ಲಸಿಕೆ ಉತ್ಸವದ ಹೆಸರಿನಲ್ಲಿ ಜನರಿಗೆ ಮೋಸ/ ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ/ ಕೊರೋನಾ ನಿಯಂತ್ರಣಕ್ಕೆ ನಿಜವಾದ ಕಾಳಜಿ ಇಲ್ಲ/ ಬೆಡ್ ವ್ಯವಸ್ಥೆ ಇಲ್ಲ, ಟೆಸ್ಟಿಂಗ್ ಇಲ್ಲ..
ನವದೆಹಲಿ (ಏ. 15) ಕೇಂದ್ರ ಸರ್ಕಾರ ಕೊರೋನಾಕ್ಕೆ ಸಂಬಂಧಿಸಿ ನಿಜವಾದ ಕಾಳಜಿ ಮೆರೆಯುವ ಬದಲುನ ಉತ್ಸವ ಮಾಡಿಕೊಂಡು ಕುಳಿತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಬೆಡ್ ವ್ಯವಸ್ಥೆ ಮಾಡಲಾಗಿಲ್ಲ. ಟೆಸ್ಟಿಂಗ್ ಸರಿಯಾಗಿ ನಡೆಯುತ್ತಿಲ್ಲ. ವೆಂಟಿಲೇಟರ್ ಮತ್ತು ಆಕ್ಸಿಜನ್ ಸ್ಥಿತಿ ಕೇಳುವುದೇ ಬೇಡ ಆಗಿದೆ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮಾಡಿದ್ದಾರೆ.
ಕೊರೋನಾ ಕಾರಣ; ನೀಟ್ ಪರೀಕ್ಷೆ ಸಹ ಮುಂದಕ್ಕೆ
ಕೊರೋನಾ ನಿರ್ವಹಣೆಗೆಂದು ಪಿಎಂ ಕೇರ್ ಫಂಡ್ ಗೆ ದೊಡ್ಡ ಮೊಟ್ಟದ ಡೊನೇಶನ್ ಹರಿದು ಬರುತ್ತಿದೆ. ಬೆಡ್ ವ್ಯವಸ್ಥೆ ಇಲ್ಲ, ಟೆಸ್ಟಿಂಗ್ ಇಲ್ಲ.. ಹಾಗಾದರೆ ಪಿಎಂ ಕೇರ್ ಹಣ ಏನಾಗುತ್ತಿದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಟಿಕಾ ಉತ್ಸವ ಎಂದು ಕೊರೋನಾ ಲಸಿಕೆ ಅಭಿಯಾನವನ್ನು ಕರೆದು ಅದಕ್ಕೆ ಜಾಹೀರಾತು ಕೊಟ್ಟ ವಿಚಾರಕ್ಕೆ ರಾಹುಲ್ ಕಿಡಿಯಾಗಿದ್ದಾರೆ. ಭಾತರತದಲ್ಲಿ ಒಂದೇ ದಿನ 2,00,739 COVID-19 ಸೋಂಕುಗಳು ಪತ್ತೆಯಾಗಿದ್ದರೆ 1,038 ಸಾವು ಸಂಭವಿಸಿದ್ದು ದೇಶದ ಸೋಂಕಿತರ ಸಂಖ್ಯೆ 1,40,74,564 ಕ್ಕೆ ತಲುಪಿದ್ದು ಆತಂಕ ಹೆಚ್ಚಿಸಿದೆ.
