ಪ.ಬಂಗಾಳದಲ್ಲಿ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇ*P, ಕಾಲೇಜು ಎದುರಲ್ಲೇ ಘಟನೆ ನಡೆದಿದೆ. ವೈದ್ಯ ಮೇಲೆ ನಡೆದ ಪ್ರಕರಣದ ಹೋರಾಟಗಳು ನಡೆಯುತ್ತಿರುವ ನಡುವೆ ಇದೀಗ ಗೆಳೆಯನ ಜೊತೆಗಿದ್ದ ಮೆಡಿಕಲ್ ವಿದ್ಯಾರ್ಥಿನಿ ಮೇಲೆ ಪೈಶಾಚಿಕ ಕೃತ್ಯ ಎಸಗಲಾಗಿದೆ.

ದುರ್ಗಾಪುರ (ಅ.11) ಐಕ್ಯೂ ಸಿಟಿ ಮೆಡಿಕಲ್ ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವ್ಯಾಸಾಂಗ ಮಾಡುತ್ತಿದ್ದ ಒಡಿಶಾ ಮೂಲದ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾ*ರ ಎಸಗಿರುವ ಘಟನೆ ಬೆಳೆಕಿಗೆ ಬಂದಿದೆ. ಗೆಳೆಯನ ಜೊತೆಗೆ ಹೊರಗಡೆ ತೆರಳಲು ಕಾಲೇಜು ಗೇಟಿನ ಬಳಿ ಬಂದಾಗ ಕಾಮು*ರ ಗುಂಪು ಸುತ್ತುವರಿದಿದ್ದಾರೆ. ಬಳಿಕ ಗೆಳಯನಿಗೆ ಥಳಿಸಿ ವಿದ್ಯಾರ್ಥಿನಿಯನ್ನು ಹಿಡಿದೆಳೆದೊಯ್ದು ಸಾಮೂಹಿಕವಾಗಿ ಅತ್ಯಾ*ರ ನಡೆಸಿರುವ ಘಟನೆ ಪಶ್ಚಿಮ ಬಂಗಾಳದ ದುರ್ಗಾಪುರದಲ್ಲಿ ನಡೆದಿದೆ.

ಕಾಲೇಜು ಗೇಟು ಎದುರಲ್ಲೇ ಘಟನೆ

ಗೆಳೆಯನ ಜೊತೆ ಶುಕ್ರವಾರ (ಅ.10) ರಾತ್ರಿ 8.30ರ ವೇಳೆಗೆ ಕಾಲೇಜು ಗೇಟಿನ ಬಳಿ ಬಂದಿದ್ದಾರೆ. ಇಬ್ಬರನ್ನು ಹಲವರಿದ್ದ ಗುಂಪು ತಡೆದಿದೆ. ಬಳಿಕ ವಿದ್ಯಾರ್ಥಿನಿ ಜೊತೆಗಿದ್ದ ಗೆಳೆಯನ ಮೇಲೆ ದಾಳಿ ಮಾಡಿದ್ದಾರೆ. ಇತ್ತ ಮೆಡಿಕಲ್ ವಿದ್ಯಾರ್ಥಿನಿಯ್ನು ಗುಂಪು ಎಳೆದೊಯ್ದಿದೆ. ಕಾಲೇಜು ಪಕ್ಕದಲ್ಲೇ ಇರುವ ನಿರ್ಜನ ಪ್ರದೇಶದಲ್ಲಿ ಗುಂಪು ಸಾಮೂಹಿಕವಾಗಿ ಅತ್ಯಾ*ರ ಎಸಗಿದ್ದಾರೆ.

