ಪ್ರಧಾನಿ ಮೋದಿ ಎರಡು ದಿನದ ಜರ್ಮನಿ ಪ್ರವಾಸ ಜಿ7 ಶೃಂಗಸಭೆಗಾಗಿ ಜರ್ಮನಿಗೆ ಪ್ರಯಾಣ ಬೆಳೆಸಿದ ಮೋದಿ ಜೂನ್ 28ಕ್ಕೆ ನರೇಂದ್ರ ಮೋದಿ ಯುಎಇಗೆ ಭೇಟಿ
ನವದೆಹಲಿ(ಜೂ.25): ಜಿ7 ಶೃಂಗಭೆಗಾಗಿ ಪ್ರಧಾನಿ ನರೇಂದ್ರ ಮೋದಿ ಜರ್ಮನಿ ಪ್ರಯಾಣ ಬೆಳೆಸಿದ್ದಾರೆ.ಒಟ್ಟು ಮೂರು ದಿನಗಳ ಪ್ರವಾಸ ಇದಾಗಿದ್ದು, ಜೂನ್ 26 ಹಾಗೂ 27 ರಂದು ಜರ್ಮನಿಯಲ್ಲಿ ಆಯೋಜಿಸಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಜೂನ್ 28 ರಂದು ಯುಎಇಗೆ ಭೇಟಿ ನೀಡಲಾಗಿದ್ದಾರೆ.
ಜರ್ಮನಿ ಚಾನ್ಸೆಲರ್ ಹೆಚ್ ಇ ಒಲಾಫ್ ಸ್ಕೂಲ್ಜ್ ಆಹ್ವಾನದ ಮೇರೆಗೆ ಪ್ರದಾನಿ ಮೋದಿ, ಶೃಂಗಸಭೆಯಲ್ಲಿ ಪಾಲ್ಗೊಳುತ್ತಿದ್ದಾರೆ. ಕೋವಿಡ್ ಬಳಿಕ ಮೋದಿಯನ್ನು ಸ್ವಾಗತಿಸಲು ಜರ್ಮನಿ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದೆ. ಇದಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದೆ.
ಇಂತಹ ಪ್ರಧಾನಿ ಸಿಕ್ಕಿದ್ದು ಈ ದೇಶಕ್ಕೆ ಸುದೈವ; ಮೋದಿಗೆ ಸಿದ್ದೇಶ್ವರ ಶ್ರೀಗಳ ಹಾರೈಕೆ
ಜರ್ಮನ್ ಪ್ರೆಸಿಡೆನ್ಸಿ ಅಡಿಯಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೆ ತೆರಳುವ ಮುನ್ನ ಪ್ರಧಾನಿ ಕಾರ್ಯಾಲಯ ಹೇಳಿಕೆ ಬಿಡುಗಡೆ ಮಾಡಿದೆ. ಮಾನವೀಯತೆ ಮೇಲೆ ಪರಿಣಾಮ ಬೀರುವ ಜಾಗತಿಕ ಸಮಸ್ಯೆಗಳ ಕುರಿತು ಅಂತಾರಾಷ್ಟ್ರೀಯ ಸಹಯೋಗ ಬಲಪಡಿಸಲು ಈ ಸಭೆ ಮಹತ್ವದ್ದಾಗಿದೆ. ಈ ಶೃಂಗಸಭೆಯಲ್ಲಿ ಅರ್ಜೆಂಟೀನಾ, ಇಂಡೋನೇಷ್ಯಾ, ಸೆನೆಗಲ್ ಮತ್ತು ದಕ್ಷಿಣ ಆಫ್ರಿಕಾ ಕೂಡ ಪಾಲ್ಗೊಳ್ಳತ್ತಿದೆ. ಪರಿಸರ, ಶಕ್ತಿ, ಹವಾಮಾನ, ಆಹಾರ ಭದ್ರತೆ, ಆರೋಗ್ಯ, ಭಯೋತ್ಪಾದನೆ ನಿಗ್ರಹ, ಲಿಂಗ ಸಮಾನತೆ ಮತ್ತು ಪ್ರಜಾಪ್ರಭುತ್ವದಂತಹ ವಿಷಯಗಳ ಕುರಿತು ಪ್ರಧಾನಿ ಮೋದಿ ಚರ್ಚೆ ನಡೆಸಲಿದ್ದಾರೆ ಎಂದು ಕಾರ್ಯಾಲಯ ಹೇಳಿದೆ.
