Asianet Suvarna News Asianet Suvarna News

ಕಪ್ಪು, ಬಿಳಿ, ಹಳ​ದಿ​: ಮೂರೂ ಫಂಗಸ್‌ನಿಂದ ವ್ಯಕ್ತಿ ಸಾವು!

* ಕಪ್ಪು, ಬಿಳಿ, ಹಳ​ದಿ​: ಮೂರೂ ಫಂಗಸ್‌ನಿಂದ ವ್ಯಕ್ತಿ ಸಾವು

* ರೋಗಿ​ಯಲ್ಲಿ ಮೆದು​ಳಿನ ಸಮೀಪ ಹಳದಿ ಫಂಗಸ್‌ ಪತ್ತೆ​

* ಮೃತನಲ್ಲಿ  ಟೆಕ್ಸೆಮಿಯಾ ಕಾಯಿಲೆ ಪತ್ತೆ

Ghaziabad man with yellow black and white fungus dies pod
Author
Bangalore, First Published May 30, 2021, 9:41 AM IST

 

ಗಾಜಿಯಾ​ಬಾ​ದ್‌(ಮೇ.30): ಕೊರೋ​ನಾ​ ಸೋಂಕಿಗೆ ಚಿಕಿತ್ಸೆ ಪಡೆ​ಯು​ತ್ತಿದ್ದ 59 ವರ್ಷದ ರೋಗಿ​ಯೊ​ಬ್ಬ​ ಬ್ಲ್ಯಾಕ್‌, ವೈಟ್‌ ಮತ್ತು ಹಳದಿ ಫಂಗ​ಸ್‌- ಈ ಮೂರೂ ಫಂಗಸ್‌ ತಗುಲಿ ಮೃತ​ಪ​ಟ್ಟಿ​ರುವ ಘಟನೆ ಗಾಜಿ​ಯಾ​ಬಾ​ದ್‌​ನಲ್ಲಿ ನಡೆ​ದಿದೆ.

ಗಾಜಿ​ಯಾ​ಬಾ​ದ್‌ನ ರಾಜ್‌ ನಗರ ಪ್ರದೇ​ಶದ ಹರ್ಷ ಆಸ್ಪ​ತ್ರೆ​ಯಲ್ಲಿ ಕೊರೋ​ನಾಕ್ಕೆ ಚಿಕಿತ್ಸೆ ಪಡೆ​ಯು​ತ್ತಿದ್ದ ಕುನ್ವಾರ್‌ ಸಿಂಗ್‌ ಎಂಬಾತ ಟೆಕ್ಸೆಮಿಯಾ (ರಕ್ತ ವಿಷ​ವಾ​ಗು​ವಿ​ಕೆ)ದಿಂದ ಮೃತ​ಪ​ಟ್ಟಿದ್ದು, ಆತ​ನಲ್ಲಿ ಬ್ಲ್ಯಾಕ್‌, ವೈಟ್‌ ಹಾಗೂ ಹಳದಿ ಫಂಗಸ್‌ ಪತ್ತೆ ಆಗಿದೆ ಎಂದು ಡಾ| ಡಿ.ಪಿ. ತ್ಯಾಗಿ ತಿಳಿ​ಸಿ​ದ್ದಾ​ರೆ.

ಇದೇ ವೇಳೆ ರಾಜೇಶ್‌ ಕುಮಾರ್‌ ಎಂಬ ಇನ್ನೊಬ್ಬ ರೋಗಿ​ಯಲ್ಲಿ ಮೆದು​ಳಿನ ಸಮೀಪ ಹಳದಿ ಫಂಗಸ್‌ ಪತ್ತೆ​ಯಾ​ಗಿದೆ. ಆತನ ಅರ್ಧ ದವ​ಡೆ​ಯನ್ನು ಕತ್ತ​ರಿ​ಸ​ಲಾ​ಗಿದೆ. ಆತ​ನ​ಲ್ಲಿಯೂ ಟೆಕ್ಸೆಮಿಯಾ ಕಾಯಿಲೆ ಪತ್ತೆ ಆಗಿತ್ತು ಎಂದು ತ್ಯಾಗಿ ತಿಳಿ​ಸಿ​ದ್ದಾರೆ.

Follow Us:
Download App:
  • android
  • ios