Asianet Suvarna News Asianet Suvarna News

ಕೊರೋನಾ ಸಾವಿನಿಂದ ಪಾರಾದ ವೃದ್ಧನಿಗೆ 181 ಪುಟದ ಹಾಸ್ಪಿಟಲ್ ಬಿಲ್..! ಮೊತ್ತ ನೋಡಿದ್ರೆ ತಲೆ ಸುತ್ತುತ್ತೆ..!

ಕೊರೋನಾ ಸೋಂಕು ತಗುಲಿ ಇನ್ನೇನು ಬದುಕೋದೇ ಇಲ್ಲ ಎಂದು ಪಕ್ಕಾ ಆಗಿತ್ತು. ಮನೆ ಮಂದಿ ಜೊತೆ ವಿಡಿಯೋ ಕಾಲ್‌ನಲ್ಲಿ ಮಾತಾಡಿಯಾಗಿತ್ತು. ನಂತರ ಆಗಿದ್ದು ಅಚ್ಚರಿಯ ಬೆಳವಣಿಗೆ. ಹಾಸ್ಪಿಟಲ್ ಬಿಲ್

US Hospital gives 8 crore rupees bill to a covid19 survivor
Author
Bangalore, First Published Jun 14, 2020, 12:39 PM IST

ವಾಷಿಂಗ್ಟನ್(ಜೂ.14): ಕೊರೋನಾ ಸೋಂಕು ತಗುಲಿ ಬದುಕೋದೇ ಇಲ್ಲ ಎಂದುಕೊಂಡಿದ್ದ ವೃದ್ಧ ಅಚ್ಚರಿ ಎಂಬ ರೀತಿಯಲ್ಲಿ ಮಹಾಮಾರಿಯಿಂದ ಪಾರಾಗಿದ್ದಾರೆ. ಆದರೆ ಹಾಸ್ಪಿಟಲ್ ಕೊಟ್ಟ ಬಿಲ್ ನೋಡಿದ್ರೆ ಯಾರೇ ಆದ್ರೂ ಹೌಹಾರೋದು ಖಂಡಿತ.

70 ವರ್ಷದ ವೃದ್ಧನಿಗೆ ಕೊರೋನಾ ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಗುಣಮುಖರಾದಾಗ ಬರೋಬ್ಬರಿ 8 ಕೋಟಿಯ ಬಿಲ್ ನೀಡಿದ ಆಸ್ಪತ್ರೆ ದೊಡ್ಡ ಶಾಕ್‌ ಕೊಟ್ಟಿದೆ.

ಪಿಒಕೆಗೆ ರೋಗಿಗಳ ಶಿಫ್ಟ್‌ ಮಾಡುತ್ತಿದೆ ಪಾಕ್‌!

ಮೈಕೆಲ್ ಫ್ಲೋರ್ ಮಾರ್ಚ್‌ 4ರಂದು ಆಸ್ಪತ್ರೆಗೆ ದಾಖಲಾಗಿ ಸುಮಾರು 62 ದಿನ ಚಿಕಿತ್ಸೆ ಪಡೆದಿದ್ದಾರೆ. ಒಂದು ಹಂತದಲ್ಲಿ ಇನ್ನೇನು ಬದುಕುಳಿಯುವುದಿಲ್ಲ ಎಂದಾದಾಗ ಅಲ್ಲಿನ ದಾದಿಯರು ವಿಡಿಯೋ ಕಾಲ್ ಮಾಡಿ ರೋಗಿಗೆ ಹಾಗೂ ಮನೆಯವರಿಗೆ ಪರಸ್ಪರ ಮಾತನಾಡಲು ಅವಕಾಶ ಮಾಡಿದ್ದರು.

ಬೀಜಿಂಗ್‌ನಲ್ಲಿ 3 ದಿನದಲ್ಲಿ 46 ಮಂದಿಗೆ ಸೋಂಕು: ಮಾರುಕಟ್ಟೆ, ವಸತಿ ಪ್ರದೇಶ ಬಂದ್‌!

ಆದರೆ ಮೈಕೆಲ್ ಮೇ 5ರಂದು ಗುಣಮುಖರಾಗಿದ್ದಾರೆ. ಸುದೀರ್ಘ 181 ಪುಟಗಳ ಬಿಲ್ ನೀಡಿದ ಆಸ್ಪತ್ರೆ 83,552,700 ರೂಪಾಯಿ ಬಿಲ್ ನೀಡಿದೆ. ಅದೃಷ್ಟವಶಾತ್ ಮೈಕಲ್ ಮುಂಚೆಯೇ ಹಿರಿಯರಿಗಾಗಿ ಮಾಡುವ ಸರ್ಕಾರಿ ಇನ್ಶೂರೆನ್ಸ್ ಮಾಡಿಟ್ಟಿದ್ದ ಕಾರಣ ಸದ್ಯ ತಮ್ಮ ವಾಲೆಟ್‌ಗೆ ಬೀಳಲಿದ್ದ ಆರ್ಥಿಕ ಹೊಡೆತದಿಂದ ತಪ್ಪಿಸಿಕೊಂಡಿದ್ದಾರೆ. ನನ್ನ ಜೀವ ರಕ್ಷಿಸಿಕೊಳ್ಳಲು 8 ಕೋಟಿಯೇ ಕೊಡಬೇಕಾಗಿದೆ. ಆದರೆ ಇದು ವ್ಯರ್ಥವೆಂದು ಅನಿಸುವುದಿಲ್ಲ ಎಂದಿದ್ದಾರೆ.

Follow Us:
Download App:
  • android
  • ios