Asianet Suvarna News Asianet Suvarna News

ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ; ಬಿಜೆಪಿ ಕ್ಲೀನ್ ಸ್ವೀಪ್, ಪ್ರಧಾನಿ ಮೋದಿ ಅಭಿನಂದನೆ!

  • ಗಾಂಧಿನಗರ ಪಾಲಿಕೆ 44ರಲ್ಲಿ 41 ಸ್ಥಾನ ಗೆದ್ದ ಬಿಜೆಪಿ
  • ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ತೀವ್ರ ಹಿನ್ನಡೆ
  • ಗಾಂಧಿನಗರದಲ್ಲಿ ಬಿಜೆಪಿ ಸಂಭ್ರಮಾಚರಣೆ
     
Gandhinagar municipal corporation elections result BJP registered landslide victory ckm
Author
Bengaluru, First Published Oct 5, 2021, 4:33 PM IST

ಗಾಂಧಿನಗರ(ಅ.05): ಗುಜರಾತ್‌ನಲ್ಲಿ(Gujarat) ಬಿಜೆಪಿ(BJP) ಪಕ್ಷಕ್ಕೆ ಸೆಡ್ಡು ಹೊಡೆಯಲು ಭಾರಿ ಕಸರತ್ತು ನಡೆಸಿದ ಕಾಂಗ್ರೆಸ್(Congress) ಹಾಗೂ ಆಮ್ ಆದ್ಮಿ ಪಕ್ಷಕ್ಕೆ(AAP) ತೀವ್ರ ಹಿನ್ನಡೆಯಾಗಿದೆ. ಗಾಂಧಿನಗರ ಮಹಾನಗರ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಗೆಲುವು ಸಾಧಿಸಿದೆ. ಒಟ್ಟು 44 ಸ್ಥಾನಗಳ ಪೈಕಿ 41ರಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ.  ಗಾಂಧಿನಗರ ಗೆಲುುವಿಗೆ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರು ಹಾಗೂ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ಹೇಳಿದ್ದಾರೆ.

ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆ ಹಾಗೂ ಗುಜರಾತ್‌ನಲ್ಲಿ ನಡೆದ ಸ್ಥಳೀಯ ಚುನಾವಣೆ ಫಲಿತಾಂಶಗಲು ಜನರು ಬಿಜೆಪಿ ಜೊತೆ ಬೆಸೆದಿರುವ ಆಳವಾದ ಬಾಂಧವ್ಯವನ್ನು ಪುನರುಚ್ಚರಿಸುತ್ತದೆ.  ನಮ್ಮನ್ನು ಆಶೀರ್ವದಿಸಿದ ಜನರಿಗೆ ಕೃತಜ್ಞತೆ. ಎಲ್ಲರಿಗೂ ಅಭಿನಂದನೆಗಳು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

 

ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ನೇಮಕ: ಘೋಷಣೆಯಾಗುತ್ತಾ TP, ZP ಎಲೆಕ್ಷನ್ ಡೇಟ್?

ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆ(Gandhinagar municipal corporation) ಮುಂಬರುವ  ವಿಧಾನಸಭಾ ಚುನಾವಣೆ(assembly election) ದಿಕ್ಸೂಚಿ ಎಂದು ರಾಜಕೀಯ ನಾಯಕರು ಹೇಳಿದ್ದರು. ಹೀಗಾಗಿ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಲು ಮುಂದಾಗಿತ್ತು. ಆದರೆ ಫಲಿತಾಂಶ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷಕ್ಕೆ ನಿರಾಸೆ ತಂದಿದೆ. ಎರಡೂ ಪಕ್ಷಗಳು ತಲಾ ಒಂದೊಂದು ಸ್ಥಾನ ಗೆದ್ದುಕೊಂಡಿದೆ.

ಬಿಜೆಪಿ ಭರ್ಜರಿ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಆದರೆ ಕಳೆದ ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.ಬಿಜೆಪಿಗೆ ತೀವ್ರ ಪೈಪೋಟಿ ನೀಡಿದ್ದ ಕಾಂಗ್ರೆಸ್ 16 ಸ್ಥಾನ ಗೆದ್ದುಕೊಂಡಿದ್ದರೆ, ಬಿಜೆಪಿ ಕೂಡ 16 ಸ್ಥಾನ ಗೆದ್ದಿತ್ತು. ಕಾಂಗ್ರೆಸ್ ಕೌನ್ಸಿಲರ್ ಪ್ರವೀಣ್ ಪಟೇಲ್ ಹಾಗೂ ಆಪ್ತರು ಬಿಜೆಪಿಗೆ ಅಧಿಕಾರ ಹಿಡಿಯುವಲ್ಲಿ ನೆರವಾಗಿದ್ದರು. ಬಳಿಕ ಪ್ರವೀಣ್ ಪಟೇಲ್ ಬಿಜೆಪಿಯಿಂದ ಮೇಯರ್(Mayor) ಆಗಿ ಆಯ್ಕೆಯಾಗಿದ್ದರು. ಆದರೆ ಈ ಬಾರಿ ಈ ರೀತಿಯ ಯಾವ ಕಸರತ್ತಿಗೂ ಬಿಜೆಪಿಗೆ ಅವಕಾಶ ನೀಡಿಲ್ಲ. ಪೂರ್ಣ ಬಹುಮತದೊಂದಿಗೆ ಬಿಜೆಪಿ ಜಯಭೇರಿ ಬಾರಿಸಿದೆ.

