Asianet Suvarna News Asianet Suvarna News

Goa polls 2022: ಎಎಪಿ ಅಧಿಕಾರಕ್ಕೆ ಬಂದರೆ ಪ್ರತಿ ಮಹಿಳೆಗೆ ತಿಂಗಳಿಗೆ 1 ಸಾವಿರ ರೂ.

ಫೆಬ್ರವರಿಯಲ್ಲಿ ಗೋವಾ ವಿಧಾನಸಭಾ ಚುನಾವಣೆ ಸಾಧ್ಯತೆ
ಕಾಂಗ್ರೆಸ್‌ನಿಂದ ಸ್ಕ್ರೀನಿಂಗ್‌ ಕಮಿಟಿ ರಚನೆ
ಎಎಪಿಯಿಂದ ಮಹಿಳೆಯರಿಗೆ ಮಾಸಾಶನದ ಭರವಸೆ
 

Goa polls Kejriwal promises to give Rs 1000 to every woman if AAP come to power akb
Author
Bangalore, First Published Dec 5, 2021, 7:04 PM IST

ಪಣಜಿ: ಮುಂಬರುವ ಗೋವಾ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಪಕ್ಷ ಅಧಿಕಾರಕ್ಕೆ ಬಂದರೆ ಗೋವಾ ರಾಜ್ಯದ ಪ್ರತಿ ಮಹಿಳೆಗೆ ತಿಂಗಳಿಗೆ 1  ಸಾವಿರ ರೂಪಾಯಿಯಂತೆ ಮಾಸಾಶನ ನೀಡಲಾಗುವುದು ಎಂದು ಆಮ್‌ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ  ಮುಖ್ಯಮಂತ್ರಿಯೂ ಆಗಿರುವ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ. ಗೋವಾದ ನವೆಲಿಮ್‌( Navelim)ನಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಕೇಜ್ರಿವಾಲ್‌, ಗೃಹ ಆಧಾರ್‌ ಹೆಸರಿನಲ್ಲಿ ಸಿಗುವ ಮಾಸಾಶನವನ್ನು 1500 ರೂಪಾಯಿಯಿಂದ 2500 ರೂಪಾಯಿಗಳಿಗೆ ಏರಿಕೆ ಮಾಡಲಾಗುವುದು ಎಂದರು.  18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಮಹಿಳೆಗೂ 1000 ರೂಪಾಯಿ ನೀಡಲಾಗುವುದು. ಇದು ಜಗತ್ತಿನಲ್ಲಿಯೇ ತುಂಬಾ ಪರಿಣಾಮಕಾರಿಯಾದಂತಹ ಮಹಿಳಾ ಸಬಲೀಕರಣ ಕಾರ್ಯಕ್ರಮ ಎಂದು ಅವರು ಹೇಳಿದರು. 

'ಕೆಲವರು ಹೇಳುತ್ತಾರೆ ಕೇಜ್ರಿವಾಲ್‌ ಉಚಿತವಾಗಿ ನೀಡುತ್ತಾರೆ ಎಂದು ಇಲ್ಲಿಯವರೆಗೆ ತೆರಿಗೆದಾರರ ಹಣದಿಂದ ಕೇವಲ ಸಚಿವರು ಎಲ್ಲವನ್ನು ಉಚಿತವಾಗಿ ಪಡೆಯುತ್ತಿದ್ದರು. ನಾಯಕರು ಪಡೆಯುವಂತಹ ಉಚಿತ ಸವಲತ್ತುಗಳನ್ನು ನಾಗರಿಕರು ಪಡೆಯುವಂತಾಗಬೇಕು. ಅದು ಅವರ ಹಕ್ಕು' ಎಂದು ಕೇಜ್ರಿವಾಲ್‌ ಹೇಳಿದರು. ನಾವು ಈ ಯೋಜನೆಯನ್ನು ರಾಜ್ಯದ ಎಲ್ಲಾ ಮಹಿಳೆಯರಿಗೆ ನೀಡಲು ಬಯಸುತ್ತೇವೆ. ಇದರ ಅಗತ್ಯ ತಮಗಿಲ್ಲ ಎಂದು ಭಾವಿಸುವವರು ಇದರಿಂದ ಹೊರಗುಳಿಯಬಹುದು. ಗೋವಾದಲ್ಲಿ ಇಂತಹ ಯೋಜನೆಗಳಿಗೆ ಹಣ ನೀಡಲು ಹಣಕಾಸಿನ ಕೊರತೆ ಇಲ್ಲ ಎಂದು ಕೇಜ್ರಿವಾಲ್ ಹೇಳಿದರು. 

AAP Mission Punjab: ಆಟೋ ಚಾಲಕನ ಮನೆಗೆ ತೆರಳಿ ಭೋಜನ ಸವಿದ ಕೇಜ್ರಿವಾಲ್‌

ರಾಜ್ಯದ ಬಜೆಟ್‌ ಮೊತ್ತ 22,000 ಕೋಟಿ, ಇದರಲ್ಲಿ ಸರಿಸುಮಾರು 20 ಶೇಕಡಾ ಅಂದರೆ 4,400 ಕೋಟಿ ರೂ. ಭ್ರಷ್ಟಾಚಾರಕ್ಕೆ ಹೋಗುತ್ತದೆ ಎಂದು ಕೇಜ್ರಿವಾಲ್‌ ಆರೋಪಿಸಿದರು. ಭ್ರಷ್ಟಾಚಾರಕ್ಕೆ ಹೋಗುವಂತಹ ಈ ಹಣವನ್ನು ನಾವು ಮಹಿಳೆಯರ ಸಬಲೀಕರಣದಂತಹ ಯೋಜನೆಗಳಿಗೆ ಬಳಸುತ್ತೇವೆ. ಗೋವಾದಲ್ಲಿ ತಾನು ನೀಡಿರುವ ಭರವಸೆಗಳ ಒಟ್ಟು ವಾರ್ಷಿಕ ವೆಚ್ಚ 1,000 ಕೋಟಿಗಿಂತಲೂ ಕಡಿಮೆ ಎಂದು ಅರವಿಂದ್ ಕೇಜ್ರಿವಾಲ್‌ ಹೇಳಿದರು. 

