ಸೀತಾ ಮಾತೆಯ ಜನ್ಮಸ್ಥಳದಿಂದ ಅಯೋಧ್ಯೆಗೆ ಬರಲಿದೆ 1100 ಬುಟ್ಟಿ ತವರು ಮನೆ ಉಡುಗೊರೆ!

ಸೀತಾ ಮಾತೆಯ ಜನ್ಮಸ್ಥಳವಾದ ನೇಪಾಳದ ಜನಕಪುರಿಯಿಂದ ಅಯೋಧ್ಯೆಯ ಶ್ರೀರಾಮಮಂದಿರಕ್ಕೆ ಜನವರಿ 6 ರಂದು 1100 ಬುಟ್ಟಿಗಳ ತವರು ಮನೆ ಉಡುಗೊರೆ ಬರಲಿದೆ. 500 ಜನರು ಮೆರವಣಿಗೆ ಮೂಲಕ ಈ ಉಡುಗೊರೆಯನ್ನು ಹೊತ್ತು ತರಲಿದ್ದಾರೆ.

From Sitas Birthplace In Nepal Ayodhya Ram Mandir To Receive 1100 Baskets Of Wedding Gifts san

ನವದೆಹಲಿ (ಜ.1): ಅಯೋಧ್ಯಾಧಾಮದಲ್ಲಿ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಸನಿಹವಾಗುತ್ತಿರುವ ನಡುವೆ, ಸೀತಾ ಮಾತೆಯ ಜನ್ಮಸ್ಥಳ ನೇಪಾಳದ ಜನಕಪುರಿಯಲ್ಲೂ ಸಂಭ್ರಮ ಆರಂಭವಾಗಿದೆ. ಇದರ ನಡುವೆ ಮನುಕುಲದ ಮೊದಲ ರಾಜಧಾನಿ ಅಯೋಧ್ಯೆಗೆ ತಮ್ಮ ಮನೆ ಮಗಳನ್ನು ನೀಡಿದ್ದ ಕಾರಣಕ್ಕೆ ನೇಪಾಳದ ಜನಕಪುರಿಯಿಂದ ಮದುವೆಯ ಉಡುಗೊರೆ ಎನ್ನುವ ರೀತಿಯಲ್ಲಿ 1100 ಬುಟ್ಟಿಗಳ ವಸ್ತುಗಳು ಆಗಮಿಸಲಿದೆ. ಇದನ್ನು ಶ್ರೀರಾಮ ಮಂದಿರ ಕೂಡ ಸ್ವೀಕರಿಸಲಿದೆ. ಅಂದಾಜು 500 ಮಂದಿ ಮೆರವಣಿಗೆ ಮೂಲಕ 1100 ಬುಟ್ಟಿಗಳನ್ನ ಹೊತ್ತು ತರಲಿದ್ದು, ಶ್ರೀರಾಮನಿಗೆ ಮದುವೆಯ ಉಡುಗೊರೆ ಎನ್ನುವ ರೀತಿಯನ್ನು ಇದನ್ನು ಒಪ್ಪಿಸಲಾಗುತ್ತದೆ. ಜನವರಿ 4 ರಂದು ಜನಕ್‌ಪುರದ ಜಾನಕಿ ಮಂದಿರದಿಂದ ಮೆರವಣಿಗೆ ಪ್ರಾರಂಭವಾಗಲಿದ್ದು, ಎರಡು ದಿನಗಳ ನಂತರ ಜನವರಿ 6 ರಂದು ಅಯೋಧ್ಯೆಗೆ ಆಗಮಿಸುವ ನಿರೀಕ್ಷೆಯಿದೆ. ಮದುವೆಯ ಉಡುಗೊರೆಗಳಾದ ಆಭರಣಗಳು, ಚಿನ್ನ ಮತ್ತು ಬೆಳ್ಳಿ ವಸ್ತುಗಳು, ಒಣ ಹಣ್ಣುಗಳು, ಪಾತ್ರೆಗಳು, ಬಟ್ಟೆ, ಸೌಂದರ್ಯವರ್ಧಕಗಳು ಮತ್ತು ಅಕ್ಕಿಯಂತಹ ದೊಡ್ಡ ಪ್ರಮಾಣದ ಆಹಾರ ಧಾನ್ಯಗಳಿಂದ ಈ ಭಾರ್‌ಗಳು (ಬುಟ್ಟಿಗಳು) ತುಂಬಿರುತ್ತವೆ. ಈ ವಸ್ತುಗಳನ್ನು ಸಾಂಪ್ರದಾಯಿಕವಾಗಿ ವಧು ಮದುವೆಯಾದಾಗ ಮತ್ತು ತನ್ನ ಪತಿಯೊಂದಿಗೆ ಗಂಡನ ಮನೆಗೆ ಹೋದಾಗ ತವರಿನಿಂದ ಉಡುಗೊರೆಯಾಗಿ ನೀಡಲಾಗುತ್ತದೆ.

