ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಶನ್(IRCTC) ಹಾಗೂ ಭಾರತೀಯ ರೈಲ್ವೇ ಫಿನಾನ್ಸ್ ಕಾರ್ಪೋರೇಶನ್( IRFC)ಗೆ ನವರತ್ನ ಸ್ಥಾನಮಾನ ಸಿಕ್ಕಿದೆ. ಭಾರತೀಯ ರೈಲ್ವೇಗೆ ಕೇಂದ್ರ ಸರ್ಕಾರ ನೀಡಿರುವ ಈ ನವರತ್ನ ಸ್ಟೇಟಸ್ ಏನು?
ನವದೆಹಲಿ(ಮಾ.03) ಭಾರತೀಯ ರೈಲ್ವೇ ವಿಶ್ವದ ಅತೀ ದೊಡ್ಡ ಸಂಪರ್ಕ ಜಾಲ ಹೊಂದಿರುವ ರೈಲ್ವೇಗಳಲ್ಲಿ ಒಂದಾಗಿದೆ. ಇದೀಗ ಭಾರತೀಯ ರೈಲುಗಳ ಮೂಲ ಸೌಕರ್ಯಗಳನ್ನು ಹೆಚ್ಚಿಸಲಾಗಿದೆ. ಹಲವು ಸೌರ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ವಂದೇ ಭಾರತ್, ಅಮೃತ ಭಾರತ್ ಸೇರಿದಂತೆ ಹೊಸ ರೈಲುಗಳು ಭಾರತೀಯ ರೈಲ್ವೇ ಸಂಚಾರದಲ್ಲಿ ಹೊಸ ಅಧ್ಯಾಯ ಬರೆದಿದೆ. ಕಡಿಮೆ ವೆಚ್ಚದಲ್ಲಿ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಿರುವ ಭಾರತೀಯ ರೈಲ್ವೇಗೆ ಇದೀಗ ನವರತ್ನ ಸ್ನಾನಮಾನ ನೀಡಲಾಗಿದೆ. ಕೇಂದ್ರ ಸರ್ಕಾರ ಸ್ಥಾನ ಮಾನ ನೀಡಿ ಗೌರವಿಸಿದೆ.
ಕೇಂದ್ರ ಸರ್ಕಾರದ ಸಂಸ್ಥೆಗಳ ಪೈಕಿ ನವರತ್ನ ಸ್ಥಾನಮಾನ ಪಡೆದ ಸಂಸ್ಥೆಗಳ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ರೈಲ್ವೆಯ ಲಿಸ್ಟ್ ಮಾಡಿದ ಏಳು ಸಂಸ್ಥೆಗಳಿಗೂ ನವರತ್ನ ಸ್ಥಾನ ಸಿಕ್ಕಿದೆ. ಈ ಸಾಧನೆಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅಭಿನಂದನೆ ಸಲ್ಲಿಸಿದ್ದಾರೆ. ಕಳೆದ ಆರ್ಥಿಕ ವರ್ಷದಲ್ಲಿ ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೊರೇಷನ್ 4,270 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಮತ್ತು 1,111 ಕೋಟಿ ಲಾಭ ಗಳಿಸಿತ್ತು. ಇಂಡಿಯನ್ ರೈಲ್ವೆ ಫೈನಾನ್ಸ್ ಕಾರ್ಪೊರೇಷನ್ 26,644 ಕೋಟಿ ವಾರ್ಷಿಕ ವಹಿವಾಟು ಮತ್ತು 6,412 ಕೋಟಿ ಲಾಭ ಗಳಿಸಿದೆ.
ಬೇಸಿಗೆಯಲ್ಲಿ ಕೂಲ್ ಆಗಿರಲು ಕಡಿಮೆ ದರದಲ್ಲಿ ರೈಲ್ವೇ ಲಡಾಖ್ ಪ್ರವಾಸ ಪ್ಯಾಕೇಜ್
ಏನಿದು ನವರತ್ನ ಸ್ಥಾನಮಾನ? ಇದರ ಉಪಯೋಗವೇನು?
