Asianet Suvarna News Asianet Suvarna News

ಎರಡೂ ಸದನಗಳಲ್ಲಿ ರಾಮ ಮಂದಿರದ ನಿರ್ಣಯ ಮಂಡಿಸಲಿದೆ ಕೇಂದ್ರ ಸರ್ಕಾರ!

ಅತ್ಯಂತ ಮಹತ್ವದ ವಿಚಾರದಲ್ಲಿ ಕೇಂದ್ರ ಸರ್ಕಾರ ಶನಿವಾರ ರಾಜ್ಯಸಭೆಯ ಹಾಗೂ ಲೋಕಸಭೆ ಎರಡರಲ್ಲೂ ರಾಮ ಮಂದಿರ ಕುರಿತಾದ ನಿರ್ಣಯವನ್ನು ಮಂಡನೆ ಮಾಡಲಿದೆ ಎಂದು ವರದಿಯಾಗಿದೆ.
 

Government will bring a motion on Ram Temple in both Houses tomorrow san
Author
First Published Feb 9, 2024, 11:13 PM IST

ನವದೆಹಲಿ (ಫೆ.9): ಕೇಂದ್ರ ಬಜೆಟ್‌ ಅಧಿವೇಶನದ ಕೊನೆಯ ದಿನವಾದ ಫೆಬ್ರವರಿ 10 ರಂದು ಸಂಸತ್ತಿನ ಉಭಯ ಸದನಗಳಲ್ಲಿ ರಾಮ ಮಂದಿರದ ಬಗ್ಗೆ ಧನ್ಯವಾದ ನಿರ್ಣಯವನ್ನು ಮಂಡಿಸುವ ಸಾಧ್ಯತೆ ಇದೆ. ನಿಯಮ 193 ರ ಅಡಿಯಲ್ಲಿ, ಲೋಕಸಭೆಯಲ್ಲಿ ರಾಮಮಂದಿರದ ಪ್ರಸ್ತಾಪವನ್ನು ಬರಲು ನಿರ್ಧರಿಸಲಾಗಿದೆ. . ಮೂಲಗಳ ಪ್ರಕಾರ, ಬಿಜೆಪಿ ಸಂಸದರಾದ ಸತ್ಯಪಾಲ್ ಸಿಂಗ್, ಪ್ರತಾಪ್ ಚಂದ್ರ ಸಾರಂಗಿ ಮತ್ತು ಸಂತೋಷ್ ಪಾಂಡೆ ಅವರು ಮಸೂದೆಯನ್ನು ಮಂಡಿಸಲಿದ್ದಾರೆ. ರಾಜ್ಯಸಭೆಯಲ್ಲಿ ನಿಯಮ 176ರ ಅಡಿಯಲ್ಲಿ ಈ ಮಸೂದೆಯನ್ನು ತರಲಾಗುವುದು ಮತ್ತು ಬಿಜೆಪಿ ಸಂಸದರಾದ ಕೆ ಲಕ್ಷ್ಮಣ್, ಸುಧಾಂಶು ತ್ರಿವೇದಿ ಮತ್ತು ರಾಕೇಶ್ ಸಿನ್ಹಾ ಅವರು ಮಂಡಿಸಲಿದ್ದಾರೆ ಎಂದು ವರದಿಯಾಗಿದೆ. ಮಾಹಿತಿಯ ಪ್ರಕಾರ, ಪ್ರಸ್ತಾವನೆಯು ಭಗವಾನ್ ರಾಮ, ಭಾರತ ಮತ್ತು ಭಾರತೀಯತೆಯ ಸಂಕೇತ, ಭಗವಾನ್ ರಾಮ, ಭಾರತೀಯ ಸಂಸ್ಕೃತಿಯ ಪ್ರತೀಕ, ಭಗವಾನ್ ರಾಮ, 'ಏಕ ಭಾರತ, ಶ್ರೇಷ್ಠ ಭಾರತ'ದ ಸಂಕೇತ ಎನ್ನುವ ಅಂಶಕ್ಕೆ ಪ್ರಾಧಾನ್ಯತೆ ನೀಡಲಾಗಿದೆ.

ಇದಕ್ಕೂ ಮುನ್ನ ಜನವರಿ 31 ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನ ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವ ಮುನ್ನ 'ರಾಮ್ ರಾಮ್' ಎನ್ನುವ ಮೂಲಕವೇ ಮಾತು ಆರಂಭಿಸಿದ್ದರು. ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆದ ಪ್ರಾಣ ಪ್ರತಿಷ್ಠಾ ಸಮಾರಂಭವು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣದಲ್ಲಿಯೂ ವ್ಯಕ್ತವಾಗಿದೆ.

2024ರ ವರ್ಷದ ಪೂರ್ತಿ ಎಲ್ಲರಿಗೂ ರಾಮ ರಾಮ ಶುಭಾಶಯಗಳು ಎಂದು ಪ್ರಧಾನಿ ತಮ್ಮ ಮಾತಿನ ಆರಂಭಕ್ಕೂ ಮುನ್ನ ತಿಳಿಸಿದ್ದರು. ಅದರೊಂದಿಗೆ ಮಾತಿನ ಕೊನೆಯಲ್ಲೂ ಎಲ್ಲರಿಗೂ ರಾಮ್‌ ರಾಮ್‌ ಎಂದು ಮುಗಿಸಿದ್ದರು.

ವಿಪ್‌ ಜಾರಿ ಮಾಡಿದ ಬಿಜೆಪಿ: ಈ ನಡುವೆ ಭಾರತೀಯ ಜನತಾ ಪಕ್ಷವು ತನ್ನ ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್ ಜಾರಿಗೊಳಿಸಿದ್ದು, ಉಭಯ ಸದನಗಳಲ್ಲಿ ಕೆಲವು ಪ್ರಮುಖ ಶಾಸಕಾಂಗ ವ್ಯವಹಾರಗಳ ಚರ್ಚೆ ನಡೆಯಲಿರುವ ಕಾರಣ ಶನಿವಾರ ಸಂಸತ್ತಿನಲ್ಲಿ ಹಾಜರಾಗುವಂತೆ ಕೇಳಿದೆ. "ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲಾ ಬಿಜೆಪಿ ಸದಸ್ಯರಿಗೆ ಈ ಮೂಲಕ 10 ಫೆಬ್ರವರಿ 2024 ರಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಕೆಲವು ಪ್ರಮುಖ ಶಾಸಕಾಂಗ ವ್ಯವಹಾರಗಳನ್ನು ಚರ್ಚೆ ಮತ್ತು ಅಂಗೀಕಾರಕ್ಕೆ ತೆಗೆದುಕೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಲೋಕಸಭೆಯಲ್ಲಿ ಹಾಗೂ ರಾಜ್ಯಸಭೆಯಲ್ಲಿ ಬಿಜೆಪಿಯ ಎಲ್ಲಾ ಸದಸ್ಯರು ಫೆಬ್ರವರಿ 10 ರ ಶನಿವಾರ ದಿನವಿಡೀ ಸದನದಲ್ಲಿ ಹಾಜರಾಗಲು ವಿನಂತಿಸಲಾಗಿದೆ, ”ಎಂದು ಲೋಕಸಭೆ ಮತ್ತು ರಾಜ್ಯಸಭೆಗೆ ಪ್ರತ್ಯೇಕವಾಗಿ ನೀಡಿರುವ ವಿಪ್‌ನಲ್ಲಿ ತಿಳಿಸಲಾಗಿದೆ.

ಮಸೀದಿ ಜಾಗದಲ್ಲಿ ರಾಮ ಮಂದಿರವಂತೆ..! ಏನಿದು BBC ವಾಹಿನಿಯ ಉದ್ಧಟತನ..?

ಇದಕ್ಕೂ ಮುನ್ನ ಸಂಸತ್ತಿನ ಬಜೆಟ್‌ ಅಧಿವೇಶನವನ್ನು ಒಂದು ದಿನಕ್ಕೆ ವಿಸ್ತರಣೆ ಮಾಡಲಾಗಿತ್ತು. ಏಪ್ರಿಲ್‌-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ನಡೆದ ಕೊನೆಯ ಸದನ ಇದಾಗಿದೆ. ಜನವರಿ 31 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಉಭಯ ಸದನ ಉದ್ದೇಶಿಸಿ ಮಾತನಾಡುವ ಮೂಲಕ ಅಧಿವೇಶನ ಆರಂಭವಾಗಿತ್ತು. ಇದಕ್ಕೂ ಮುನ್ನ ಅಧಿವೇಶನ ಫೆ.9ಕ್ಕೆ ಕೊನೆಯಾಗಬೇಕಿತ್ತು.

ಧರ್ಮ, ಪ್ರೇಮ ಮತ್ತು ಸಮರ್ಪಣೆಯ 'ರಾಮಾಯಣ' ಪ್ರಸಾರದ ದಿನಾಂಕ ಘೋಷಿಸಿದ ಡಿಡಿ!

Follow Us:
Download App:
  • android
  • ios