ಭಾರತ ವಿರೋಧಿ ಜಾರ್ಜ್ ಸೊರೋಸ್ ಬೆಂಬಲಿತ ಬೆಂಗಳೂರು ಮೂಲದ ಕಂಪನಿಗೆ ಅಮೆರಿಕದ ಯುಎಸ್ ಏಡ್‌ನಿಂದ 8 ಕೋಟಿ ರೂ. ಪಾವತಿಯಾಗಿರುವ ಬಗ್ಗೆ ಇ.ಡಿ. ತನಿಖೆ ನಡೆಸುತ್ತಿದೆ. 

ನವದೆಹಲಿ: ಭಾರತ ವಿರೋಧಿ ಉದ್ಯಮಿ ಜಾರ್ಜ್ ಸೊರೋಸ್ ಬೆಂಬಲಿತ ಬೆಂಗಳೂರು ಮೂಲದ ಕಂಪನಿಯೊಂದಕ್ಕೆ ಅಮೆರಿಕದ ಅಂತಾರಾಷ್ಟ್ರೀಯ ಅಭಿವೃದ್ಧಿ ಏಜೆನ್ಸಿ(ಯುಎಸ್ ಏಡ್)ಯಿಂದಲೂ 8 ಕೋಟಿ ರು. ಪಾವತಿಯಾಗಿರುವ ವಿಚಾರ ಇದೀಗ ಜಾರಿ ನಿರ್ದೇ ಶನಾಲಯ(ಇ.ಡಿ.) ತನಿಖೆಯಿಂದ ಬೆಳಕಿಗೆ ಬಂದಿದೆ. ಸೊರೋಸ್ ಬೆಂಬಲಿತ ಎಎಸ್‌ಎಆರ್ ಸೋಷಿಯಲ್ ಇಂಪ್ಯಾಕ್ಟ್ ಅಡೈಸರ್ಸ್ ಹೆಸರಿನ ಕಂಪನಿಯು 2022-23ರಲ್ಲಿ8 ಕೋಟಿ ರು. ಪಡೆದಿರುವುದು ಕಂಡುಬಂದಿದೆ. 

ಇ.ಡಿ.ಯು ಕೆಲ ತಿಂಗಳಿಂದ ದೇಶದಲ್ಲಿ ಸೊರೋಸ್ ಎಕನಾ ಮಿಕ್ ಡೆವಲಪ್‌ಮೆಂಟ್ ಫಂಡ್‌ಗೆ ಸಂಬಂಧಿಸಿ ತನಿಖೆ ನಡೆಸು ತ್ತಿದೆ. ಅದರಂತೆ ಮಾರ್ಚ್‌ನಲ್ಲಿ ಸೊರೋಸ್ ಬೆಂಬಲಿತ ಬೆಂಗಳೂರು ಮೂಲದ 3 ಕಂಪನಿಗಳಾದ ಎಸ್‌ಎಆರ್, ರೂಟ್ ಬ್ರಿಡ್ಜ್ ಸರ್ವೀಸಸ್, ಮತ್ತು ರೂಟ್ ಬ್ರಿಡ್ಜ್ ಅಕಾಡೆಮಿ ಮೇಲೆ ದಾಳಿಯನ್ನೂ ನಡೆಸಿ ದಾಖಲೆಗಳನ್ನು ವಶಕ್ಕೆ ಪಡೆದಿದೆ. 2022ರಿಂದ 2024ರ ನಡುವೆ ಈ ಕಂಪನಿಗಳಿಗೆ ವಿದೇಶದಿಂದ 25 ಕೋಟಿ ಶಂಕಾಸ್ಪದ ರೀತಿಯಲ್ಲಿ ಪಾವತಿಯಾಗಿರುವ ಸಂಬಂಧ ಈ ದಾಳಿ ನಡೆಸಲಾಗಿದೆ.

ಮಾರ್ಚ್‌ನಲ್ಲಿ ಇ.ಡಿ. ದಾಳಿ
ಮಾರ್ಚ್‌ನಲ್ಲಿ ಅಮೆರಿಕದ ಶತಕೋಟ್ಯಾಧಿಪತಿ, ಭಾರತ ವಿರೋಧಿ ಜಾರ್ಜ್‌ ಸೊರೋಸ್‌ ಸ್ಥಾಪಿಸಿದ ಓಪನ್‌ ಸೊಸೈಟಿ ಫೌಂಡೇಷನ್‌ನ ಬೆಂಗಳೂರು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ನಡೆಸಿ ಶೋಧ ಕಾರ್ಯ ನಡೆಸಿತ್ತು. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ನಿಯಮಗಳ ಉಲ್ಲಂಘನೆ ಆರೋಪದ ಮೇರೆಗೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗಿದೆ ಎಂದು ವರದಿಯಾಗಿತ್ತು. ವಿದೇಶಿ ನೇರ ಹೂಡಿಕೆಯನ್ನು ಫೌಂಡೇಷನ್‌ ಪಡೆದುಕೊಂಡಿದ್ದು, ಕೆಲ ಫಲಾನುಭವಿಗಳು ಫೇಮಾ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ರೀತಿಯಲ್ಲಿ ಹಣ ದುರುಪಯೋಗಪಡಿಸಿ ರಕೊಂಡಿದ್ದಾರೆ ಎಂಬ ಆರೋಪದ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್ ಅದಾನಿ ಆರೋಪಕ್ಕೆ ಬಿಜೆಪಿಯಿಂದ ಜಾರ್ಜ್ ಸೊರೋಸ್‌ ಪ್ರತ್ಯಸ್ತ್ರ: ಯಾರಿತಾ? ಬಿಜೆಪಿ ಆರೋಪವೇನು?

ಓಪನ್ ಸೊಸೈಟಿ ಫೌಂಡೇಶನ್ ವಿಶ್ವಾದ್ಯಂತ ನ್ಯಾಯ, ಶಿಕ್ಷಣ, ಸಾರ್ವಜನಿಕ ಆರೋಗ್ಯ ಸೇರಿ ಇತರೆ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ದೇಶದಲ್ಲಿ 4 ಲಕ್ಷ ಡಾಲರ್‌ಗಿಂತ ಹೆಚ್ಚು ವೆಚ್ಚ ಮಾಡಿದೆ ಎಂದು ಫೌಂಡೇಷನ್‌ ತಿಳಿಸಿತ್ತು. ಈ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದು, ಹಲವು ದಾಖಲೆಗಳನ್ನು ಇ.ಡಿ ಜಪ್ತಿ ಮಾಡಿತ್ತು.

ಇದನ್ನೂ ಓದಿ: ಭಾರತದಲ್ಲಿ ಮತ ಹೆಚ್ಚಳಕ್ಕೆ ನೀಡುತ್ತಿದ್ದಅಮೆರಿಕ ಚುನಾವಣಾ ನಿಧಿ ಯಾರ ಕೈ ಸೇರುತ್ತಿತ್ತು : ಬಿಜೆಪಿ ಪ್ರಶ್ನೆ