ಕೇಂದ್ರ ಸರ್ಕಾರದಿಂದ ನವರತ್ನ ಸ್ಥಾನಮಾನ ಸಿಕ್ಕ ಮೇಲೆ ಸಂಸ್ಥೆಗಳಿಗೆ ಹೆಚ್ಚು ಸ್ವತಂತ್ರವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಪ್ರಮುಖವಾಗಿ ನವರತ್ನ ಸಂಸ್ಥೆಗಳು 1,000 ಕೋಟಿ ರೂಪಾಯಿ ವರೆಗೆ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೂಡಿಕೆ ಮಾಡಬಹುದು. ಅಥವಾ ಯೋಜನೆಗಳಲ್ಲಿ ಅನುಷ್ಠಾನ ಮಾಡಲು ಸಾಧ್ಯವಾಗುತ್ತದೆ. ಇದರಿಂದ ಭಾರತೀಯ ರೈಲ್ವೇಯ IRCTC ಹಾಗೂ IRFCಗೆ 1,000 ಕೋಟಿ ರೂಪಾಯಿ ವರೆಗೆ ಸರ್ಕಾರದ ಅನುಮತಿ, ಅನುಮೋದನೆ ಪಡೆಯದೇ ತಮ್ಮ ಯೋಜನೆಗಳಿಗೆ ವ್ಯಯ ಮಾಡಲು ಸಾಧ್ಯವಾಗುತ್ತದೆ.
ಇದರಿಂದ ಸ್ವತಂತ್ರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಅದನ್ನು ಜಾರಿಗೊಳಿಸಲು ಸಾಧ್ಯವಾಗುತ್ತದೆ. ನವರತ್ನ ಸ್ಥಾನ ಮಾನ ಪಡೆದ ಸಂಸ್ಥಗಳು ಯೋಜನೆ ಜಾರಿ, ನಿರ್ಧಾರ ತೆಗೆದುಕೊಳ್ಳುವ ವೇಗ ಇತರ ಸಂಸ್ಥೆಗಳಿಂತ ವೇಗವಾಗಿರುತ್ತದೆ. ಕಾರಣ ಇದಕ್ಕೆ ಸರ್ಕಾರದ ಅನುಮತಿಯ ಅವಶ್ಯಕತೆ ಇರುವುದಿಲ್ಲ. 1,000 ಕೋಟಿ ರೂಪಾಯಿ ವರೆಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲಿದೆ.
ಕೇಂದ್ರ ಸರ್ಕಾರ ಅಧೀನದಲ್ಲಿರುವ ಸಂಸ್ಥೆಗಳಿಗೆ ಸರ್ಕಾರ ಅದರ ವಹಿವಾಟು, ಲಾಭ, ಹೂಡಿಕೆ ಸೇರಿದಂತೆ ಹಲವು ಮಾನದಂಡಗಳನ್ನು ಆಧರಿಸಿ ಸ್ಥಾನಮಾನ ನೀಡುತ್ತದೆ. ಸೆಂಟ್ರಲ್ ಪಬ್ಲಿಕ್ ಎಂಟರ್ಪ್ರೈಸ್(CPSEs)ಗೆ ಈ ಸ್ಥಾನಮಾನಗಳನ್ನು ನೀಡಲಾಗುತ್ತದೆ. ಇದರಲ್ಲಿ ಮೂರು ವಿಧಗಳಿಗಳಿವೆ. ಮಹಾರತ್ನ, ನವರತ್ನ ಹಾಗೂ ಮಿನಿರತ್ನ.
ಪ್ರಯಾಣಿಕರಿಗೆ ಗುಡ್ ನ್ಯೂಸ್, ಮಂಗಳೂರು-ಗೋವಾ ಸ್ಪೆಷಲ್ ರೈಲು ಟಿಕೆಟ್ ದರ ಕೇವಲ 85 ರೂ
