ಪಣಜಿ(ಫೆ.09): ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಗೋವಾದ ಕ್ಯಾಥೋಲಿಕ್ ಚರ್ಚ್‌ನ ಆರ್ಚ್ ಬಿಷಪ್ ರೆವರೆಂಡ್ ಫಿಲಿಪ್ ನೆರಿ ಫೆರಾವೋ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಿಎಎ ದೇಶದಲ್ಲಿ ಧಾರ್ಮಿಕ ಅಸಮಾನತೆಯನ್ನು ಸೃಷ್ಟಿಸಲಿದ್ದು, ಈ ಕೂಡಲೇ ಕಾನೂನನ್ನು ಹಿಂಪಡೆಯ ಬೇಕು ಎಂದು  ರೆವರೆಂಡ್ ಫಿಲಿಪ್ ನೆರಿ ಫೆರಾವೋ ಆಗ್ರಹಿಸಿದ್ದಾರೆ.

ಅಲ್ಲದೇ ದೇಶಾದ್ಯಂತ ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಜಾರಿಯನ್ನು ಕೇಂದ್ರ ಸರ್ಕಾರ ಈ ಕೂಡಲೇ ತಡೆ ಹಿಡಿಯಬೇಕು ಎಂದೂ ರೆವರೆಂಡ್ ಫಿಲಿಪ್ ನೆರಿ ಫೆರಾವೋ ಒತ್ತಾಯಿಸಿದ್ದಾರೆ.

ಸಮಾಜವನ್ನು ಧರ್ಮದ ಆಧಾರದ ಮೇಲೆ ಒಡೆಯುವ ಕುಟೀಲ ನೀತಿಯನ್ನು ಬಿಟ್ಟು ದೇಶದ ಜಾತ್ಯಾತೀತ ಸ್ವರೂಪವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಲಿ ಎಂದು ಆರ್ಚ್ ಬಿಷಪ್ ಅಭಿಪ್ರಾಯಪಟ್ಟಿದ್ದಾರೆ.

ಸಿಎಎ ವಿರುದ್ಧ ಮಹಾತ್ಮಗಾಂಧಿ ಮೊಮ್ಮಗ ತುಷಾರ್‌ ವಾಗ್ದಾಳಿ

ಭಾರತದ ಬಹುಸಂಸ್ಕೃತಿಯ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಸಿಎಎ ಹಾಗೂ ಎನ್‌ಆರ್‌ಸಿ ನೇರ ದಾಳಿ ಮಾಡಲಿದೆ ಎಂದು ಹೇಳಿರುವ ರೆವರೆಂಡ್ ಫಿಲಿಪ್ ನೆರಿ ಫೆರಾವೋ, ಈ ಕೂಡಲೇ ವಿವಾದಿತ ಕಾನೂನುಗಳನ್ನು ವಾಪಸ್ ಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.