ವಿದ್ಯಾರ್ಥಿನಿ ಆರೋಗ್ಯ ಸ್ಥಿತಿ ಗಂಭೀರ

ಮೆಡಿಕಲ್ ವಿದ್ಯಾರ್ಥಿನಿ ಮೇಲಗರಿದ ಗುಂಪು ಆಕೆ ಮೇಲೆ ಹಲ್ಲೆ ನಡೆಸಿದೆ. ಸಮೂಹಿಕ ಹಾಗೂ ಸತತ ಅತ್ಯಾ*ರದಿಂದ ಅಸ್ವಸ್ಥಗೊಂಡ ವಿದ್ಯಾರ್ಥಿನಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ದುರ್ಗಾಪುರ ಆಸ್ಪತ್ರೆಯಲ್ಲಿ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆರೋಗ್ಯ ಚೇತರಿಕೆ ಕಂಡಿಲ್ಲ ಎಂದು ಪೋಷಕರು ಕಣ್ಮೀರಿಟ್ಟಿದ್ದಾರೆ.

ವಿದ್ಯಾರ್ಥಿನಿ ಪೋಷಕರಿಂದ ದೂರು

ಮಾಹಿತಿ ತಿಳಿಯುತ್ತಿದ್ದಂತೆ ಒಡಿಶಾದಿಂದ ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಪೋಷಕರು ದೂರು ನೀಡಿದ್ದಾರೆ. ವಿದ್ಯಾರ್ಥಿನಿಯ ಗೆಳೆಯನು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರುವ ಅನುಮಾನವಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಮಗಳನ್ನು ಹೊರಗಡೆ ಕರೆದುಕೊಂಡು ಹೋಗುತ್ತೇನೆ ಎಂದು ಬೇರೆಡೆಗೆ ಕರೆದುಕೊಂಡು ಹೋಗಿದ್ದಾನೆ. ಈತನೇ ಗುಂಪಿನವರಿಗೆ ಮಾಹಿತಿ ನೀಡಿದ್ದಾನೆ. ಘಟನೆ ಸಂಭವಿಸುವಾಗ ಗೆಳೆಯನ ಪತ್ತೆ ಇಲ್ಲ. ಹೀಗಾಗಿ ಆತನೂ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಮೇಲೆರಗಿದ ಗುಂಪು, ಆಕೆಯ ಮೊಬೈಲ್ ಫೋನ್, ಪರ್ಸ್‌ನಲ್ಲಿದ್ದ 5,000 ರೂಪಾಯಿ ಕಸಿದುಕೊಂಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ತನಿಖೆ ಆರಂಭ, ಮತ್ತದೇ ಹಳೆ ಕತೆ

ಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಪ್ರಕರಣ ಕುರಿತು ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಇತ್ತ ಕಾಲೇಜು ಕೂಡ ಆತಂರಿಕ ವರದಿಗೆ ಸೂಚಿಸಿದೆ. ಇತ್ತ ಪೊಲೀಸರು ತನಿಖೆ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾರಣ ಕಳೆದ ವರ್ಷ ಕೋಲ್ಕತ್ತಾ ವೈದ್ಯ ಮೇಲೆ ಇದೇ ರೀತಿ ಘಟನೆ ನಡೆದಿತ್ತು. ಈ ಪ್ರಕರಣ ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರತಿಭಟನೆಗೆ ಕಾರಣಾಗಿತ್ತು. ಆದರೆ ಸಾಕ್ಷ್ಯ ನಾಶ ಮಾಡುವ ಸೇರಿದಂತೆ ಹಲವು ಬೆಳವಣಿಗೆಗಳು ಬಳಿಕ ನಡೆದಿತ್ತು. ತೀವ್ರ ಹೋರಾಟದಿಂದ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿತ್ತು. ಇದೀಗ ಮೆಡಿಕಲ್ ವಿದ್ಯಾರ್ಥಿನಿ ಮೇಲಿನ ಪ್ರಕರಣದಲ್ಲೂ ಸಾಕ್ಷ್ಯ ನಾಶದ ಯತ್ನ ನಡೆದಿದೆ ಅನ್ನೋ ಅನುಮಾನಗಳು ಕಾಡತೊಡಗಿದೆ.