3ನೇ ಅಲೆ ಎದುರಿಸಲು 30 ದಿನದ ಔಷಧ ಸಂಗ್ರಹ!

* 3ನೇ ಅಲೆ ಎದುರಿಸಲು 30 ದಿನದ ಔಷಧ ಸಂಗ್ರಹ

* 2ನೇ ಅಲೆಯ ಸಮಸ್ಯೆ ಮತ್ತೆ ಎದುರಾಗದಂತೆ ಕೇಂದ್ರ ಸರ್ಕಾರದ ಮುಂಜಾಗ್ರತೆ3

* ರೆಮ್‌ಡೆಸಿವಿರ್‌, ಪ್ಯಾರಸಿಟಾಮಲ್‌, ಫೆವಿಪಿರಾವಿರ್‌, ವಿಟಮಿನ್‌ ಔಷಧ ಸಂಗ್ರಹ

Govt Braces for 3rd Wave Increases Buffer Stock of Essential Covid 19 Medicines pod

ನವದೆಹಲಿ(ಜು.20): ಕೊರೋನಾ 3ನೇ ಅಲೆಯ ವೇಳೆ ಅಗತ್ಯಗತ್ಯ ಔಷಧಗಳ ಕೊರತೆ ಆಗದಂತೆ ನೊಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಕೊರೋನಾ ರೋಗಿಗಳ ಚಿಕಿತ್ಸೆಗೆ ಅಗತ್ಯವಿರುವ ರೆಮ್‌ಡೆಸಿವಿರ್‌, ಫೆವಿಪಿರಾವಿರ್‌ ಮಾತ್ರೆಗಳು ಮತ್ತು ಪ್ಯಾರಸಿಟಾಮಲ್‌, ಮೊಲ್‌ ನಂತಹ ಸಾಮಾನ್ಯ ಜ್ವರದ ಮಾತ್ರೆಗಳು, ಪ್ರತಿಕಾಯಗಳು, ವಿಟಮಿನ್‌ನಂತಹ ಔಷಧಗಳನ್ನು 30 ದಿನಗಳಿಗೆ ಆಗುವಷ್ಟುಸಂಗ್ರಹ ಇಟ್ಟುಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

3ನೇ ಅಲೆಗೂ ಮುನ್ನ 50 ಲಕ್ಷ ರೆಮ್‌ಡೆಸಿವಿರ್‌ ವಯಲ್‌ (ಬಾಟಲ್‌)ಗಳನ್ನು ಖರೀದಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅಲ್ಲದೇ ಈ ಬಾರಿ ಮುಂಗಡವಾಗಿ ಹಣವನ್ನು ಪಾವತಿ ಮಾಡಲಿದೆ. ಇದೇ ವೇಳೆ ಅಗತ್ಯ ಔಷಧಗಳನ್ನು ಉತ್ಪಾದಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಹೀಗಾಗಿ ರಾಜ್ಯಗಳು ಪ್ಯಾರಸಿಟಾಮಲ್‌ ನಂತಹ ಸಾಮಾನ್ಯ ಔಷಧಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುವ ಕಾರ್ಯದಲ್ಲಿ ತೊಡಗಿವೆ ಎಂದು ಔಷಧ ಕಂಪನಿಯೊಂದರ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಭಾರತ ಈಗ ತಿಂಗಳಿಗೆ 1 ಕೋಟಿ ರೆಮ್‌ಡೆಸಿವಿರ್‌ ಔಷಧ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಆದರೆ, ಕೊರೋನಾ 2ನೇ ಅಲೆಯ ಸಂದರ್ಭದಲ್ಲಿ ರೆಮ್‌ಡೆಸಿವಿರ್‌ ಹಾಗೂ ಅಗತ್ಯ ಔಷಧಗಳ ಬೇಡಿಕೆ 2ರಿಂದ 3 ಪಟ್ಟು ಹೆಚ್ಚಳಗೊಂಡಿತ್ತು. ಇದು ಔಷಧಗಳ ದರ ಏರಿಕೆ ಮತ್ತು ಕಾಳಸಂತೆಯಲ್ಲಿ ಮಾರಾಟಕ್ಕೆ ಕಾರಣವಾಗಿತ್ತು.

Latest Videos
Follow Us:
Download App:
  • android
  • ios