Make in India: ಮತ್ತೊಂದು ಡೀಲ್ ಫೈನಲ್: ಸ್ಪೇನ್ 56 C-295 ವಿಮಾನಗಳ ಒಪ್ಪಂದಕ್ಕೆ ಸಹಿ!

* ಮೇಕ್‌ ಇನ್‌ ಇಂಡಿಯಾದೆಡೆ ಮಹತ್ವದ ಹೆಜ್ಜೆ

* ಮತ್ತೊಂದು ಮಹತ್ವದ ಡೀಲ್ ಫೈನಲ್

* ಏರ್‌ಬಸ್‌ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದ ಭಾರತ

Govt seals mega deal with Airbus for purchase of 56 C 295 military transport aircraft pod

ನವದೆಹಲಿ(ಸೆ.24): ಭಾರತೀಯ ವಾಯುಪಡೆ(Indian Air Force) ತನ್ನ ಹಳೆಯ ಅವ್ರೊ ನೌಕಾಪಡೆಯ ಬದಲಾಗಿ 56 ಸಿ -295 ಸಾರಿಗೆ ವಿಮಾನಗಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇರಿಸಿದೆ. ಸ್ಪೇನ್‌ನ ರಕ್ಷಣಾ ಸಚಿವಾಲಯ ಮತ್ತು ಏರ್ ಬಸ್ ಡಿಫೆನ್ಸ್ ಮತ್ತು ಸ್ಪೇಸ್((Defence Ministry and Airbus Defence and Space) 56 ಮಿಲಿಟರಿ ವಿಮಾನ C-295 ವಿಮಾನಗಳ ಖರೀದಿಗೆ ಭಾರತದೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿವೆ.

ಏನಿದು ಒಪ್ಪಂದ?

ಭಾರತದಲ್ಲಿ ಏರೋಸ್ಪೇಸ್ ಪರಿಸರ ವ್ಯವಸ್ಥೆಯನ್ನು(Aerospace Ecosystem) ವಿಸ್ತರಿಸಲು, ಟಾಟಾ ಸಮೂಹವು(Tata Group) ಏರ್‌ಬಸ್‌ನೊಂದಿಗೆ(Airbus) ಪಾಲುದಾರನಾಗಿ, ಭಾರತೀಯ ವಾಯುಪಡೆಗೆ 56 C-295 (C-295) ಮಿಲಿಟರಿ ವಿಮಾನಗಳನ್ನು ಉತ್ಪಾದಿಸಲಿದೆ. ಈ ಒಪ್ಪಂದವು 22000 ಕೋಟಿ ಮೌಲ್ಯದ್ದಾಗಿದೆ. ಗುರುವಾರ, ಟಾಟಾ-ಏರ್‌ಬಸ್(Tata-Airbus) ಭಾರತದಲ್ಲಿ C-295 ಸಾರಿಗೆ ವಿಮಾನವನ್ನು(C-295 Transport Aircraft) ತಯಾರಿಸುವ ಈ ಒಪ್ಪಂದಕ್ಕೆ ಸಹಿ ಹಾಕಿತು.

ಮೇಕ್ ಇನ್ ಇಂಡಿಯಾದೆಡೆ ದಿಟ್ಟ ಹೆಜ್ಜೆ

ಈ ಒಪ್ಪಂದದ ಪ್ರಕಾರ, ಟಾಟಾ ಈ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸಲಿದೆ. ಟಾಟಾ-ಏರ್‌ಬಸ್ ಉತ್ಪಾದನಾ ಘಟಕಗಳನ್ನು ಉತ್ತರ ಪ್ರದೇಶದಲ್ಲಿ ಸ್ಥಾಪಿಸಬಹುದು ಎಂದು ಹೇಳಲಾಗಿದೆ. ಇದು ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ನಿಟ್ಟಿನಲ್ಲಿ ಒಂದು ಪ್ರಮುಖ ಸಾಧನೆಯಾಗಿದೆ. ಇದು 600 ತರಬೇತಿ ಪಡೆದ ಜನರಿಗೆ ನೇರ ಉದ್ಯೋಗ ಒದಗಿಸುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, 3000 ಜನರು ಪರೋಕ್ಷ ಉದ್ಯೋಗವನ್ನು ಪಡೆಯುತ್ತಾರೆ, ಹಾಗೂ 3000 ಮಧ್ಯಮ ಕೌಶಲ್ಯದ ಜನರು ಉದ್ಯೋಗವನ್ನು ಪಡೆಯುತ್ತಾರೆ.

Latest Videos
Follow Us:
Download App:
  • android
  • ios