ರಾಹುಲ್ ಬದಲು ಮೋದಿಗೆ ಮತ ಹಾಕಿದ ಗ್ರೂಕ್ ಎಐ, ಭಾರಿ ಸಂಚಲನ ಸೃಷ್ಟಿಸಿದ ಚಾಟ್‌ಬಾಟ್ ಆಯ್ಕೆ, ಎಲಾನ್ ಮಸ್ಕ್ ಮಾಲೀಕತ್ವದ ಎಐ ಚಾಟ್‌ಬಾಟ್ Grok ಕುಟುಂಬ ರಾಜಕಾರಣಕ್ಕಿಂತ ಅಭಿವೃದ್ಧಿ ರಾಜಕಾರಣಕ್ಕೆ ಮಣೆ ಹಾಕಿದೆ. 

ನವದೆಹಲಿ (ಏ.26) ಪಂಚ ರಾಜ್ಯಗಳ ಚನಾವಣೆ ಅಂತಿಮ ಹಂತದಲ್ಲಿದೆ. ಇತ್ತ ಮುಂಬರವು ಲೋಕಸಭೆ ಚುನಾವಣೆಗೆ ಕಾಂಗ್ರೆಸ್, ಇಂಡಿಯಾ ಒಕ್ಕೂಟ ಭಾರಿ ತಯಾರಿ ನಡೆಸುತ್ತಿದೆ. ಇದರ ಜೊತೆಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಪ್ರಯತ್ನಗಳು ನಡೆಯುತ್ತಿದೆ. ಇದರ ನಡುವೆ ಎಲಾನ್ ಮಸ್ಕ್ ಮಾಲೀಕತ್ವದ ಗ್ರೊಕ್ (Grok) ಎಐ ಚಾಟ್‌ಬಾಟ್ ಮಾಡಿದ ಆಯ್ಕೆ ರಾಜಕೀಯವಾಗಿ ಭಾರಿ ಕೋಲಾಹಲ ಸೃಷ್ಟಿಸಿದೆ. ಗ್ರೂಗ್‌ಗೆ ಬಳಕೆದಾರನೊಬ್ಬ ಕೇಳಿದ ಪ್ರಶ್ನೆಗೆ ಎಐ ಚಾಟ್‌ಬಾಟ್ ತಾನು ಪ್ರಧಾನಿ ನರೇಂದ್ರ ಮೋದಿಗೆ ಮತ ಹಾಕುವುದಾಗಿ ಹೇಳಿ ಭಾರಿ ಸಂಚಲನ ಸೃಷ್ಟಿಸಿದೆ.

ಸಾಮಾಜಿ ಜಾಲತಾಣವಾಗಿರುವ ಎಕ್ಸ್ (ಟ್ವಿಟರ್) ಮೂಲಕ ಬಳಕೆದಾರನೊಬ್ಬ ಎಐ ಚಾಟ್‌ಬಾಟ್ ಗ್ರೊಕ್‌ಗೆ ಪ್ರಶ್ನೆಯೊಂದನ್ನು ಕೇಳಿದ್ದ. ಗ್ರೊಕ್ ಭಾರತೀಯ ಪ್ರಜೆಯಾಗಿದ್ದರೆ, ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿ ಅಥವಾ ರಾಹುಲ್ ಗಾಂಧಿ ಯಾರಿಗೆ ಮತ ಹಾಕುತ್ತಿದ್ದೆ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾನೆ. ಇದಕ್ಕೆ ಗ್ರೂಕ್ ಕಾರಣ ಸಮೇತ ಉತ್ತರ ನೀಡಿದೆ.

