Punjab: ಪಠಾಣ್‌ಕೋಟ್ ಸೇನಾ ಶಿಬಿರದ ಬಳಿ ಗ್ರೆನೇಡ್ ಸ್ಫೋಟ!
*ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ
*ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿರವ ಪೋಲಿಸ್
*ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ
ಪಠಾಣ್‌ಕೋಟ್(ನ.22): ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿರುವ (Pathankot) ಸೇನಾ ಶಿಬಿರದ ತ್ರಿವೇಣಿ ಗೇಟ್ ಬಳಿ ಗ್ರೆನೇಡ್ ಸ್ಫೋಟ (grenade blast) ಸಂಭವಿಸಿದೆ ಹಾಗೂ ಸ್ಫೋಟದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪಠಾಣ್‌ಕೋಟ್‌ನ ಎಸ್‌ಎಸ್‌ಪಿ (SSP) ಸುರೇಂದ್ರ ಲಂಬಾ ಹೇಳಿದದ್ದಾರೆ. ಪೋಲಿಸ್ ಮಾಹಿತಿಯ ಪ್ರಕಾರ ಶಿಬಿರದ ತ್ರಿವೇಣಿ ಗೇಟ್ ಪ್ರದೇಶದ ಸಿಸಿಟಿವಿ (CCTV) ದೃಶ್ಯಗಳನ್ನು ಪಡೆದು ತನಿಖೆ ಮಾಡಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ಗ್ರೆನೇಡ್‌ನ ಭಾಗಗಳನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ನಂತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಕಟ್ಟೆಚ್ಚರ (High Alert) ವಹಿಸಿದ್ದಾರೆ.
INS Visakhapatnam: ಕಡಲ ಕಾನೂನು ಉಲ್ಲಂಘಿಸುತ್ತಿರುವ ಚೀನಾ : ರಾಜನಾಥ್ ಆಕ್ರೋಶ!
ಈ ವರ್ಷದ ಜೂನ್‌ನಲ್ಲಿ ಎರಡು ಸ್ಫೋಟಗಳು ಜಮ್ಮುವಿನ (Jammu) ವಾಯುಪಡೆ ನಿಲ್ದಾಣದ ಉನ್ನತ-ಸುರಕ್ಷತಾ ತಾಂತ್ರಿಕ ಪ್ರದೇಶದಲ್ಲಿ ನಡೆದಿದ್ದವು. ಘಟನೆಯಲ್ಲಿ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. "ಜಮ್ಮು ಏರ್‌ಫೀಲ್ಡ್‌ನಲ್ಲಿ ನಡೆದ ಎರಡೂ ಸ್ಫೋಟಗಳಲ್ಲಿ ಪೇಲೋಡ್‌ನೊಂದಿಗೆ (Payload) ಡ್ರೋನ್, ಸ್ಫೋಟಕ ವಸ್ತುಗಳನ್ನು ಬೀಳಿಸಿದೆ ಎಂದು ಶಂಕಿಸಲಾಗಿದೆ" ಎಂದು ಡಿಜಿಪಿ ದಿಲ್‌ಬಾಗ್ ಸಿಂಗ್ ಹೇಳಿದ್ದು, ದಾಳಿಯ ಸ್ಥಳದ ಸಮೀಪವಿರುವ ಸ್ಥಳದಿಂದ ಡ್ರೋನ್ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದ್ದರು. ಡ್ರೋನ್ ಅನ್ನು ಐಇಡಿಗಳನ್ನು (IED) ಬೀಳಿಸಲು ಮಾತ್ರ ಬಳಸಲಾಯಿತು. ಪೇಲೋಡ್ ಅನ್ನು ಕೈಬಿಟ್ಟ ನಂತರ, ಡ್ರೋನ್ ಹಿಂತಿರುಗಿತ್ತು
ಜೈತ್‌ಪುರ ಪೋಸ್ಟ್ ಬಳಿ ಡ್ರೋನ್ ಪತ್ತೆ!