ಮುಂಬರುವ ಗೋವಾ ವಿಧಾನಸಭೆ ಚುನಾವಣೆಯಲ್ಲಿ ಎಲ್ಲಾ 40 ವಿಧಾನಸಭಾ ಕ್ಷೇತ್ರಗಳಲ್ಲೂ ಆಮ್‌ ಆದ್ಮಿ ಪಾರ್ಟಿ ಸ್ಪರ್ಧಿಸಲಿದೆ ಎಂದು ಎಎಪಿ ಮೂಲಗಳು ತಿಳಿಸಿವೆ. ಆಡಳಿತರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌, ಮಮತಾ ಬ್ಯಾನರ್ಜಿ(Mamata Banerjee) ನೇತೃತ್ವದ ತೃಣಮೂಲ ಕಾಂಗ್ರೆಸ್‌ ಹಾಗೂ ಶಿವಸೇನೆ(Shiv Sena) ಹಾಗೂ ಇತರ ಪಕ್ಷಗಳು ಇಲ್ಲಿ ಮುಂದಿನ ಚುನಾವಣೆಗೆ ಸ್ಪರ್ಧಿಸಲಿವೆ. 

ತೃಣಮೂಲ ಕಾಂಗ್ರೆಸ್‌ನಿಂದ ಗೋವಾ ಚುನಾವಣೆಯಲ್ಲಿ ಸ್ಪರ್ಧೆ ಇಂಗಿತ

2017ರ ಗೋವಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷವು  40 ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕೇವಲ ಒಂದು ಸೀಟು ಗೆಲ್ಲಲು ಕೂಡ ವಿಫಲವಾಗಿತ್ತು. 17 ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಭಾರತೀಯ ಜನತಾ ಪಾರ್ಟಿ( BJP) ಆ ಸಂದರ್ಭದಲ್ಲಿ ಕೆಲವು ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಶಾಸಕರು ಹಾಗೂ ಪ್ರಾದೇಶಿಕ ಪಕ್ಷಗಳಿಂದ ಗೆದ್ದ ಶಾಸಕರೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತು. 

ಮುಂಬರುವ ಗೋವಾ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಟು ಕಾಂಗ್ರೆಸ್‌ ಕೂಡ ಪಕ್ಷ ಸಂಘಟನೆಯಲ್ಲಿ ಹಲವಾರು ಬದಲಾವಣೆ ಮಾಡಿದೆ.  ರಾಜ್ಯದ ಕಾಂಗ್ರೆಸ್ ಘಟಕವನ್ನು ಅಧ್ಯಕ್ಷ ಗಿರೀಶ್ ಚೋಡಾನಕರ್ ಅವರೇ ಮುನ್ನಡೆಸಲಿದ್ದಾರೆ. ಉಳಿದಂತೆ 34 ಕಾರ್ಯದರ್ಶಿಗಳು, 21 ಕಾರ್ಯಕಾರಿ ಸಮಿತಿ ಸದಸ್ಯರು, 19 ವಿಶೇಷ ಆಹ್ವಾನಿತರನ್ನು ನೇಮಕ ಮಾಡಲಾಗಿದೆ.

ಕಾಂಗ್ರೆಸ್‌ ಈಗಾಗಲೇ  ಸ್ಕ್ರೀನಿಂಗ್ ಕಮಿಟಿಯನ್ನು ರಚಿಸಿದ್ದು, ರಜನಿ ಪಾಟೀಲ್(Rajni Patil)ಕಮಿಟಿ ಅಧ್ಯಕ್ಷರಾಗಿದ್ದು, ಹೈಬಿ ಈಡನ್ ಮತ್ತು ಧ್ರುವ ನಾರಾಯಣ್ (Dhruva Narayan)ಸದಸ್ಯರಾಗಿದ್ದಾರೆ. ಪದನಿಮಿತ್ತ ಸದಸ್ಯರಾಗಿ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್(Dinesh Gundurao), ಪಿಸಿಸಿ ಅಧ್ಯಕ್ಷ ಗಿರೀಶ್ ಚೋಡಂಕರ್(Girish Chodankar) ಮತ್ತು ಪ್ರತಿಪಕ್ಷ ನಾಯಕ ದಿಗಂಬರ್ ಕಾಮತ್(Digambar Kamath) ಇದ್ದಾರೆ. ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯಲ್ಲಿ ಸ್ಕ್ರೀನಿಂಗ್ ಕಮಿಟಿ(Screening Committee)ಪ್ರಮುಖ ಪಾತ್ರವಹಿಸುತ್ತದೆ.

Follow Us:
Download App:
  • android
  • ios