ಶ್ರೀನಗರ (ಡಿ. 25): ಕಾಶ್ಮೀರದಲ್ಲಿ ಪರಿಚ್ಛೇದ 370 ರದ್ದತಿ ಸಂದರ್ಭದಲ್ಲಿ ಭದ್ರತೆಗೆಂದು ಹೆಚ್ಚುವರಿಯಾಗಿ ನಿಯೋಜಿಸಲ್ಪಟ್ಟಿದ್ದ 7 ಸಾವಿರ ಅರೆಸೇನಾ ಯೋಧರನ್ನು ವಾಪಸು ಕರೆಸಿಕೊಳ್ಳುವ ಮಹತ್ವದ ನಿರ್ಧಾರವನ್ನು ಮಂಗಳವಾರ ಕೇಂದ್ರ ಸರ್ಕಾರ ಕೈಗೊಂಡಿದೆ.

ಮಿಲಿಟರಿಗಾಗಿ ಹೊಸ ಇಲಾಖೆ, ಹೊಸ ಬಾಸ್!

ಸಿಆರ್‌ಪಿಎಫ್‌ನ 24, ಬಿಎಸ್‌ಎಫ್‌ನ 12, ಸಿಐಎಸ್‌ಎಫ್‌ನ 12 ಹಾಗೂ ಸಶಸ್ತ್ರ ಸೀಮಾ ಬಲದ 12 ತುಕಡಿಗಳು ಸೇರಿದಂತೆ ಒಟ್ಟು 72 ಅರೆಸೇನಾ ತುಕಡಿಗಳು ಇಲ್ಲಿ ರಕ್ಷಣಾ ಕಾರ್ಯಕ್ಕೆ ನಿಯೋಜಿತವಾಗಿದ್ದವು. ಈಗ ಕಾಶ್ಮೀರ ಸಹಜ ಸ್ಥಿತಿಗೆ ಮರಳಿರುವ ಕಾರಣ ಅಲ್ಲಿಂದ ಪಡೆಗಳನ್ನು ತಕ್ಷಣದಿಂದಲೇ ವಾಪಸು ಕರೆಸಿಕೊಳ್ಳುವ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.