ಹೃದಯಾಘಾತದಿಂದ ಗೋವಾ ಪೊಲೀಸ್ ಮಹಾ ನಿರ್ದೇಶಕ ಸಾವು| ರಾಷ್ಟ್ರ ರಾಜಧಾನಿಗೆ ಅಧಿಕೃತ ಭೇಟಿ ನೀಡಿದ್ದ ಪ್ರಣಬ್ ನಂದಾ| 1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರಣಬ್ ನಂದಾ|  ಪ್ರಣಬ್ ನಂದಾ ಅಕಾಲಿಕ ಮರಣಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂತಾಪ|

ನವದೆಹಲಿ(ನ.16): ರಾಷ್ಟ್ರ ರಾಜಧಾನಿಗೆ ಅಧಿಕೃತ ಭೇಟಿ ನೀಡಿದ್ದ ಗೋವಾ ಪೊಲೀಸ್ ಮಹಾ ನಿರ್ದೇಶಕ ಪ್ರಣಬ್ ನಂದಾ, ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

Goa Director General of Police(DGP) Pranab Nanda passes away in Delhi after suffering a cardiac arrest. pic.twitter.com/WXMwDet8mi

Scroll to load tweet…

1988ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಪ್ರಣಬ್ ನಂದಾ, ಅರುಣಾಚಲ ಪ್ರದೇಶ, ಮಿಜೋರಾಂ ಸೇರಿದಂತೆ ಹಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ ಮಾರ್ಚ್ ತಿಂಗಳಿನಲ್ಲಿ ಗೋವಾ ಪೊಲೀಸ್ ಮಾಹಾ ನಿರ್ದೇಶಕರಾಗಿ ನಂದಾ ಅಧಿಕಾರ ವಹಿಸಿಕೊಂಡಿದ್ದರು. 

ಪ್ರಣಬ್ ನಂದಾ ಅವರ ಪತ್ನಿ ಕೂಡ ಪಾಂಡಿಚೆರಿಯಲ್ಲಿ ಪೊಲೀಸ್ ಮಹಾ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Scroll to load tweet…

ಇನ್ನು ಪ್ರಣಬ್ ನಂದಾ ಅಕಾಲಿಕ ಮರಣಕ್ಕೆ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆಘಾತ ವ್ಯಕ್ತಪಡಿಸಿದ್ದಾರೆ. ಪ್ರಣಬ್ ನಂದಾ ಸಾವು ಆಘಾತ ಹಾಗೂ ಅತೀವ ಬೇಸರವನ್ನು ತರಿಸಿದೆ ಎಂದು ಸಾವಂತ್ ಟ್ವಿಟ್ ಮಾಡಿದ್ದಾರೆ.