ನವದೆಹಲಿ, (ಮೇ.01):  ಕೊರೋನಾ ವೈರಸ್ ಸಂಬಂಧಿತ ದೇಶವ್ಯಾಪಿ ಲಾಕ್ ಡೌನ್ ಅನ್ನು ಮೇ 4ರಿಂದ ಮತ್ತೆ ಎರಡು ವಾರಗಳ ಕಾಲ ವಿಸ್ತರಿಸಿ ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದೆ.

ಕೋವಿಡ್ ವೈರಸ್ ಹರಡುವಿಕೆಯ ತೀವ್ರತೆ ಹಾಗೂ ಕೋವಿಡ್ ಸೋಂಕಿತರ ಪ್ರಕರಣಗಳ ಆಧಾರದಲ್ಲಿ ದೇಶಾದ್ಯಂತ ಜಿಲ್ಲೆಗಳನ್ನು ಮೂರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಕೆಂಪು ವಲಯ (ರೆಡ್ ಝೋನ್), ಕಿತ್ತಳೆ ವಲಯ (ಆರೆಂಝ್ ಝೋನ್) ಹಾಗೂ ಹಸುರು ವಲಯ (ಗ್ರೀನ್ ಝೋನ್).

ಮೇ 17ರ ವರೆಗೆ ಲಾಕ್‌ಡೌನ್ ಮುಂದುವರಿಕೆ: ಏನಿರುತ್ತೆ.? ಏನಿರೋಲ್ಲ...?

ಇದೀಗ ಮೇ 14ರವರೆಗೆ ವಿಸ್ತರಣೆಯಾಗಿರುವ ಲಾಕ್ ಡೌನ್ ಪರಿಸ್ಥಿತಿಯಲ್ಲಿ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಿಗೆ ಕೆಲವೊಂದು ವಿನಾಯಿತಿ ನೀಡಲಾಗಿದ್ದರೂ ಕೆಲವು ನಿರ್ಬಂಧಗಳು ಈ ಮೂರೂ ವಲಯಗಳಿಗೆ ಸಾಮಾನ್ಯವಾಗಿರಲಿದೆ. 

ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್
ಹೌದು...ಕಳೆದೊಂದು ತಿಂಗಳಿದ ಎಣ್ಣೆಗಾಗಿ ಪರದಾಡುತ್ತಿದ್ದ ಮದ್ಯ ಪ್ರಿಯರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದ್ದು, ಮೇ.4ರಿಂದ  ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಆದ್ರೆ, ಕೆಲವು ಷರತ್ತು, ನಿಬಂಧನೆಗಳೊಂದಿಗೆ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

* ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು
* ಬಾರ್‌ಗಳ ಮುಂದೆ 5ಕ್ಕೂ ಹೆಚ್ಚು ಜನರು ಸೇರಬಾರದು
* ಬಾರ್‌ನಲ್ಲಿ ಮದ್ಯ ಸೇವಿಸಲು ಅವಕಾಶ ಇಲ್ಲ.
* ಮದ್ಯವನ್ನು ಪಾರ್ಸಲ್ ತೆಗೆದುಕೊಂಡು ಹೋಗಬೇಕು.
* ಒಬ್ಬರಿಂದ ಒಬ್ಬರಿಗೆ ಕನಿಷ್ಟ  6 ಅಡಿ ಅಂತರ ಕಾಯ್ದುಕೊಂಡು ಮದ್ಯ ಖರೀದಿಸಬೇಕು.