‌ಗೆ ಕುಟುಂಬ ಹಾಗೂ ಸ್ನೇಹಿತರು ಪ್ರೋತ್ಸಾಹಿಸಿ ಚಪ್ಪಾಳೆ ತಟ್ಟುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಇತ್ತ ಡಾನ್ಸ್ ಮಾಡುತ್ತಿರುವ ಹುಡುಗಿಯರು ಕೂಡ ಸಖತ್ ಆಗಿ ಸ್ಟೆಪ್ ಹಾಕುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.