ಸುಂದರ ರೇಷ್ಮೆ ಕೂದಲಿನ ಶ್ವಾನದ ವಿಡಿಯೋ ವೈರಲ್ ಆಗಿದೆ. ಹೆಣ್ಣುಮಕ್ಕಳೇ ಅಸೂಯೆ ಪಡುವಂತಹ ಕೂದಲು ಈ ಶ್ವಾನಕ್ಕಿದೆ. ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.
ಸುಂದರವಾದ ಕಪ್ಪನೆಯ ದಟ್ಟವಾದ ಕೂದಲನ್ನು ಹೊಂದಿರಬೇಕು ಎಂಬುದು ಬಹುತೇಕರ ಆಸೆ. ಆದರೆ ಎಲ್ಲರಿಗೂ ಆ ಯೋಗ ಇರುವುದಿಲ್ಲ, ಕೆಲವರು ಉದ್ದನೆಯ ಚಂದದ ಕೂದಲನ್ನು ಬರಿಸಿಕೊಳ್ಳಲು ಏನೇನೋ ಸಾಹಸಗಳನ್ನು ಮಾಡುತ್ತಾರೆ. ಹಲವು ಗಿಡಮೂಲಿಕೆಗಳ ಪ್ರಯೋಗ ಮಾಡುತ್ತಾರೆ. ಮನೆಮದ್ದುಗಳನ್ನು ಮಾಡುತ್ತಾರೆ. ಆದರೆ ಅದ್ಯಾವುದು ಅಂದುಕೊಂಡಷ್ಟು ಅಥವಾ ಇನ್ಯಾರೋ ಸಲಹೆ ನೀಡಿದಷ್ಟು ಪ್ರಯೋಜನಕಾರಿಯಾಗಿ ಕಂಡು ಬರುವುದಿಲ್ಲ. ಹೀಗಾಗಿ ಕೂದಲಿನ ವಿಷಯದಲ್ಲಿ ಅನೇಕರು ಚೆಂದದ ಕೂದಲು ನಮಗಿಲ್ವಲ್ಲ ಅಂತ ಕೊರಗುವವರೆ ಹೆಚ್ಚು. ಹೀಗಾಗಿ ಸುಂದರವಾದ ಕೂದಲನ್ನು ಹೊಂದಿರುವವರ ಮೇಲೆ ಎಲ್ಲರ ಕಣ್ಣು ಹೋಗುತ್ತದೆ. ಹೀಗಿರುವಾಗ ಇಲ್ಲೊಂದು ವೀಡಿಯೋದಲ್ಲಿ ಒಬ್ಬರ ತಲೆ ಕೂದಲಿನ ಮೇಲೆ ಎಲ್ಲರ ಗಮನ ಹೋಗಿದೆ. ಇವರ ತಲೆ ಕೂದಲನ್ನು ನೋಡಿ ವಿಡಿಯೋ ನೋಡಿದವರೆಲ್ಲಾ ಅಯ್ಯೊ ನಮಗೂ ಈ ರೀತಿ ಕೂದಲು ಇಲ್ವಲ್ಲಾ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕೆಲವರು ಈಕೆಯ ಬಳಿ ನಮಗೂ ಟಿಪ್ಸ್ ನೀಡುವಂತೆ ಕೇಳುತ್ತಿದ್ದಾರೆ. ಹಾಗಿದ್ರೆ ಇಷ್ಟೊಂದು ಸೊಗಸಾದ ಕೂದಲನ್ನು ಹೊಂದಿರುವ ಚೆಲುವೆ ಯಾರು ಅಂತ ನೋಡೋಣ ಬನ್ನಿ...
ಅಂದಹಾಗೆ ಇದೊಂದು ಶ್ವಾನ. ಕುಳಿತಾಗ ಹಿಂದೆಯಿಂದ ನೋಡಿದರೆ ಮುದ್ದಾದ ಹುಡುಗಿಯೇ ಕುಳಿತಿದ್ದಾಳೆ ಎಂದು ಭಾವಿಸಬೇಕು ಅಷ್ಟೊಂದು ಸೊಗಸಾಗಿದೆ ಈ ಚೆಲುವೆಯ ಕೂದಲು. ಹೆಣ್ಣು ಮಕ್ಕಳು ಕೂಡ ಹೊಟ್ಟೆ ಉರಿದುಕೊಳ್ಳುವಂತಿದೆ ಈ ಶ್ವಾನದ ಕೂದಲು. ಸ್ವೀಟ್ ಪೆಟ್ ಲವರ್ಸ್ ಎಂಬ ಖಾತೆ ಹೊಂದಿರುವ ಸ್ವೀಟಿ ಭೂಮಿ ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಶ್ವಾನದ ತಲೆಕೂದಲನ್ನು ಬಾಚುತ್ತಿರುವ ವಿಡಿಯೋ ಇದಾಗಿದ್ದು, ಇವಳು ನನಗಿಂತ ಸೊಗಸಾದ ರೇಷ್ಮೆಯಂತಹ ಕೂದಲನ್ನು ಹೊಂದಿದ್ದಾಳೆ ಎಂದು ಬರೆದುಕೊಂಡಿದ್ದಾರೆ. ವೈರಲ್ ಆದ ವೀಡಿಯೋದಲ್ಲಿ ಶ್ವಾನದ ಕೂದಲನ್ನು ಹಿಂದಿನಿಂದ ಬಾಚುತ್ತಿದ್ದು, ಕೆಲ ಕ್ಷಣಗಳ ನಂತರ ಶ್ವಾನ ಮೆಲ್ಲನೆ ಹಿಂದೆ ತಿರುಗುತ್ತದೆ. ಹೀಗೆ ಹಿಂದೆ ತಿರುಗಿದ ಕಾರಣಕ್ಕೆ ಅದು ಶ್ವಾನ ಎಂಬುದು ಗೊತ್ತಾಗುತ್ತದೆ ಇಲ್ಲದೇ ಹೋದರೆ ಯಾರೋ ಮಕ್ಕಲ ತಲೆಯನ್ನು ದೊಡ್ಡವರು ಬಾಚುತ್ತಿರುವಂತೆ ಕಾಣುತ್ತಿದೆ.
