ಬೇಸಿಗೆಯಲ್ಲಿ ಕೂಲ್ ಆಗಿರಲು ಕಡಿಮೆ ದರದಲ್ಲಿ ರೈಲ್ವೇ ಲಡಾಖ್ ಪ್ರವಾಸ ಪ್ಯಾಕೇಜ್
ಭಾರತೀಯ ರೈಲ್ವೇ ಮೂಲಕ ಅತೀ ಕಡಿಮೆ ವೆಚ್ಚದಲ್ಲಿ ಲಡಾಖ್ ಪ್ರವಾಸ ಮಾಡಲು ಸಾಧ್ಯವಿದೆ. ಈ ಬೇಸಿಗೆಯಲ್ಲಿ ಲಡಾಖ್ ಪ್ರವಾಸದ ಪ್ಯಾಕೇಜ್ ಎಷ್ಟಿದೆ?

ಲಡಾಖ್ ಟೂರ್ ಪ್ಯಾಕೇಜ್
ಲಡಾಖ್ ಇಂಡಿಯಾದಲ್ಲಿ ಬಹಳ ವಿಶೇಷವಾದ, ಸುಂದರವಾದ ಜಾಗ. ಇಲ್ಲಿ ನೀವು ವರ್ಷದಲ್ಲಿ ಕೆಲವು ತಿಂಗಳು ಮಾತ್ರ ಪ್ರಯಾಣಿಸಲು ಸಾಧ್ಯ. ಪ್ರಪಂಚದಲ್ಲೇ ಎತ್ತರವಾದ ಉಪ್ಪು ನೀರಿನ ಸರೋವರ ಪಾಂಗಾಂಗ್ ಇಲ್ಲಿದೆ. ಭಾರತದ ಅತೀವ ಸುಂದರ ಪ್ರವಾಸಿ ತಾಣವಾಗಿ ಲಡಾಖ್ ಹೊರಹೊಮ್ಮಿದೆ.
IRCTC ಲಡಾಖ್ ಟೂರ್
ಲಡಾಖ್‌ನಲ್ಲಿ ಎತ್ತರವಾದ ಬೆಟ್ಟಗಳಿರುವುದರಿಂದ ಇದನ್ನು "ಎತ್ತರವಾದ ಕಣಿವೆಗಳ ಭೂಮಿ" ಅಂತಾನೂ ಕರೆಯುತ್ತಾರೆ. ನೀವು ಕೂಡ ಲಡಾಖ್ ಟ್ರಿಪ್ ಹೋಗಬೇಕು ಅಂದುಕೊಂಡಿದ್ರೆ, ನಿಮಗೊಂದು ಒಳ್ಳೆ ಅವಕಾಶ ಇದೆ.
IRCTC ಲಡಾಖ್ ಟೂರ್ ಪ್ಯಾಕೇಜ್ ದರ
ಭಾರತೀಯ ರೈಲ್ವೇ ಇಜೀಗ ಸೂಪರ್ ಲಡಾಖ್ ಟೂರ್ ಪ್ಯಾಕೇಜ್ ನೀಡುತ್ತಿದೆ. ಐ.ಆರ್.ಸಿ.ಟಿ.ಸಿ. ಈ ಟೂರ್ ಪ್ಯಾಕೇಜ್ 6 ರಾತ್ರಿ, 7 ದಿನ ಇರುತ್ತದೆ. ಈ ಟೂರ್ ಪ್ಯಾಕೇಜ್ ದರ ರೂ.60,700.
IRCTC ಲಡಾಖ್ ಟೂರ್ ಪ್ಯಾಕೇಜ್ ಆನ್‌ಲೈನ್ ಬುಕಿಂಗ್
ಶಾಂತಿ ಸ್ತೂಪ, ಲೇ ಪ್ಯಾಲೇಸ್, ಗುರುದ್ವಾರ ಪತ್ತರ್ ಸಾಹಿಬ್, ನುಬ್ರಾ ವ್ಯಾಲಿಯನ್ನೂ ಒಳಗೊಂಡಂತೆ ಬಹಳ ಅದ್ಭುತವಾದ ಪ್ರದೇಶಗಳನ್ನು ನೀವು ನೋಡಬಹುದು. ಈ IRCTC ಪ್ಯಾಕೇಜ್ ಮೂಲಕ ಲಡಾಖ್ ಟ್ರಿಪ್ ಮಾಡಬಹುದು.
IRCTC ಲಡಾಖ್ ಟೂರ್ ಬುಕಿಂಗ್
https://www.irctctourism.com/pacakage_description?packageCode=WMA49 ಅನ್ನೋ ವೆಬ್‌ಸೈಟ್‌ಗೆ ಹೋಗಿ ರೈಲ್ವೆ ನೀಡುವ ಲಡಾಖ್ ಟೂರ್ ಪ್ಯಾಕೇಜ್‌ನಲ್ಲಿ ಬುಕ್ ಮಾಡಿಕೊಳ್ಳಬಹುದು.
IRCTC ಲಡಾಖ್ ಟೂರ್ ಪ್ಲೇಸಸ್
IRCTC ನೀಡುವ ಈ ಪ್ಯಾಕೇಜ್‌ನಿಂದ, ನೀವು ಲಡಾಖ್‌ನ ಸೌಂದರ್ಯವನ್ನು ಶಾಂತವಾಗಿ ಆನಂದಿಸಬಹುದು. ಲಡಾಖ್ ಟ್ರಿಪ್ ಪ್ಲಾನ್ ಮಾಡಲು ಏಪ್ರಿಲ್‌ನಿಂದ ಜುಲೈವರೆಗೆ ಒಳ್ಳೆ ಟೈಮ್.
IRCTC ಲಡಾಖ್ ಟೂರ್
ಲಡಾಖ್ ಟ್ರಿಪ್‌ನಲ್ಲಿ ನೀವು ಬೈಕ್ ರೈಡಿಂಗ್ ಮಾಡಬಹುದು. ಲಡಾಖ್ ಟ್ರಿಪ್‌ನಲ್ಲಿ ಪಾಂಗಾಂಗ್, ತ್ಸೋ ಮೊರಿರಿ ಸರೋವರದ ಹತ್ತಿರ ಕ್ಯಾಂಪಿಂಗ್ ಮಾಡಬಹುದು. ಲಡಾಖ್‌ನಲ್ಲಿ ಟ್ರೆಕ್ಕಿಂಗ್ ಮಾಡೋದು ಸೂಪರ್ ಎಕ್ಸ್‌ಪೀರಿಯೆನ್ಸ್.