* ಗೋರಖ್‌ನಾಥ್‌ ದೇವಾಲಯದ ಬಳಿ ದಾಳಿ ನಡೆಸಿದ ದಾಳಿಕೋರ ಮುರ್ತಜಾ ಅಬ್ಬಾಸಿ* ಗೋರಖ್‌ಪುರ ದಾಳಿಕೋರನಿಂದ ಪೊಲೀಸರ ಮೇಲೇ ದಾಳಿ!* ತನಿಖೆ ವೇಳೆ ಪೊಲೀಸರನ್ನು ಗುದ್ದಿ, ಉಗುರಿನಿಂದ ಪರಚಿದ ಅಬ್ಬಾಸಿ

ಲಖನೌ(ಏ.16): ಗೋರಖ್‌ನಾಥ್‌ ದೇವಾಲಯದ ಬಳಿ ದಾಳಿ ನಡೆಸಿದ ದಾಳಿಕೋರ ಮುರ್ತಜಾ ಅಬ್ಬಾಸಿ ತನಿಖೆಯ ವೇಳೆಗೆ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದಾನೆ ಎಂದು ಪೊಲೀಸ ಅಧಿಕಾರಿಗಳು ಹೇಳಿದ್ದಾರೆ. ಈತನು ಪೊಲೀಸರಿಗೆ ಪ್ಲಾಸ್ಟರ್‌ ಮಾಡಿದ ಮೊಣಕೈಯಿಂದ ಪೊಲೀಸರಿಗೆ ಗುದ್ದಿದ್ದಾನೆ ಅಲ್ಲದೇ ಇನ್ನೊಬ್ಬ ಪೊಲೀಸ್‌ ಅಧಿಕಾರಿಗೆ ಉಗುರಿನಿಂದ ಪರಚಿದ್ದಾನೆ.

ಅಬ್ಬಾಸಿಯ ವಿಚಾರಣೆಯ ವೇಳೆಗೆ ತೋರಿದ ಆಕ್ರಮಣಕಾರಿ ನಡುವಳಿಕೆಯನ್ನು ಹಿನ್ನೆಲೆಯಲ್ಲಿ ಭಯೋತ್ಪಾದನಾ ನಿಗ್ರಹ ದಳ ಕಠಿಣ ಕ್ರಮವನ್ನು ಕೈಗೊಂಡಿದೆ. ಮುರ್ತಜಾ ಪೊಲೀಸರೊಂದಿಗೆ ಮಾತ್ರವಲ್ಲದೇ ಆರೋಗ್ಯ ಅಧಿಕಾರಿಗಳ ಜೊತೆಗೂ ಅಸಭ್ಯ ರೀತಿಯಲ್ಲಿ ವರ್ತಿಸಿದ್ದಾನೆ ಎನ್ನಲಾಗಿದೆ.

ಇದಲ್ಲದೇ ಮುರ್ತಜಾ ತಾನು ದೇಶದಲ್ಲಿ ಮುಸ್ಲಿಮರ ಶರಿಯಾ ಕಾನೂನನ್ನು ದೇಶದಲ್ಲಿ ಜಾರಿಗೆ ತರಲು ಬಯಸುತ್ತೇನೆ. ಜನರಲ್ಲಿ ಭೀತಿ ಹುಟ್ಟಿಸಲು ಗೋರಖ್‌ನಾಥ ದೇವಾಲಯದಲ್ಲಿ ದಾಳಿ ನಡೆಸಿದ್ದೆ ಎಂದು ವಿಚಾರಣೆಯ ವೇಳೆ ಬಾಯಿ ಬಿಟ್ಟಿದ್ದಾನೆ.

Yogi Adityanath Swearing: ಹೋಳಿಗೂ ಮೊದಲೇ ಯೋಗಿ ಪ್ರಮಾಣ ವಚನ: ಪ್ರಧಾನಿ ಮೋದಿ, ಬಿಜೆಪಿ ಸಿಎಂಗಳಿಗೆ ಆಹ್ವಾನ?

ಐಐಟಿ ಪದವೀಧರನಾದ ಅಬ್ಬಾಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಠಾಧೀಶರಾಗಿದ್ದ ಗೋರಖ್‌ನಾಥ್‌ ದೇವಾಲಯದ ಬಳಿ ನಿಯುಕ್ತರಾದ ಇಬ್ಬರು ಪೊಲೀಸರ ಮೇಲೆ ಆಯುಧದಿಂದ ದಾಳಿ ನಡೆಸಿದ್ದನು.

ಗೋರಖ್‌ಪುರ ದೇಗುಲದ ಮೇಲೆ ದಾಳಿ ನಡೆಸಿದ್ದೇಕೆ?