ಟೂರ್ ಬಂದೆ ಕಣ್ರೀ... ಡೆಲ್ಲಿಯ ಗಲ್ಲಿ ಗಲ್ಲಿಗಳಲ್ಲಿ ನೀಲ್‌ಗಾಯ್ ಸವಾರಿ: ವೀಡಿಯೋ ವೈರಲ್
ಸೊಗಸಾದ ರೇಷ್ಮೆಯಂತಹ ಕೂದಲನ್ನು ಹೊಂದಿರುವ ಈ ಶ್ವಾನ ಹಿಂದಿನ ನೋಡುವುದಕ್ಕೆ ಉದ್ದ ಕೂದಲನ್ನು ಹೊಂದಿರುವ ಪುಟ್ಟ ಹುಡುಗಿಯಂತೆ ಕಾಣುತ್ತಾಳೆ. ವೀಡಿಯೋ ನೋಡಿದ ಒಬ್ಬರು ಅನೇಕರು ನಾನು ನಿಜವಾಗಿಯೂ ಪುಟ್ಟ ಹುಡುಗಿ ಇರಬೇಕು ಎಂದು ಭಾವಿಸಿದೆ ಎಂದು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಹೇರ್ ಕೇರ್ ರುಟಿನ್ ಬಗ್ಗೆ ಮಾಹಿತಿ ನೀಡಿ ಸಹೋದರಿ ಎಂದು ಒಬ್ಬರು ಕೇಳಿದ್ದಾರೆ. ಈಕೆಯ ಕೂದಲು ನೋಡಿ ನನಗೆ ತುಂಬಾ ಅಸೂಯೆಯಾಗುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆ ತುಂಬಾ ಮುದ್ದಾಗಿದ್ದಾಳೆ ಆಕೆಯ ಹೇರ್ ಕೂಡ ಚೆನ್ನಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವಳಷ್ಟು ಚೆಂದದ ಕೂದಲು ನನಗೂ ಇಲ್ಲ ನಾಳೆಯಿಂದ ನಾನು ಫೆಡಿಗ್ರಿ ತಿನ್ನಲು ಶುರು ಮಾಡುವೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈಕೆ ಕೂದಲಿನ ಜೊತೆ ಸುಂದರವಾದ ಅಮಾಯಕ ನೋಟದ ಕಣ್ಣುಗಳನ್ನು ಹೊಂದಿದ್ದಾಳೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಶ್ವಾನದ ಕೂದಲಿನ ಮೇಲೆ ಹೆಣ್ಣು ಮಕ್ಕಳ ಕಣ್ಣು ಬಿದ್ದಿದ್ದು, ಅನೇಕರು ನಮಗೂ ಇಷ್ಟು ಚೆಂದದ ಕೂದಲು ಇಲ್ಲವಲ್ಲ ಎಂದು ಹೊಟ್ಟೆಯುರಿದುಕೊಳ್ಳುತ್ತಿದ್ದಾರೆ. ಶ್ವಾನದ ಈ ಕೇಶ ರಾಶಿಯ ಬಗ್ಗೆ ನಿಮಗೇನನಿಸುತ್ತಿದೆ ಕಾಮೆಂಟ್ ಮಾಡಿ.
ಮರದಿಂದ ರೈಲಿನ ಟಾಪ್‌ಗೆ ಜಿಗಿದು 180 ಕಿಲೋ ಮೀಟರ್ ಸಂಚರಿಸಿದ ಕೋತಿಮರಿ
ಶ್ವಾನದ ಸೊಗಸಾದ ವೀಡಿಯೋ ಇಲ್ಲಿದೆ ನೋಡಿ