ಗ್ರೂಗ್ ನೀಡಿದ ಉತ್ತರ

ತಕ್ಷಣವೇ ಗ್ರೂಕ್ ಪ್ರಧಾನಿ ಸ್ಥಾನಕ್ಕೆ ನರೇಂದ್ರ ಮೋದಿಗೆ ಮತ ಹಾಕುವುದಾಗಿ ಹೇಳಿದೆ. ಜೊತೆಗೆ ಇದಕ್ಕೆ ಕಾರಣನ್ನು ಹೇಳಿದೆ. ರಸ್ತೆ, ರೈಲ್ವೇ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಭಾರತದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ, ವಿಶ್ವದಲ್ಲಿ ಐದನೇ ಆರ್ಥಿಕತೆಯಾಗಿ ಹೊರಹೊಮ್ಮಿರುವ ಭಾರತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಭಾವ ಹಾಗೂ ಗೌರವ ಸೇರಿದಂತೆ ಕೆಲ ಕಾರಣಗಳನ್ನು ಗ್ರೂಕ್ ನೀಡಿದೆ.

ಕುಟುಂಬ ರಾಜಕೀಯಕ್ಕಿಂತ ಅಭಿವೃದ್ಧಿ ರಾಜಕೀಯ

ಮೋದಿಗೆ ಮತಹಾಕಲು ಗ್ರೂಕ್ ಹಲವು ಕಾರಣ ನೀಡಿದೆ. ಈ ಪೈಕಿ ನೀಡಿದ ಒಂದು ಕಾರಣ ಇದೀಗ ಎಲ್ಲರ ಗಮನಸೆಳೆದಿದೆ. ಪ್ರಮುಖವಾಗಿ ಗ್ರೂಕ್ Data over Dynasties ( ಕುಟುಂಬ ರಾಜಕಾರಣದ ಬದಲು ಅಂಕಿ ಅಂಶ) ಎಂದಿದೆ. ಅಂದರೆ ಕುಟುಂಬ ರಾಜಕಾರಣಕ್ಕಿಂದ ಅಭಿವೃದ್ಧಿ ಮಾಡಿ ಅಂಕಿ ಅಂಶಗಳಲ್ಲಿ, ದಾಖಲೆಗಳಲ್ಲಿ ವ್ಯಕ್ತವಾಗಿರುವ ರಾಜಕೀಯಕ್ಕೆ ಮತ ಹಾಗುವುದಾಗಿ ಗ್ರೂಕ್ ಹೇಳಿದೆ. ಮೋದಿ ಕಾರ್ಯಕ್ಷಮೆತೆ, ಆಡಳಿತ, ಪಾರದರ್ಶಕತೆಗೆ ಗ್ರೂಕ್ ಮತ ನೀಡಿದೆ.

ರಾಹುಲ್ ಗಾಂಧಿ ಜನರ ಸಮಸ್ಯೆ, ಕಲ್ಯಾಣದ ಬಗ್ಗೆ ಭಾಷಣದಲ್ಲಿ ಹೇಳಿದ್ದಾರೆ. ಆದರೆ ಅಭಿವೃದ್ಧಿ, ತಂತ್ರಜ್ಞಾನ, ಯುಪಿಐ ಬಳಕೆ, ಡಿಜಿಟಲ್ ಇಂಡಿಯಾ, ಉದ್ಯೋಗ ಸೃಷ್ಟಿ, ಜಾಗತಿಕ ರೇಟಿಂಗ್ ಗಮನಿಸಿದರೆ, ಮೋದಿ ಹೆಚ್ಚು ಪರಿಣಾಮಕಾರಿ ಎಂದು ಗ್ರೂಕ್ ಹೇಳಿದೆ. ಗ್ರೂಕ್ ಉತ್ತರ ಇದೀಗ ರಾಜಕೀಯವಾಗಿ ಭಾರಿ ಸಂಚಲನ ಸಷ್ಟಿಸಿದೆ. ಕಾಂಗ್ರೆಸ್ ಬೆಂಬಲಿಗರನ್ನು ಅಸಮಾಧಾನಗೊಳಿಸಿದರೆ, ಬಿಜೆಪಿ ಬೆಂಬಲಿಗರು ಸಂಭ್ರಮದಲ್ಲಿ ತೊಡಗಿದ್ದಾರೆ.