ಯಾವ ಗಾಯಕಿಗೂ ಕಮ್ಮಿ ಇಲ್ಲದಂತೆ ಸಖತ್ ಆಗಿ ಹಾಡಿದ ಬಾಲಕಿ ಇಂಟರ್‌ನೆಟ್‌ನಲ್ಲಿ ಸಂಚಲನ ಮೂಡಿಸಿದ ಬಾಲಕಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  

ಛತ್ತೀಸ್‌ಗಡ(ಏ.4): ಸರ್ಕಾರಿ ಶಾಲಾ ಬಾಲಕಿಯೊಬ್ಬಳು ಬಾಲಿವುಡ್‌ ಸಿನಿಮಾದ ಹಾಡೊಂದನ್ನು ಯಾವ ಗಾಯಕಿಗೂ ಕಮ್ಮಿ ಇಲ್ಲದಂತ ಸಖತ್ ಆಗಿ ಹಾಡಿದ್ದಾಳೆ. ಇದರ ವಿಡಿಯೋವನ್ನು ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಸಖತ್ ವೈರಲ್ ಆಗಿದೆ. ನೆಟ್ಟಿಗರು ಬಾಲಕಿಯ ಸುಶ್ರಾವ್ಯ ಕಂಠಕ್ಕೆ ಫಿದಾ ಆಗಿದ್ದಾರೆ. 

ಛತ್ತೀಸ್‌ಗಢದ (Chhattisgarh) 8 ವರ್ಷದ ಬಾಲಕಿ ಬಾಲಿವುಡ್ ಸಿನಿಮಾವೊಂದರ 'ಕಹೀಂ ಪ್ಯಾರ್ ನಾ ಹೋ ಜಾಯೆ' ಹಾಡನ್ನು ಸೊಗಸಾಗಿ ಹಾಡಿದ್ದಾಳೆ. ಇದನ್ನು ಐಪಿಎಸ್ ಅಧಿಕಾರಿ ಅವನೀಶ್ ಶರಣ್ (Awanish Sharan) ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊದಲ್ಲಿ ಸರ್ಕಾರಿ ಶಾಲಾ ಬಾಲಕಿ ಮುರಿ ಮುರಾಮಿ (Muri Murami) ಶಾಲಾ ಸಮವಸ್ತ್ರ ಧರಿಸಿಕೊಂಡಿದ್ದು, ಕೈ ಕಟ್ಟಿ ನಿಂತು ಹಾಡನ್ನು ಸೊಗಸಾಗಿ ಹಾಡುತ್ತಿದ್ದಾಳೆ. 

Scroll to load tweet…

ಕಹೀ ಪ್ಯಾರ್ ನಾ ಹೋ ಜಾಯೆ ಹಾಡು ಸಲ್ಮಾನ್ ಖಾನ್ (Salman Khan) ಹಾಗೂ ರಾಣಿ ಮುಖರ್ಜಿ (Rani Mukherji) ಅಭಿನಯದ 'ಕಹೀ ಪ್ಯಾರ್ ನಾ ಹೋ ಜಾಯೆ' ಎಂಬ ಸಿನಿಮಾದ್ದಾಗಿದೆ. ಇದನ್ನು ಟ್ವಿಟ್ಟರ್‌ನಲ್ಲಿ ಮೂಲತಃ ಟ್ರೈಬಲ್‌ ಆರ್ಮಿ ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಬಾಲಕಿ ಮುರಿ ಮುರಾಮಿ ದಂತೇವಾಡ (Dantewada) ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. 67 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಖ್ಯಾತ ಹಾಡನ್ನು ಯಾವುದೇ ಖ್ಯಾತ ಗಾಯಕಿಗೆ ಕಮ್ಮಿ ಇಲ್ಲದಂತೆ ಹಾಡಿದ ಹಳ್ಳಿ ಪ್ರತಿಭೆ ಮುರಿ ಸುಶ್ರಾವ್ಯ ಕಂಠಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಅವಳ ಮಾಧುರ್ಯದ ಕಂಠ ಸಿರಿ ಮುಂದೊಂದು ದಿನ ಆಕೆಯನ್ನು ದೊಡ್ಡ ಸ್ಟಾರ್ ಆಗಿ ಮಾಡಲಿದೆ ಎಂದು ಕೆಲವರು ಹೇಳಿದ್ದಾರೆ. 

ಕುದುರೆ ಸವಾರಿ ನಿಂಗಲ್ಲ ಅಂದಿದ್ದ: ಕುದುರೆಯೂ ಅಂದಿತ್ತು ಅಯ್ಯೋ ಪೆದ್ದ!

ಇನ್ನು ಕಹೀ ಪ್ಯಾರ್ ನಾ ಹೋ ಜಾಯೆ ಹಾಡನ್ನು ಮೂಲತಃ ಖ್ಯಾತ ಗಾಯಕರಾದ ಕುಮಾರ್ ಸಾನು(Kumar Sanu) ಹಾಗೂ ಅಲ್ಕಾ ಯಾಗ್ನಿಕ್ (Alka Yagnik) ಹಾಡಿದ್ದಾರೆ. ಹಿಮೇಶ್ ರೆಶಮಿಯಾ ( Himesh Reshammiya) ಈ ಹಾಡಿನ ಸಂಯೋಜನೆ ಮಾಡಿದ್ದಾರೆ. ಇದು 90ರ ದಶಕದ ಬಾಲಿವುಡ್‌ನ ಸೂಪರ್ ಹಿಟ್ ಹಾಡು ಎನಿಸಿದೆ.

ಎನ್‌ಆರ್‌ ಪುರ ಬಾಲಕಿಯ ಆಂಗ್ಲ ಭಾಷಣಕ್ಕೆ ಫಿದಾ ಆಗ್ಲೇಬೇಕು

ಹೀಗೆಯೇ ಕಳೆದ ವರ್ಷ ಬಚ್‌ಪನ್‌ ಕಾ ಪ್ಯಾರ್ ಖ್ಯಾತಿಯ ಪುಟ್ಟ ಹುಡುಗ ತನ್ನ ಸುಮಧುರ ಕಂಠದಿಂದ ಇಂಟರ್‌ನೆಟ್ ಸೆನ್ಸೇಷನ್‌ ಆಗಿದ್ದು ನಿಮಗೆ ನೆನಪಿರಬಹುದು. ಸಚ್‌ದೇವ್‌ ಡಿರ್ಡೊ (Sahdev Dirdo) ಹೆಸರಿನ ಈ ಬಾಲಕ ಕೂಡ ಮೂಲತಃ ಛತ್ತಿಸ್‌ಗಢದ ಸುಕ್ಮಾ ಜಿಲ್ಲೆಯವ. ಈತನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಈತನಿಗೆ ಸಾಕಷ್ಟು ಅವಕಾಶಗಳು ಒದಗಿ ಬಂದಿದ್ದವು. ಛತ್ತೀಸ್‌ಗಡ ಸಿಎಂ ಅವರಿಂದ ಅಭಿನಂದಿಸಲ್ಪಟ್ಟಿದ್ದ ಈ ಬಾಲಕ ಇಂಡಿಯನ್ ಐಡಲ್‌ನಲ್ಲಿಯೂ ಕಾಣಿಸಿಕೊಂಡಿದ್ದರು. ಈತನ ಹಾಡು ಕೇಳಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಈ ಹಾಡಿನಿಂದ ನನಗೆ ನಿದ್ರಿಸಲೂ ಆಗುತ್ತಿಲ್ಲ. ಅಷ್ಟೊಂದು ಕಾಡುತ್ತಿದೆ ಎಂದು ಹೇಳಿದ್ದರು. ಬಚ್‌ಪನ್ ಕಾ ಪ್ಯಾರ್ ಮೇರ ಭೂಲ್ ನಯಿ ಜಾನಾ ಎಂದು ಹಾಡಿದ್ದ ಹುಡುಗನ ವಿಡಿಯೋ ಇನ್‌ಸ್ಟಗ್ರಾಮ್ ಸೇರಿ ಸೋಷಿಯಲ್ ಮಿಡಿಯಾ ಫ್ಲಾಟ್‌ಫಾರ್ಮ್‌ನಲ್ಲಿ ಟ್ರೆಂಡ್ ಆಗಿತ್ತು.