ನವದೆಹಲಿ(ಜ.10): ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಅವಹೇಳನಾಕಾರಿ ಟ್ವೀಟ್‌ ಮಾಡಿದ್ದ ಆರೋಪ ಸಂಬಂಧ ಗೋ ಏರ್‌ ವಿಮಾನಯಾನ ಸಂಸ್ಥೆಯು ಹಿರಿಯ ಪೈಲಟ್‌ವೊಬ್ಬರನ್ನು ಕೆಲಸದಿಂದ ವಜಾಮಾಡಿದೆ.

‘ಪೈಲಟ್‌ ಮಿಕಿ ಮಲಿಕ್‌ ಆಕ್ಷೇಪಾರ್ಹ ಟ್ವೀಟ್‌ ಮಾಡಿದ್ದ ಹಿನ್ನೆಲೆಯಲ್ಲಿ ತತ್‌ಕ್ಷಣಕ್ಕೆ ಜಾರಿಗೆ ಬರುವಂತೆ ಪೈಟಲ್‌ ಅನ್ನು ಕೆಲಸದಿಂದ ವಜಾ ಮಾಡಲಾಗಿದೆ. ಉದ್ಯೋಗಿಗಳು ಸಂಸ್ಥೆಯ ನೀತಿ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಗೋ ಏರ್‌ ಇಂಥದ್ದನ್ನು ಸಹಿಸುವುದಿಲ್ಲ’ ಎಂದು ಗೋ ಏರ್‌ ವಕ್ತಾರರು ಶನಿವಾರ ತಿಳಿಸಿದ್ದಾರೆ.

ಮಿಲಿ ಮಲಿಕ್‌ ಗುರುವಾರ ಪ್ರಧಾನಿ ಬಗ್ಗೆ ಅವಹೇಳನಾಕಾರಿ ಟ್ವೀಟ್‌ ಮಾಡಿ ಬಳಿಕ ಡಿಲೀಟ್‌ ಮಾಡಿದ್ದರು. ಅನಂತರ ಪೈಲಟ್‌ ಟ್ವೀಟರ್‌ ಖಾತೆಯನ್ನು ಅಮಾನತು ಮಾಡಲಾಗಿದೆ.