ಮುಂಬೈ ಲೋಕಲ್ ಟ್ರೈನಲ್ಲಿ ವಿತ್ತ ಸಚಿವೆ ಪಯಣ, ಸಹ ಪ್ರಯಾಣಿಕರು ಪುಲ್ ಖುಷ್!
ಇತ್ತೀಚೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ದಿಲ್ಲಿ ಮೆಟ್ರೋನಲ್ಲಿ ಪಯಾಣಿಸಿ, ಪ್ರಯಾಣಿಕರ ಜೊತೆ ಮಾತುಕತೆ ನಡೆಸಿದ್ದರು. ಆ ಮೂಲಕ ತಮ್ಮ ಬಹುದಿನದ ಮೆಟ್ರೋ ಪಯಮದ ಆಸೆಯನ್ನೂ ಈಡೇರಿಸಿಕೊಂಡಿದ್ದರು. ಪ್ರಧಾನಿ ಮೋದಿ ಸಹ ಮೆಟ್ರೋನಲ್ಲಿ ಪಯಣಿಸಿದ್ದರು. ಇದೀಗ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಸರದಿ? ಯಾವ ಟ್ರೈನಲ್ಲಿ ಪಯಣಿಸಿದರು?
ಪ್ರಧಾನಿ ಮೋದಿ ಸರಕಾರದ ಪ್ರಭಾವಿ ಖಾತೆ ಹೊಂದಿರುವ ನಿರ್ಮಲಾ ಸೀತರಾಮನ್, ತಮ್ಮ ವಿಶ್ವಾಸಯುತ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡಬಲ್ಲರು.
ಇತ್ತೀಚೆಗೆ ಮೋದಿ ಸರಕಾರ-2ರ ಕಡೆಯ ಬಜೆಟ್ ಮಂಡಿಸಿ, ಯಾವುದ ಗ್ಯಾರಂಟಿ ಯೋಜನೆಯನ್ನಾಗಲಿ ಅಥವಾ ಜನಪ್ರಿಯ ಯೋಜನೆಯನ್ನಾಗಲಿ ಘೋಷಿಸದೇ, ಮುಂದಿನ ಸರಕಾರ ನಮ್ಮದೇ ಎನ್ನುವ ದಿಟ್ಟ ಸಂದೇಶ ಸಾರಿ, ಎಲ್ಲರಿಗೂ ಅಚ್ಚರಿ ಮೂಡಿಸಿದರು.
ಮೂಲತಃ ತಮಿಳುನಾಡಿನವರಾದರೂ ನಿರ್ಮಲಾ ಕರ್ನಾಟಕದ ರಾಜ್ಯಸಭಾ ಸದಸ್ಯೆ. ಈ ವರ್ಷದ ಚುನಾವಣೆಯಲ್ಲಿ ಬೆಂಗಳೂರು ಲೋಕಸಭಾ ಕ್ಷೇತ್ರದಿಂದಲೇ ನಿರ್ಮಲಾ ಸ್ಪರ್ಧಿಸುತ್ತಾರೆಂಬ ಊಹಾಪೋಹಗಳಿದ್ದು ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ.
ಇದೀಗ ಈ ಎಲ್ಲ ಕಾರಣಗಳಿಂದ ನಿರ್ಮಲಾ ಸುದ್ದಿಯಾಗುತ್ತಿರುವುದಲ್ಲ. ಬದಲಾಗಿ ಮುಂಬೈನ ಘಟಕೋಪರ್‌ನಿಂದ ಕಲ್ಯಾಣ್ ತನಕ ಲೋಕಲ್ ಟ್ರೈನಲ್ಲಿ ಪಯಣಿಸಿದ್ದು ಸುದ್ದಿಯಾಗುತ್ತಿದೆ.
ತಮ್ಮ ಸಹ ಪಯಣಿಕರಿಗೆ ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಿರ್ಮಲಾ ಜೊತೆ ಪೋಟೋಸ್ ತೆಗೆಯಿಸಿಕೊಂಡ ಸಹ ಪ್ರಯಾಣಿಕರು ಖುಷಿ ಪಟ್ಟಿದ್ದಾರೆ.
ಕ್ರೀಂ ಬಣ್ಣದ ಸೀರೆಯುಟ್ಟ ವಿತ್ತ ಸಚಿವರು ಸಹ ಪ್ರಯಾಣಿಕರೊಂದಿಗೆ ಮಾತನಾಡುತ್ತಾ ಪಯಣ ಮುಗಿಸಿದ ವೀಡಿಯೋ ಸಹ ಸೋಷಿಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ವಿದೇಶ ವಿಶ್ವವಿದ್ಯಾಲಯದಲ್ಲಿ ಓದಿದ ನಿರ್ಮಲಾ, ತಮ್ಮ ಸರಳತೆಯಿಂದಲೇ ಹೆಸರು ಮಾಡಿದವರು. ಅದ್ಭುತವಾಗಿ ಇಂಗ್ಲಿಷ್ ಮಾತನಾಡುವ ಸಚಿವೆ, ವಿರೋಧ ಪಕ್ಷವನ್ನು ತಣ್ಣಗಾಗಿಸುವಲ್ಲ ನಿಸ್ಸೀಮರು.
ಖಡಕ್ ಮಾತಿನಿಂದ ಎಲ್ಲರ ಬಾಯಿ ಮುಚ್ಚಿಸುವ ನಿರ್ಮಲಾ ಸೀತರಾಮನ್, ತಮ್ಮ ಸರಳತೆಗೂ ಹೆಸರವಾಸಿ. ಹಿಂದೆ ಸುಷ್ಮಾ ಸ್ವರಾಜ್ ವಿದೇಶಿ ವ್ಯವಹಾರ ಸಚಿವೆಯಾಗಿದ್ದಾಗ ಸಾಕಷ್ಟು ಜನ ಸ್ನೇಹಿಗಳಿಗೆ ಕೆಲಸಗಳಿಗೆ ಹೆಸರುವಾಸಿಯಾಗಿದ್ದರು. ಅವರ ದಾರಿಯಲ್ಲಿಯೇ ಸಾಗುತ್ತಿದ್ದಾರೆ ನಿರ್ಮಲಾ ಸೀತರಾಮನ್.