ನವದೆಹಲಿ (ಡಿ. 04): ಈರುಳ್ಳಿ ದರ ದೇಶಾದ್ಯಂತ ಕೇಜಿಗೆ 100 ರು. ಗಡಿ ದಾಟಿರುವ ಕಾರಣ, ದರ ನಿಯಂತ್ರಣಕ್ಕಾಗಿ ಈರುಳ್ಳಿ ದಾಸ್ತಾನಿನ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದೆ.

ಮಂಗಳವಾರ ಈ ಸಂಬಂಧ ಆದೇಶ ಹೊರಡಿಸಿರುವ ಕೇಂದ್ರ ಸರ್ಕಾರ, ‘ಸಗಟು ಮಾರಾಟಗಾರರು 25 ಮೆಟ್ರಿಕ್‌ ಟನ್‌ ಹಾಗೂ ಚಿಲ್ಲರೆ ಮಾರಾಟಗಾರರು 5 ಮೆಟ್ರಿಕ್‌ ಟನ್‌ ಮಾತ್ರ ಮಾತ್ರ ದಾಸ್ತಾನು ಮಾಡಿಟ್ಟುಕೊಳ್ಳಬಹುದು. ಆದರೆ ವಿದೇಶದಿಂದ ಆಮದು ಮಾಡಿಕೊಳ್ಳುವ ವ್ಯಾಪಾರಿಗಳಿಗೆ ಯಾವುದೇ ದಾಸ್ತಾನು ಮಿತಿ ಇಲ್ಲ’ ಎಂದು ಹೇಳಿದೆ.

ಈರುಳ್ಳಿಗೆ ಬಂಪರ್ ಬೆಲೆ: ಪಟಾಕಿ ಸಿಡಿಸಿ ಸಂಭ್ರಮಿಸಿದ ರೈತರು

ಈ ಸಂಬಂಧ ಕೇಂದ್ರ ಗ್ರಾಹಕ ವ್ಯವಹಾರ ಹಾಗೂ ಪಡಿತರ ಸಚಿವ ರಾಮ್‌ವಿಲಾಸ್‌ ಪಾಸ್ವಾನ್‌ ಟ್ವೀಟ್‌ ಮಾಡಿದ್ದಾರೆ. ಈವರೆಗೆ ಚಿಲ್ಲರೆ ಈರುಳ್ಳಿ ಮಾರಾಟಗಾರರು 10 ಮೆಟ್ರಿಕ್‌ ಟನ್‌ ಹಾಗೂ ಸಗಟು ಈರುಳ್ಳಿ ಮಾರಾಟಗಾರರು 50 ಮೆಟ್ರಿಕ್‌ ಟನ್‌ವರೆಗೆ ದಾಸ್ತಾನು ಮಾಡಿಟ್ಟುಕೊಳ್ಳಲು ಅವಕಾಶವಿತ್ತು.

ಈರುಳ್ಳಿ ತರಂಗಿಲ್ಲ, ಬೇಯಿಸಂಗಿಲ್ಲ: ಸಿಲಿಂಡರ್ ಬೆಲೆ ಏರಿದೆಯಲ್ಲ!

ಏಕರೂಪದ ಈರುಳ್ಳಿ ದರ ಇಲ್ಲ- ಸರ್ಕಾರ:

ದೇಶಾದ್ಯಂತ ಏಕರೂಪದ ಈರುಳ್ಳಿ ದರ ನಿಗದಿಪಡಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಖಾತೆ ರಾಜ್ಯ ಸಚಿವ ರಾವ್‌ ಸಾಹೇಬ್‌ ದಾನ್ವೆ ಲೋಕಸಭೆಗೆ ತಿಳಿಸಿದ್ದಾರೆ. ಅಲ್ಲದೆ, ಸರ್ಕಾರ ವಿದೇಶದಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ತಡಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.