ಬರೆದಿಟ್ಟುಕೊಳ್ಳಿ, ನಾವೇ ಗೆಲ್ಲೋದು : ಬೊಮ್ಮಾಯಿ ಭವಿಷ್ಯ

ಕಳೆದ ವರ್ಷ ನಡೆದ ಸೂರತ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಮ್ ಆಮದ್ಮಿ ಪಾರ್ಟಿ 120 ಸ್ಥಾನದಲ್ಲಿ 27 ಸ್ಥಾನ ಗೆದ್ದುಕೊಂಡು ಭಾರಿ ಯಶಸ್ಸು ಸಾಧಿಸಿತ್ತು. ಇದು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಆಮ್ ಆದ್ಮಿ ಪಕ್ಷದ ನಿರ್ಧಾರವನ್ನು ಮತ್ತಷ್ಟು ಗಟ್ಟಿಗೊಳಿಸಿತ್ತು. ಇದೇ ಹುಮ್ಮಸ್ಸಿನಲ್ಲಿ ಗಾಂಧಿಗರ ವಿಧಾನಸಭಾ ಚುನಾವಣೆಗೆ ಧುಮಿಕಿದ ಆಮ್ ಆದ್ಮಿ ಪಕ್ಷಕ್ಕೆ ಸಿಕ್ಕಿದ್ದು ಕೇವಲ 1 ಸ್ಥಾನ ಮಾತ್ರ.

ಆಮ್ಮ ಆದ್ಮಿ ಜೊತಗೆ ಕಾಂಗ್ರೆಸ್ ಕೂಡ ಗೆದ್ದುಕೊಂಡಿರುವುದು ಒಂದು ಸ್ಥಾನ ಮಾತ್ರ.  ಕಾಂಗ್ರೆಸ್ ಪ್ರಯತ್ನದಿಂದ ಹಿಂದೆ ಸರಿಯುವುದಿಲ್ಲ. ಜನರಿಗೆ ಬಿಜೆಪಿ ದುರಾಡಳಿತ ಹಾಗೂ ಕಾಂಗ್ರೆಸ್ ರಾಜ್ಯದಲ್ಲಿನ ಆಡಳಿತದ ಸುಧಾರಣೆ ಕುರಿತು ಜನರಿಗೆ ಹೇಳಲಿದ್ದೇವೆ. ಬಿಜೆಪಿ ರಾಜ್ಯದಲ್ಲಿ ಸೃಷ್ಟಿಯಾಗುತ್ತಿರುವ ಕಾನೂನು ಸುವ್ಯವಸ್ಥೆ ಆತಂಕ, ಜನಸಾಮ್ಯನರನ್ನು ಬೆಚ್ಚಿ ಬೀಳಿಸುತ್ತಿದೆ. ಬಿಜೆಪಿಗಿಂತ ಕಾಂಗ್ರೆಸ್ ಒಳಿತು ಅನ್ನೋ ಭಾವನೆ ಜನರಲ್ಲಿದೆ ಎಂದು ಕಾಂಗ್ರೆಸ್ ಹೇಳಿದೆ.

ಪಕ್ಷ ಬಿಡುವ ಸುಳಿವು ನೀಡಿದ ಮತ್ತೋರ್ವ ಕಾಂಗ್ರೆಸ್ ಮುಖಂಡ

ಈ ಬಾರಿ ಗಾಂಧಿನಗರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿತ್ತು. 56.24% ಮತದಾನ ದಾಖಲಾಗಿತ್ತು. ಫಲಿತಾಂಶ ಬಿಜೆಪಿ ಪರವಾಗಿದೆ. ಈ ಪಾಲಿಕೆ ಚುನಾವಣೆಗೂ ಮುನ್ನ ಇದು ಗುಜರಾತ್ ವಿಧಾನಸಭಾ ಚುನಾವಣಾ ದಿಕ್ಸೂಚಿ ಎಂದೇ ಬಿಂಬಿಸಲಾಗಿತ್ತು. ಇತ್ತ ಗುಜರಾತ್ ವಿಧಾನಸಭಾ ಚುನಾವಣೆಗೆ ಕಸರತ್ತು ಆರಂಭಗೊಂಡಿದೆ. 2022ರಲ್ಲಿ ನಡೆಯಲಿರುವ ವಿಧಾಸಭಾ ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಈಗಾಗಲೇ ಬಿಜೆಪಿ ಸಿಎಂ ಬದಲಾವಣೆ ಸೇರಿದಂತೆ ಹಲವು ತಯಾರಿ ಆರಂಭಿಸಿದೆ. ಇತ್ತ ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷ ಕೂಡ ಅಷ್ಟೇ ತಯಾರಿ ನಡೆಸುತ್ತಿದೆ.
 

Follow Us:
Download App:
  • android
  • ios