Asianet Suvarna News Asianet Suvarna News

ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ: ಡೇಟ್ & ಡೀಟೆಲ್ಸ್ ಹೀಗಿದೆ

ವೈಷ್ಣೋ ದೇವಿ ಭಕ್ತರಿಗೆ ಸಿಹಿ ಸುದ್ದಿ, ದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಆರಂಭ | ಡೇಟ್ & ಡೀಟೆಲ್ಸ್ ಚೆಕ್ ಮಾಡಿ

Good news for Vaishno Devi devotees Railways to resume Delhi-Katra Vande Bharat Express services from this date dpl
Author
Bangalore, First Published Jan 1, 2021, 4:00 PM IST

COVID ಸಾಂಕ್ರಾಮಿಕ ರೋಗದಿಂದಾಗಿ ಸೇವೆಗಳನ್ನು ನಿಲ್ಲಿಸಿದ ತಿಂಗಳ ನಂತರ ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್ ತನ್ನ ಸೇವೆಗಳನ್ನು ಜನವರಿ 1 ರಿಂದ ಪುನರಾರಂಭಿಸಲಿದೆ.

ನವದೆಹಲಿ(ಜ.01): ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಟ್ವಿಟ್ಟರ್‌ನಲ್ಲಿ ಸಿಹಿ ಸುದ್ದಿ ಕೊಟ್ಟಿದ್ದಾರೆ.  "ಯಾತ್ರಾರ್ಥಿಗಳನ್ನು ವೈಷ್ಣೋ ದೇವಿ ದೇಗುಲಕ್ಕೆ ಕರೆದೊಯ್ಯುವ ದೆಹಲಿ-ಕತ್ರ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಪುನರಾರಂಭಿಸಲಿದೆ.

2021ಕ್ಕೆ ಹನ್ನೊಂದು ವಿಶೇಷ ಅಹವಾಲು

 ಜನವರಿ 1 ರಿಂದ ಮತ್ತೊಮ್ಮೆ ತನ್ನ ಸೇವೆಗಳನ್ನು ಆರಂಭಿಸಲಿದ್ದು, ಭಾರತದ ಆಧುನಿಕ ರೈಲು ಮತ್ತೊಮ್ಮೆ ಭಕ್ತರನ್ನು ಸ್ವಾಗತಿಸಲು ಸಿದ್ಧವಾಗಿದೆ. ನವದೆಹಲಿ-ಕತ್ರಾ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಕಳೆದ ವರ್ಷ ಅಕ್ಟೋಬರ್ 3 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಫ್ಲ್ಯಾಗ್ ಮಾಡಿದ್ದರು.

ಕಳೆದ ವರ್ಷ ಅಕ್ಟೋಬರ್ 5 ರಿಂದ ರೈಲು ಪ್ರಯಾಣಿಕರಿಗಾಗಿ ತನ್ನ ನಿಯಮಿತ ಸೇವೆಗಳನ್ನು ಪ್ರಾರಂಭಿಸಿತು. ಈ ವರ್ಷದ ಮಾರ್ಚ್‌ನಲ್ಲಿ ಕೊರೋನಾದಿಂದಾಗಿ ವಂದೇ ಭಾರತದ ಸೇವೆಗಳನ್ನು ನಿಲ್ಲಿಸಲಾಯಿತು. ಭಾರತೀಯ ರೈಲ್ವೆ 1,768 ರಲ್ಲಿ 1,089 ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳನ್ನು ನಿರ್ವಹಿಸುತ್ತಿದೆ.

Follow Us:
Download App:
  • android
  • ios