ನವದೆಹಲಿ(ಜೂ.29):  ಕಾಂಗ್ರೆಸ್ ಅಥವಾವಿರೋಧ ಪಕ್ಷ ಟೀಕೆ, ಟಿಪ್ಪಣಿ ಮುಖ್ಯಮಲ್ಲ. ದೇಶದ ಜನತೆಯ ಆರೋಗ್ಯ, ದೇಶದ ಭದ್ರತೆ ಮುಖ್ಯ. ಇದರತ್ತ ಕೇಂದ್ರ ಸರ್ಕಾರ ಗಂಭೀರ ಚಿಂಚನೆ ನಡೆಸಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದಾರೆ.

ಮಾಜಿ ಸಿಎಂಗೆ ಕೊರೋನಾ ಸೋಂಕು: ಮೋದಿಯಿಂದ ಕರೆ!...

ಕೊರೋನಾ ವೈರಸ್ ಹಾಗೂ ದೇಶದ ಗಡಿ ಸಮಸ್ಯೆ ಭಾರತವನ್ನು ಇನ್ನಲ್ಲದಂತೆ ಕಾಡುತ್ತಿದೆ. ಇದೀಗ ಬೆಜೆಪಿ-ಕಾಂಗ್ರೆಸ್ ಪಕ್ಷದ ವಿಚಾರವಲ್ಲ. ದೇಶದ ವಿಚಾರ. ಹೀಗಾಗಿ ಸರ್ಕಾರದ ನಿರ್ಧಾರಗಳನ್ನು ಸಂಸತ್ತಿನಲ್ಲಿ ಹೇಳಬೇಕು. ಗೃಹ ಸಚಿವ ಅಮಿತ್ ಶಾ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಕುರಿತು ಭಯಪಡುವ ಅಗತ್ಯವಿಲ್ಲ. ದೇಶವನ್ನು ಆಪಾಯಿಂದ ಪಾರುಮಾಡುವ ವಿಧಾನದತ್ತ ಗಮನಹರಿಸಿ ಎಂದು ಆನಂದ್ ಶರ್ಮಾ, ಅಮಿತ್ ಶಾಗೆ ತಿರುಗೇಟು ನೀಡಿದ್ದಾರೆ.

ಮುಂದಿನ ಅತ್ಯಾಧುನಿಕ ಯುದ್ಧ ವಿಮಾನಕ್ಕೆ ಖಾಸಗಿ ಸಹಭಾಗಿತ್ವ!

ಇಂದಿರಾ ಗಾಂಧಿ ಬಳಿ ಕಾಂಗ್ರೆಸ್‌ನಲ್ಲಿ ಗಾಂಧಿ ಕುಟುಂಬ ಮಾತ್ರ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದೆ ಎಂದು ಅಮಿತ್ ಶಾ ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿದ ಆನಂದ್ ಶರ್ಮಾ ಸಿತಾರಾಂ ಕೇಸರಿ ಹಾಗೂ ಪಿವಿ ನರಸಿಂಹ ರಾವ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದಾರೆ. ಗಾಂಧಿ ಕುಟುಂಬ ಹೆಚ್ಚು ಬಾರಿ ಅಧ್ಯಕ್ಷರಾಗಿದ್ದಾರೆ ನಿಜ. ಆದರೆ ಈ ಸಮಯದಲ್ಲಿ ಪಕ್ಷ, ಅಧ್ಯಕ್ಷ, ಟೀಕೆ ಟಿಪ್ಪಣಿಗಳ ಸಮಯವಲ್ಲ ಎಂದು ಆನಂದ್ ಶರ್ಮಾ ಹೇಳಿದ್ದಾರೆ.

ಕೊರೋನಾ ವೈರಸ್ ನಿಯಂತ್ರಣ ಹಾಗೂ ಚೀನಾ ಅತಿಕ್ರಮಣ ಕುರಿತು ಸರ್ಕಾರ ವಿರೋಧ ಪಕ್ಷ ಹಾಗೂ ಸಂಸದರ ಪ್ರಶ್ನೆಗೆ ಉತ್ತರಿಸಬೇಕು. ನಮ್ಮ ಯೋಧರ ಜೊತೆಗೆ ನಾವಿದ್ದೇವೆ. ಮತ್ತೆ ಅನಾಹುತ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಆನಂದ್ ಶರ್ಮಾ ಹೇಳಿದ್ದಾರೆ.