ನ್ಯೂಯಾರ್ಕ್ (ಡಿ.04): ವಿಶ್ವದ ಪ್ರತಿಷ್ಠಿತ ‘ಟೈಮ್‌’ ನಿಯತಕಾಲಿಕೆ ಭಾರತೀಯ ಮೂಲದ 15 ವರ್ಷದ ಬಾಲಕಿ ಗೀತಾಂಜಲಿ ರಾವ್‌ ಅವರನ್ನು ಮಕ್ಕಳ ವಿಭಾಗದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. 

ತಂತ್ರಜ್ಞಾನದ ಸಹಾಯದಿಂದ ಸೈಬರ್‌ ಬೆದರಿಕೆ, ಮಾದಕ ವ್ಯಸನ, ಅಶುದ್ಧ ಕುಡಿಯುವ ನೀರಿನಂತಹ ಸಮಸ್ಯೆಗೆ ಪರಿಹಾರ ಕಂಡುಹಿಡಿದ ಕಾರಣಕ್ಕೆ ಗೀತಾಂಜಲಿ ರಾವ್‌ ‘ವರ್ಷದ ವ್ಯಕ್ತಿ’ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.

https://kannada.asianetnews.com/india-news/hcl-roshni-richest-women-in-india-snr-qksvlq

 ಟೈಮ್‌ ನಿಯತಕಾಲಿಕೆ ಮೊಟ್ಟಮೊದಲ ಬಾರಿಗೆ ಮಕ್ಕಳ ವಿಭಾಗದಲ್ಲಿ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ನೀಡುತ್ತಿದೆ. ಈ ವಿಭಾಗದಲ್ಲಿ 5,000ಕ್ಕೂ ಅಧಿಕ ನಾಮನಿರ್ದೇಶನಗಳು ಬಂದಿದ್ದವು.

 

ಹಲವು ರೀತಿಯ ಆವಿಷ್ಕಾರಗಳನ್ನು ಮಾಡಿ ಗುರುತಿಸಿಕೊಂಡು  ನಿಟ್ಟಿನಲ್ಲಿ ಇದೀಗ ಶ್ರೇಷ್ಠ ಗೌರವ ಗೀತಾಂಜಲಿ ಅವರಿಗೆ ಒಲಿದು ಬಂದಿದೆ.