ಅಕ್ಟೋಬರ್ 6 ರಂದು, ಪಂಜಾಬ್‌ನ ಪಠಾಣ್‌ಕೋಟ್ ಜಿಲ್ಲೆಯ ಬಮಿಯಾಲ್ ಸೆಕ್ಟರ್‌ನಲ್ಲಿರುವ ಜೈತ್‌ಪುರ ಪೋಸ್ಟ್ (Jaitpur Post) ಬಳಿ ಡ್ರೋನ್ ಪತ್ತೆಯಾಗಿತ್ತು. ತಕ್ಷಣ ಪ್ರತಿಕ್ರಿಯಿಸಿದ್ದ ಬಾರ್ಡರ್ ಸೆಕ್ಯುರಿಟಿ ಫೋರ್ಸ್ (Border security Force) ಕಣ್ಮರೆಯಾಗುವ ಮೊದಲು ನಾಲ್ಕೈದು ಸುತ್ತು ಗುಂಡು (Shoot) ಹಾರಿಸಿದ್ದರು. ಮಾನವರಹಿತ ವೈಮಾನಿಕ ವಾಹನ (unmanned aerial vehicle ) ಕಣ್ಮರೆಯಾಗುವ ಮೊದಲು ನಾಲ್ಕೈದು ಸುತ್ತು ಗುಂಡು ಹಾರಿಸಿದರುಜುಲೈನಲ್ಲಿ, ಜಮ್ಮುವಿನ ಭಾರತೀಯ ವಾಯುಪಡೆಯ (Indian Airforce) ನೆಲೆಯ ಮೇಲೆ ಡ್ರೋನ್ ದಾಳಿ ನಡೆದ ಒಂದು ತಿಂಗಳ ನಂತರ ಪಠಾಣ್‌ಕೋಟ್‌ನಲ್ಲಿ ಭದ್ರತಾ ಸಿಬ್ಬಂದಿಗೆ ಅನುಮಾನಾಸ್ಪದ ಬಲೂನ್ (Baloon) ಪತ್ತೆಯಾಗಿತ್ತು.
ಚೀನಾ, ಪಾಕ್ ದಾಳಿ ತಡೆಯಲು ಬಂತು ವಾಯುರಕ್ಷಣಾ ವ್ಯವಸ್ಥೆ!
ಚೀನಾ ಮತ್ತು ಪಾಕಿಸ್ತಾನದಿಂದ (China and Pakistan)ಎದುರಾಗಬಹುದಾದ ಯಾವುದೇ ದಾಳಿಯನ್ನು ಸಮರ್ಥವಾಗಿ ತಡೆಯಬಲ್ಲ ರಷ್ಯಾ (Russia) ನಿರ್ಮಿತ ಎಸ್-400 ಟ್ರಯಂಫ್ ವಾಯು ರಕ್ಷಣಾ ವ್ಯವಸ್ಥೆ ಭಾರತಕ್ಕೆ ಬಂದಿಳಿದಿದೆ. ಇದರೊಂದಿಗೆ ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು ಬಲ ಬಂದಂತಾಗಿದೆ.
INS Visakhapatnam| ಕ್ಷಿಪಣಿ ದಾಳಿ ಸಾಮರ್ಥ್ಯ ಯುದ್ಧ ನೌಕೆ ನೌಕಾಪಡೆಗೆ!
2018ರಲ್ಲಿ ಭಾರತ ಸರ್ಕಾರ ರಷ್ಯಾದಿಂದ ಒಟ್ಟು ಐದು ಎಸ್-400 ಟ್ರಯಂಫ್ ಏರ್ ಡಿಫೆನ್ಸ್ ಸಿಸ್ಟಮ್ (S-400 Triumf ‘SA-21 Growler’ air defence systems ) ಖರೀದಿ ಸಂಬಂಧ 40000 ಕೋಟಿ ರು. ಮೊತ್ತದ ಒಪ್ಪಂದ ಮಾಡಿಕೊಂಡಿತ್ತು. ಈ ಖರೀದಿ ನಡೆದರೆ ಭಾರತದ (India) ಮೇಲೆ ನಿರ್ಬಂಧ ಹೇರುವುದಾಗಿ ಅಮೆರಿಕ ಬೆದರಿಕೆ ಒಡ್ಡಿದ್ದರೂ ಜಗ್ಗದ ಭಾರತ ಒಪ್ಪಂದ ಜಾರಿಗೆ ಮುಂದಾಗಿತ್ತು. ಅದರಂತೆ ಮೊದಲ ವಾಯುರಕ್ಷಣಾ ವ್ಯವಸ್ಥೆಯ ಉಪಕರಣಗಳು ವಾಯು ಮತ್ತು ಸಮುದ್ರ ಮಾರ್ಗದ ಮೂಲಕ ಈಗಾಗಲೇ ಭಾರತವನ್ನು ಪ್ರವೇಶಿಸಿವೆ ಎಂದು ರಷ್ಯಾ ಪ್ರಕಟಿಸಿದೆ. ದುಬೈನಲ್ಲಿ (Dubai) ನಡೆಯುತ್ತಿರುವ ಏರ್‌ಶೋ ವೇಳೆ ರಷ್ಯಾ ಸರ್ಕಾರದ ಮಿಲಿಟರಿ ಉಪಕರಣ ರಫ್ತು ನಿಯಂತ್ರಣ ಸಂಸ್ಥೆಯ ನಿರ್ದೇಶಕ ಡಿಮಿಟ್ರಿ ಶುಗೇವ್ ಈ ಮಾಹಿತಿ ನೀಡಿದ್ದಾರೆ.