ಮೇರಠ್(ಏ.28)‌: ಲಾಕ್‌ಡೌನ್‌ ನಂತರ ಗಂಗಾನದಿ ಪರಿಶುದ್ಧವಾದ ಸುದ್ದಿಯ ಬೆನ್ನಲ್ಲೇ ಇದೀಗ ಗಂಗೆಯಲ್ಲಿ ಅಳಿವಿನಂಚಿನ ಡಾಲ್ಫಿನ್‌ ಈಜಾಡುತ್ತಿರುವ ವಿಡಿಯೋವೊಂದು ವೈರಲ್‌ ಆಗಿದೆ. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿಯಾಗಿರುವ ಈ ‘ಗಂಗಾನದಿಯ ಡಾಲ್ಫಿನ್‌’ ಅಪರೂಪಕ್ಕೆ ಉತ್ತರ ಪ್ರದೇಶದ ಮೇರಠ್‌ ಸಮೀಪ ಕಾಣಿಸಿಕೊಂಡಿದೆ.

ಲಾಕ್‌ಡೌನ್‌ನಿಂದ ಸುಧಾರಿಸಿದ ವೃಷಭಾವತಿ ನೀರಿನ ಗುಣಮಟ್ಟ!

ಅರಣ್ಯಾಧಿಕಾರಿ ಆಕಾಶದೀಪ್‌ ಬಧ್ವಾನ್‌ ಎಂಬುವರು ಇದರ ವಿಡಿಯೋವನ್ನು ಟ್ವೀಟರ್‌ನಲ್ಲಿ ಶೇರ್‌ ಮಾಡಿದ್ದಾರೆ. ಅದಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದ್ದು, ‘ಗಂಗಾನದಿಯ ಹುಲಿ’ ಎಂದೇ ಕರೆಸಿಕೊಳ್ಳುವ ಅಳಿವಿನಂಚಿನ ಈ ಡಾಲ್ಫಿನ್‌ ಮತ್ತೆ ಪತ್ತೆಯಾಗಿದ್ದಕ್ಕೆ ಜನರು ಸಂತಸ ವ್ಯಕ್ತಪಡಿಸಿದ್ದಾರೆ.

ನಗುತ್ತಿದೆ ನಿಸರ್ಗ: ಗಂಗೆ ಸ್ವಚ್ಛವಾದ ಬೆನ್ನಲ್ಲೇ ಅಪರೂಪದ ಪ್ರಾಣಿ ಪ್ರತ್ಯಕ್ಷ!

ಅರಣ್ಯದ ಆಹಾರ ಸರಪಳಿಯಲ್ಲಿ ಹುಲಿಗೆ ಎಷ್ಟುಮಹತ್ವವಿದೆಯೋ ಅಷ್ಟೇ ಮಹತ್ವ ನದಿ ನೀರಿನಲ್ಲಿ ವಾಸಿಸುವ ಪ್ರಾಣಿಗಳ ಆಹಾರ ಸರಪಳಿಯಲ್ಲಿ ಡಾಲ್ಫಿನ್‌ಗೆ ಇದೆ. ನದಿ ನೀರಿನ ಡಾಲ್ಫಿನ್‌ ಸಾಮಾನ್ಯವಾಗಿ ಭಾರತ, ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಗಂಗಾ ಮತ್ತು ಬ್ರಹ್ಮಪುತ್ರಾ ನದಿ ಮತ್ತು ಇವುಗಳ ಉಪನದಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮೀನುಗಳನ್ನು ತಿಂದು ಬದುಕುವ ಈ ಜೀವಿಗೆ ಕಣ್ಣು ಸರಿಯಾಗಿ ಕಾಣಿಸುವುದಿಲ್ಲ. ಇತ್ತೀಚೆಗೆ ಇವು ಕಾಣಿಸುವುದು ಬಹಳ ಅಪರೂಪವಾಗಿದೆ.