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಸ್ವಕ್ಷೇತ್ರ ಗೋರಖಪುರದ ಗೋರಖನಾಥ ಮಂದಿರದ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಐಐಟಿ ಪದವೀಧರ ಅಹ್ಮದ್‌ ಮುರ್ತಜಾ ಅಬ್ಬಾಸಿ, ‘ಸಿಎಎ, ಎನ್‌ಆರ್‌ಸಿ ವಿವಾದ ಹಾಗೂ ಇತ್ತೀಚೆಗೆ ಕರ್ನಾಟಕದ ಹಿಜಾಬ್‌ ನಿರ್ಬಂಧ ತೀರ್ಮಾನದಿಂದ ನೊಂದಿದ್ದೆ. ಹೀಗಾಗಿ ಹತಾಶನಾಗಿ ದಾಳಿಗೆ ನಿರ್ಧರಿಸಿದ್ದೆ’ ಎಂದು ಹೇಳಿದ್ದಾನೆ. ಅಬ್ಬಾಸಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಈ ವೇಳೆ ಆತ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ಮೂಲಗಳು ಹೇಳಿವೆ.

‘ಮುಸ್ಲಿಮರ ವಿರುದ್ಧ ಸಿಎಎ ಹಾಗೂ ಎನ್‌ಆರ್‌ಸಿಯನ್ನು ಸರ್ಕಾರ ಹೇರುತ್ತಿದೆ. ಕರ್ನಾಟಕದಲ್ಲಿ ಕೂಡ ಮುಸ್ಲಿಮರಿಗೆ ಹಿಜಾಬ್‌ ಧರಿಸಲು ನಿರ್ಬಂಧಿಸಲಾಗಿದೆ. ನಮ್ಮ ಸಹಾಯಕ್ಕೆ ಯಾರೂ ಬರುತ್ತಿಲ್ಲ. ಹೀಗಾಗಿ ಇದಕ್ಕೆ ಪ್ರತೀಕಾರವಾಗಿ ಏನೋ ಮಾಡಬೇಕು ಎಂದು ನಿರ್ಧರಿಸಿದೆ. ನಾನು ಎಷ್ಟುಹತಾಶ ಆಗಿದ್ದೆ ಎಂದರೆ ನಿದ್ದೆ ಕೂಡ ಬರುತ್ತಿರಲಿಲ್ಲ’ ಎಂದಿದ್ದಾನೆ ಎಂದು ತಿಳಿದುಬಂದಿದೆ.

ಗೋರಖ್‌ಪುರ ದೇಗುಲದಲ್ಲಿ ಪೊಲೀಸರ ಮೇಲೆ ದಾಳಿ ಮಾಡಿದ ವ್ಯಕ್ತಿ ಬಾಂಬೆ ಐಐಟಿ ಗ್ರಾಜ್ಯುಯೇಟ್

ಐಸಿಸ್‌ಗೆ ಹಣ:

ಈ ನಡುವೆ, ನೇಪಾಳಕ್ಕೂ ಭೇಟಿ ನೀಡಿದ್ದ ಅಬ್ಬಾಸಿ, ಅಲ್ಲಿನ ಬ್ಯಾಂಕ್‌ನಿಂದಲೇ ಸಿರಿಯಾದಲ್ಲಿ ಐಸಿಸ್‌ ಉಗ್ರರಿಗೆ ಹಣ ರವಾನಿಸಿದ್ದ ಎಂದೂ ತಿಳಿದುಬಂದಿದೆ. ಇದಕ್ಕಾಗಿ ಆತ ಪೇ ಪಾಲ್‌ ಆ್ಯಪ್‌ ಬಳಸಿದ್ದ. ಸಿರಿಯಾದಲ್ಲಿನ ಐಸಿಸ್‌ ಉಗ್ರರ ಜತೆ ತನ್ನ ಆಪ್ತ ಅಬ್ದುಲ್‌ ರೆಹಮಾನ್‌ ಜತೆಗೂಡಿ ಕಾನ್ಫರೆನ್ಸ್‌ ಕಾಲ್‌ನಲ್ಲೂ ಮಾತನಾಡಿದ್ದ ಎಂದು ವರದಿಗಳು ಹೇಳಿವೆ.

ಅಬ್ಬಾಸಿ ಕೆನಡಾ ವೀಸಾ ಕೂಡ ಇತ್ತೀಚೆಗೆ ಪಡೆದಿದ್ದ. ಇನ್ನೇನು ಕೆನಡಾಗೆ ಹೋಗುವನಿದ್ದ. ಆದರೆ ಆತನ ಚಟುವಟಿಕೆ ಬಗ್ಗೆ ತಮಗೆ ಏನೂ ಗೊತ್ತಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ.