ನವದೆಹಲಿ(ಜೂ.14): ಕ್ವಾರೆಂಟೈನ್‌ ಸಮಯದಲ್ಲಿ ಜನರಿಗೆ ಮನೋರಂಜನೆಗೇನೂ ಕಡಿಮೆ ಇಲ್ಲ. ಇಲ್ಲೊಂದು ವಿಡಿಯೋ ಜನರನ್ನು ತರ್ಕಕ್ಕೆ ತಳ್ಳಿದೆ, ಕನ್ಫ್ಯೂಸ್ ಮಾಡಿದೆ, ಜೊತೆಗೇ ಹೆದರಿಸಿಬಿಟ್ಟಿದೆ. ಲಾಕ್‌ಡೌನ್ ಸಂದರ್ಭ ಈ ವಿಇಡಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಪಾರ್ಕ್‌ನಲ್ಲಿ ಔಟ್‌ ಡೋರ್ ಜಿಮ್ ಮೆಷಿನ್‌ಗಳನ್ನು ಯಾರೂ ಜನರಿಲ್ಲದೆಯೇ ಸುಮ್ಮನೆ ಆಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಎದುರಿನಲ್ಲಿ ಏನಪ್ಪಾ ನಡೀತಿರೋದು ಅಂತ ಪೊಲೀಸರು ನೋಡುತ್ತಿರುವುದು ವಿಇಡಯೋದಲ್ಲಿ ಕಾಣಬಹುದು.

ಕೊರೋನಾ ಸಾವಿನಿಂದ ಪಾರಾದ ವೃದ್ಧನಿಗೆ 181 ಪುಟದ ಹಾಸ್ಪಿಟಲ್ ಬಿಲ್..! ಮೊತ್ತ ನೋಡಿದ್ರೆ ತಲೆ ಸುತ್ತುತ್ತೆ..!

ಯಾರೋ ಜಿಮ್ ಮೆಷಿನ್‌ನಲ್ಲಿ ವರ್ಕೌಟ್ ಮಾಡುತ್ತಿರುವಂತೆಯೇ ಕಾಣಿಸುವ ಚನೆಯನ್ನು ಪೊಲೀಸ್ ಸಿಬ್ಬಂದಿಯೊಬ್ಬರು ವಿಡಿಯೋ ಮೂಲಕ ಸೆರೆ ಹಿಡಿಯುವುದೂ ಕಾಣಿಸುತ್ತದೆ.

ಈವರೆಗೂ ಈ ಪಾರ್ಕ್ ಯಾವುದು..? ಎಲ್ಲಿಯದು ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಕೆಲವರು ದೆಹಲಿಯ ರೋಹಿಣಿ ಪ್ರದೇಶದ ಜಪಾನೀಸ್ ಪಾರ್ಕ್‌ ಎನ್ನುತ್ತಾರೆ ಕೆಲವರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಸಿದ ಸರ್ಕಲ್ ಆಫೀಸರ್ ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸವಾಗಿರಬಹುದು ಎಂದಿದ್ದಾರೆ. ಕಳೆದ ಬಾರಿ ಚಂಡೀಗಢದ ವೈದ್ಯಕೀಯ ಕಾಲೇಜು ಎದುರು ವೀಲ್ ಚೇರ್ ಸುತ್ತುವ ಸಿಸಿಟಿವಿ ಕ್ಯಾಮೆರಾ ಫೋಟೇಜ್ ವೈರಲ್ ಆಗಿತ್ತು. 

ಆಲಮಟ್ಟಿ ರಾಕ್ ಗಾರ್ಡನ್.. ಅಮಾವಾಸ್ಯೆ ದಿನ ತನ್ನಿಂದ ತಾನೇ ತೂಗಿದ ಜೋಕಾಲಿ!