ಮುಂಬೈ(ಜು.14): ಕೊರೋನಾ ಚಿಕಿತ್ಸೆಗೆ ಬಳಸಲಾಗುವ ಫೆವಿಪಿರವಿರ್‌ ಮಾತ್ರೆಯ ದರವನ್ನು ಶೇ.27ರಷ್ಟುಇಳಿಕೆ ಮಾಡಿದ್ದಾಗಿ ಔಷಧ ಉತ್ಪಾದಕ ಸಂಸ್ಥೆ ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್‌ ಹೇಳಿದೆ.

ಇದರನ್ವಯ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೊರೋನಾ ಸೋಂಕಿತರಿಗಾಗಿ ಬಿಡುಗಡೆ ಮಾಡಿರುವ ಫ್ಯಾಬಿಫ್ಲು ಹೆಸರಿನ ಮಾತ್ರೆಯ ಬೆಲೆಯನ್ನು 103 ರು.ನಿಂದ 75 ರು.ಗೆ ಇಳಿಕೆ ಮಾಡಲಾಗಿದೆ.

ಬಯೋಕಾನ್‌ ಕೊರೋನಾ ಔಷಧಕ್ಕೆ 32 ಸಾವಿರ, ಒಬ್ಬ ರೋಗಿಗೆ 4 ಇಂಜೆಕ್ಷನ್

ದೇಶಾದ್ಯಂತ ಈ ಮಹಾಮಾರಿ ಸೋಂಕಿಗೆ ತುತ್ತಾಗಿ ಬಳಲುತ್ತಿರುವವರ ರೋಗಿಗಳು ಕೊರೋನಾದಿಂದ ಬೇಗ ಗುಣಮುಖರಾಗಲು ಮತ್ತು ರೋಗಿಗಳಿಗೆ ಈ ಮಾತ್ರೆಗಳು ಕೈಗೆಟುಕುವ ದರದಲ್ಲಿರುವಂತೆ ನೋಡಿಕೊಳ್ಳುವ ಸಲುವಾಗಿ ಫ್ಯಾಬಿಫ್ಲು ಮಾತ್ರೆ ದರ ಇಳಿಸಲಾಗಿದೆ ಎಂದು ಗ್ಲೆನ್‌ಮಾರ್ಕ್ ಹೇಳಿಕೆ ಬಿಡುಗಡೆ ಮಾಡಿದೆ.