ನವದೆಹಲಿ(ಜೂ.20): ಸೌಮ್ಯ ಮತ್ತು ಸಾಧಾರಣ ರೋಗ ಲಕ್ಷಣ ಇರುವ ಕೊರೋನಾ ವೈರಸ್‌ ರೋಗಿಗಳ ಚಿಕಿತ್ಸೆಗೆ ಫಾವಿಪಿರವಿರ್‌ ಎಂಬ ವೈರಾಣು ನಿರೋಧಕ ಮಾತ್ರೆಯನ್ನು ಬಳಕೆ ಮಾಡುವುದಕ್ಕೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಅನುಮತಿ ನೀಡಿದೆ. ಆದರೆ, ತುರ್ತು ಸಂದರ್ಭದಲ್ಲಷ್ಟೇ ಈ ಔಷಧವನ್ನು ಬಳಕೆ ಮಾಡಬೇಕು. ಬಳಕೆಗೆ ಮುನ್ನ ರೋಗಿಗಳಿಂದ ಲಿಖಿತ ಸಮ್ಮತಿಯನ್ನು ಪಡೆದುಕೊಂಡಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾತ್ರೆ ತಯಾರಿಕೆ, ಮಾರಾಟಕ್ಕೆ ಗ್ಲೆನ್‌ಮಾರ್ಕ್ ಕಂಪನಿ ಅನುಮತಿ ಪಡೆದುಕೊಂಡಿದೆ.

ಭಾರತದಲ್ಲಿ ಕೊರೋನಾ ಚಿಕಿತ್ಸೆಗೆ ವೇಗ ನೀಡುವ ಉದ್ದೇಶದಿಂದ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಮುಂಬೈ ಮೂಲದ ಗ್ಲೆನ್‌ಮಾರ್ಕ್ ಫಾರ್ಮಾಸುಟಿಕಲ್ಸ್‌ ಸಂಸ್ಥೆಗೆ ಫೆವಿಪಿರವಿರ್‌ 200 ಎಂಜಿ ಮಾತ್ರೆ ತಯಾರಿಕೆ ಮತ್ತು ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಈ ಮಾತ್ರೆಯನ್ನು ಮಾರುಟ್ಟೆಗೆ ಬಿಡುಗಡೆ ಮಾಡುವುದಕ್ಕೂ ಮುನ್ನ 1000 ರೋಗಿಗಳ ಮೇಲೆ ಔಷಧಿಯನ್ನು ಪ್ರಯೋಗಿಸಿ ಫಲಿತಾಂಶವನ್ನು ತಿಳಿಕೊಳ್ಳಬೇಕಿದೆ.

ಏನಿದು ಫೆವಿಪಿರವಿರ್‌?

ಫೆವಿಪಿರವಿರ್‌ ಎನ್ನುವುದು ಮೂಲತಃ ಜಪಾನ್‌ ಕಂಡು ಹಿಡಿದ ಔಷಧಿಯಾಗಿದೆ. ಅವಿಗನ್‌ ಎಂಬ ಬ್ರ್ಯಾಂಡ್‌ನೇಮ್‌ನಿಂದ ಈ ಔಷಧಿಯನ್ನು ತಯಾರಿಸಲಾಗುತ್ತಿದೆ. ಜಪಾನ್‌ ಫä್ಲ್ಯಗಾಗಿ ಅಭಿವೃದ್ಧಿಪಡಿಸಿದ ವೈರಾಣು ನಿರೋಧಕ ಔಷಧ ಇದಾಗಿದೆ. ಹಲವು ವಿಧದ ವೈರಸ್‌ ಸೋಂಕುಗಳಿಗೆ ಈ ಔಷಧ ಬಳಕೆಯಲ್ಲಿ ಇದೆ.

Close