ಅಂತಾರಾಷ್ಟ್ರೀಯ ನಾಯಕರ ಜೊತೆ ಸಂವಾದ ಹಾಗೂ ಭಾರತದ ನಿಲುವ ವ್ಯಕ್ತಪಡಿಸಲು ಪ್ರದಾನಿ ಮೋದಿ ಉತ್ಸುಕರಾಗಿದ್ದಾರೆ ಎಂದು ಪ್ರಧಾನಿ ಕಾರ್ಯಲಯ ಹೇಳಿದೆ.
ಪ್ರಧಾನಿ ಮೋದಿ ಸ್ವಾಗತಕ್ಕೆ ಜರ್ಮನಿಯ ಮ್ಯೂನಿಚ್ ನಗರ ಸಜ್ಜಾಗಿದೆ. ನಗರದಲ್ಲಿ ಅತೀ ದೊಡ್ಡ ಬ್ಯಾನರ್ ಹಾಕಲಾಗಿದೆ. ಕೋವಿಡ್ ಬಳಿಕ ಇಡೀ ಜರ್ಮನಿ ಇದೀಗ ವಿಶ್ವದ ಪ್ರಬಲ ಹಾಗೂ ಜನಪ್ರಿಯ ನಾಕನ ಸ್ವಾಗತಿಸಲು ಸಜ್ಜಾಗಿದೆ. ಇದಕ್ಕಾಗಿ ವಿಶೇಷ ಕಾರ್ಯಕ್ರಮನ್ನು ಆಯೋಜಿಸಿದೆ. ಭಾರತ ಹಾಗೂ ಜರ್ಮನಿಯ ನೃತ್ಯ ಪ್ರಕಾರಗಳು ಮೇಳೈಸಲಿವೆ.
ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸಮುದಾಯವನ್ನು ಭೇಟಿ ಮಾಡಲಿದ್ದಾರೆ. ಈಗಾಗಲೇ ಭಾರತೀಯ ಸಮುದಾಯ ಹಾಗೂ ಭಾರತೀಯ ಮೂಲದ ವಿದ್ಯಾರ್ಥಿಗಳು ಮೋದಿ ಆಗಮನದಿಂದ ಪುಳಕಿತರಾಗಿದ್ದಾರೆ.
ಜೂನ್ 23ರಂದು ಪ್ರಧಾನಿ ಮೋದಿ ಬ್ರಿಕ್ಸ್ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡಿದ್ದರು. ವರ್ಚುವಲ್ ಮೂಲಕ ನಡೆದ ಈ ಸಭೆಯಲ್ಲಿ ಮೋದಿ ಆರ್ಥಿಕತ ಪುನಶ್ಚೇತನಕ್ಕೆ ಬ್ರಿಕ್ಸ್ ರಾಷ್ಟ್ರಗಳ ಕೊಡುಗೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪರಸ್ಪರ ಸಹಕಾರದ ಮೂಲಕ ಕೋವಿಡ್ ನಂತರದ ಆರ್ಥಿಕತೆಯ ಪುನಶ್ಚೇತನಕ್ಕೆ ಬ್ರಿಕ್ಸ್ ರಾಷ್ಟ್ರಗಳು ಮಹತ್ವದ ಕೊಡುಗೆಯನ್ನು ನೀಡಬಹುದಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
2023 ರ 'ನಮೋ' ಲೆಕ್ಕಾಚಾರ, 2 ತಿಂಗಳಿಗೊಮ್ಮೆ ಮೋದಿ ರಾಜ್ಯ ಪ್ರವಾಸ
ಬ್ರಿಕ್ಸ್ ವಾರ್ಷಿಕ ಸಮ್ಮೇಳನದಲ್ಲಿ ವರ್ಚುವಲ್ ಆಗಿ ಪಾಲ್ಗೊಂಡ ಪ್ರಧಾನಿ, ಸದಸ್ಯ ರಾಷ್ಟ್ರಗಳ ಸಹಕಾರ ಹೆಚ್ಚುತ್ತಿರುವುದು ನಾಗರಿಕರಿಗೆ ಪ್ರಯೋಜನಕಾರಿಯಾಗಿದೆ. ಸಭೆಯಲ್ಲಿ ನಡೆದ ಚರ್ಚೆಗಳು ಭವಿಷ್ಯತ್ತಿನಲ್ಲಿ ಸದಸ್ಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಇನ್ನಷ್ಟುವೃದ್ಧಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿವೆ ಎಂದರು.
ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಈ 5 ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಗುಂಪಾಗಿದೆ. ಬ್ರಿಕ್ಸ್ ವಾರ್ಷಿಕ ಸಭೆಯನ್ನು ಚೀನಾ ಆಯೋಜಿಸಿದ್ದು, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ಉನ್ನತ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
