ಹಾರ ಬದಲಿಸ್ಕೊಂಡು ವರ ಮಾಡಿದ ಕೆಲಸಕ್ಕೆ ಹೆಣ್ಮಕ್ಕಳು ಫುಲ್ ಖುಷ್; ಕಾರ್ಪೋರೇಟ್ ಗಂಡ ಅಂದ್ರು ಗಂಡೈಕ್ಳು

ಮದುವೆಯಲ್ಲಿ ವರನೊಬ್ಬ ಹಾರ ಬದಲಿಸಿದ ವಿಧಾನ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರನ ವರ್ತನೆಗೆ ಮೆಚ್ಚುಗೆ ವ್ಯಕ್ತವಾಗಿದೆ. ಕೆಲವರು ಇವರನ್ನು 'ಕಾರ್ಪೋರೇಟ್ ಗಂಡ' ಎಂದು ತಮಾಷೆಯಾಗಿ ಕರೆದಿದ್ದಾರೆ.

Groom Welcomes his life partner after garland Exchange Watch video mrq

ಬೆಂಗಳೂರು: ಮದುವೆಗೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಮದುವೆಯಲ್ಲಿ ವರ ಮತ್ತು ವಧು ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿರುತ್ತಾರೆ. ಅದರಲ್ಲಿಯೂ ವಧು ಮತ್ತು ವರ ಹೇಗೆ ನಡೆದುಕೊಳ್ಳುತ್ತಾರೆ ಎಂಬುದರ ಮೇಲೆ ಜೋಡಿಯ ಜೀವನ ಹೇಗಿರುತ್ತೆ ಎಂಬುದನ್ನು ಜಡ್ಜ್ ಮಾಡೋ ಜನರು ಇರುತ್ತಾರೆ. ಕಳೆದ ಕೆಲವು ದಿನಗಳಿಂದ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವರನ ಕೆಲಸ ಕಂಡು ವಿಶೇಷವಾಗಿ ಮಹಿಳೆಯರು ಫುಲ್ ಖುಷಿಯಾಗಿದ್ದು, ಇವನು ಒಳ್ಳೆಯ ಪತಿ ಆಗತ್ತಾನೆ ಎಂದು ಭವಿಷ್ಯ ನುಡಿದಿದ್ದಾರೆ. ಆದ್ರೆ ಪುರುಷರು ಮಾತ್ರ, ಈತ ಕಾರ್ಪೋರೇಟ್ ಗಂಡ ನಗೆ ಚಟಾಕಿ ಹಾರಿಸಿದ್ದಾರೆ. 

ಈ ವಿಡಿಯೋ ನೋಡಿದ ನೆಟ್ಟಿಗರು, ಅತ್ಯಂತ ಗೌರವಾನ್ವಿತ ರೀತಿಯಲ್ಲಿ ಇಬ್ಬರು ಹಾರ ಬದಲಿಸಿಕೊಂಡಿರುವುದು ತುಂಬಾ ಇಷ್ಟವಾಯ್ತು. ಕೆಲವು ಮದುವೆಯಲ್ಲಿ ವಧು ಮತ್ತು ವರನನ್ನು ಎತ್ತಿಕೊಂಡು ತಮಾಷೆ ಮಾಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ. ಇಂತಹ ಜನರಿಂದಲೇ ಮದುವೆ ಮೇಲಿನ ನಂಬಿಕೆ ಇನ್ನೂ ಜೀವಂತವಾಗಿದೆ. ವರ ಹಾರವನ್ನು ವಧವಿಗೆ ಹಾಕಿದಲ್ಲದೇ, ಅದನ್ನು ಸರಿಯಾಗಿ ಹೊಂದಿಸಿದ ರೀತಿ ಅದ್ಭುತವಾಗಿತ್ತು. ಇದು ವರ ಸರಳತೆ ಗೊತ್ತಾಗುತ್ತದೆ ಎಂದು ನೆಟ್ಟಿಗರು ಕಮೆಂಟ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ: ವಧು ಕಣ್ಣೀರಿಟ್ಟು ಹೇಳಿದ್ದನ್ನು ನೋಡಿ ವರ ಶಾಕ್; ಇಲ್ಲೇ ಹಿಂಗೆ, ಮುಂದೆ ಹೆಂಗೆ ಎಂದ ನೆಟ್ಟಿಗರು

ವೈರಲ್ ವಿಡಿಯೋದಲ್ಲಿ ಏನಿದೆ? 
ವಧು ಮೇಲೆ ಅಕ್ಷತೆ ಹಾಕುವ ವರ, ಕೈಯಲ್ಲಿದ್ದ ಹೂವಿನ ಮಾಲೆಯನ್ನು ಕೊರಳಿಗೆ ಹಾಕುತ್ತಾನೆ. ಹಾರ ಹಾಕೋದು ಮಾತ್ರವಲ್ಲ, ಅದನ್ನು ಸರಿಯಾಗಿ ಹೊಂದಿಸಿರೋದನ್ನು ವಿಡಿಯೋದಲ್ಲಿ ಗಮನಿಸಬಹುದು. ನಂತರ ಒಂದು ಹೆಜ್ಜೆ ಹಿಂದೆ ಇಡುತ್ತಿದ್ದಂತೆ, ಅಯ್ಯೋ ಅಂದುಕೊಂಡು ವಧುವಿಗೆ ಹಸ್ತಲಾಘವ ಮಾಡುತ್ತಾನೆ. ವಧು ಸಹ ಅತ್ಯಂತ ಖುಷಿಯಿಂದ ಹಸ್ತ ಲಾಘವ ಮಾಡುತ್ತಾರೆ. ಸುತ್ತಲಿದ್ದ ಜನರು ನವಜೋಡಿ  ಮೇಲೆ ಹೂಮಳೆ ಸುರಿಸಿ ಚಪ್ಪಾಳೆ ತಟ್ಟಿದ್ದಾರೆ. 

ಈ ಸುಂದರವಾದ ವಿಡಿಯೋವನ್ನು ವೆಡ್ಡಿಂಗ್ ಪ್ಲಾನರ್ ಸರ್ವಿಸ್‌ ಆಗಿರುವ The Da Vinci Event Planners ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ 1.75 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಹಲವು ಕಮೆಂಟ್‌ಗಳನ್ನು ಪಡೆದುಕೊಂಡಿದೆ. ಬಹುಶಃ ವರ ಕಾಪೋರೇಟ್ ಕಂಪನಿಯ ಉದ್ಯೋಗಿಯಾಗಿರಬೇಕು. ಅದಕ್ಕೆ ತನ್ನ ಕೆಲಸ ಮುಗಿದ ಕೂಡಲೇ ಶೇಕ್ ಹ್ಯಾಂಡ್ ಮಾಡಿದ್ದಾನೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.  ಮತ್ತೊಬ್ಬರು ಹೊಸ ಜೀವನಕ್ಕೆ ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾನೆ ಎಂದು ಕಮೆಂಟ್ ಸಹ ಮಾಡಿದ್ದಾರೆ.

ಇದನ್ನೂ ಓದಿ: ಪ್ರವಾಸಿ ಮಹಿಳೆಗೆ ಕಾಶ್ಮೀರದಲ್ಲಿ ಸಿಕ್ತು ಕ್ಯೂಟ್ ಮಗು; ವಿಡಿಯೋ ನೋಡಿ ಭಾವುಕರಾದ ನೆಟ್ಟಿಗರು

Latest Videos
Follow Us:
Download App:
  • android
  • ios