ಲವ್ ಜಿಹಾದ್ ವಿರುದ್ಧ ಗುಡುಗಿದೆ ಯೋಗಿ/ ಲವ್ ಜೀಹಾದ್ ಮಟ್ಟ ಹಾಕಲು ಕಠಿಣ ಕಾನೂನು/ ಸುಗ್ರೀವಾಜ್ಞೆ ಹೊರಡಿಸಲು ಚಿಂತನೆ/ ಮದುವೆಯಾಗಲು ಧರ್ಮ ಬದಲಾಯಿಸಬೇಕೆಂದಿನಲ್ಲ
ಲಕ್ನೋ(ಅ. 31) ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಗುಡುಗಿದ್ದಾರೆ. ಲವ್ ಜಿಹಾದ್ ವಿರುದ್ಧ ಕಠಿಣ ಕಾನೂನು ತರಲಾಗುವುದು ಎಂದು ಎಚ್ಚರಿಸಿದ್ದಾರೆ.
ಲವ್ ಜಿಹಾದ್ ಮಟ್ಟ ಹಾಕಲು ಕಾನೂನು ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು. ಮದುವೆಯಾಗಲು ಧರ್ಮ ಬದಲಾವಣೆ ಮಾಡಲೇಬೇಕಿಲ್ಲ ಎಂಬ ಅಲಹಾಬಾದ್ ಕೋರ್ಟ್ ತೀರ್ಪನ್ನು ಈ ಸಂದರ್ಭ ಉಲ್ಲೇಖಿಸಿದರು.
ಮೊಘಲ್ ಅಲ್ಲ ಶಿವಾಜಿ; ಹೆಸರು ಬದಲಿಸಿದ ಯೋಗಿ
ಹಿಂದು ಸಹೋದರಿಯರೊಂದಿಗೆ ಆಟ ಆಡಿದರೆ ನಾವು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಒತ್ತಾಯದಿಂದ ಇಸ್ಲಾಂ ಹೇರಲು ಬಂದರೆ ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಲವ್ ಜಿಹಾದ್ ವಿರುದ್ಧ ಕಾನೂನು ಕ್ರಮ ತರಲು ಉತ್ತರ ಪ್ರದೇಶ ಸರ್ಕಾರ ಸುಗ್ರೀವಾಜ್ಞೆಯ ಚಿಂತನೆಯಲ್ಲಿ ಇದೆ. ಉತ್ತರ ಪ್ರದೇಶ ಸರ್ಕಾರ ನೇಮಕ ಮಾಡಿದ್ದ ಸಮಿತಿ ಸಹ ಲವ್ ಜಿಹಾದ್ ಗೆ ಕಡಿವಾಣ ಹಾಕಬೇಕು ಎಂದು ಸಲಹೆ ನೀಡಿತ್ತು.