ಈ ಮೆರವಣಿಗೆಯನ್ನು ಆಯೋಜನೆ ಮಾಡುವ ಜವಾಬ್ದಾರಿಯನ್ನು ಹೊಂದಿರುವ ಜನಕ್‌ಪುರ್ಧಮಾಶ್ ಅಯೋಧ್ಯಾಧಾಮ್ ಭಾರ್ ಯಾತ್ರಾ ಹೆಸರಿನ ಸಮಿತಿಯ ಸದಸ್ಯ ಲಲಿತ್ ಶಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಜನವರಿ 6 ರಂದು ಶ್ರೀರಾಮನಿಗೆ ಸೀತೆಯ ತವರೂರು ಜನಕ್‌ಪುರದಿಂದ ಅಯೋಧ್ಯೆಗೆ ಉಡುಗೊರೆಗಳನ್ನು ತರಲು ಯೋಜಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಜನವರಿ 22 ರಂದು ರಾಮ ಮಂದಿರದ ಪ್ರಾಣಪ್ರತಿಷ್ಠಾಪನೆಗೂ ಮುನ್ನ ಇದು ನಡೆಯಲಿದೆ. ಅಯೋಧ್ಯೆ ಸ್ಥಳೀಯ ಅಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸುವ 251 ಮಂದಿಗೆ ವಸತಿ ವ್ಯವಸ್ಥೆ ಮಾಡಿದ್ದಾರೆ. ಸಂಘಟನಾ ಸಮಿತಿಯು ಉಳಿದ ಭಾಗವಹಿಸುವವರನ್ನು ವಿವಿಧ ಖಾಸಗಿ ಸಂಸ್ಥೆಗಳಲ್ಲಿ ಇರಿಸಲು ವ್ಯವಸ್ಥೆಗಳನ್ನು ಮಾಡುತ್ತಿದೆ. ಜನಕಪುರ ಮತ್ತು ಅಯೋಧ್ಯೆ ನಡುವಿನ ಅಂತರ 458 ಕಿಲೋಮೀಟರ್‌ಗಳಾಗಿದೆ.

News Hour: ನಾಳೆ ರಾಮನೂರು ಅಯೋಧ್ಯೆಗೆ ಪ್ರಧಾನಿ ನರೇಂದ್ರ ಮೋದಿ!

ಇವರ ಪ್ರಯಾಣವು ಜಾನಕಿ ಮಂದಿರದಿಂದ ಪ್ರಾರಂಭವಾಗಲಿದ್ದು, ಮೊದಲಿಗೆ ಜಲೇಶ್ವರವನ್ನು ತಲುಪಲಿದ್ದು, ಆ ದಿನ ರಾತ್ರಿಯನ್ನು ಬೀರ್‌ಗಂಜ್‌ ಪ್ರದೇಶದಲ್ಲಿ ಕಳೆಯಲಿದೆ ಎಂದು ಷಾ ತಿಳಿಸಿದ್ದಾರೆ. ಸುಮಾರು 30 ಕಾರುಗಳು ಮತ್ತು ಐದು ಬಸ್ಸುಗಳನ್ನು ಒಳಗೊಂಡಿರುವ ಮೆರವಣಿಗೆಯು ಉಡುಗೊರೆಗಳನ್ನು ಸಾಗಿಸುತ್ತದೆ. ಜನವರಿ 5 ರಂದು ರಕ್ಸಾಲ್ ಮೂಲಕ ಭಾರತವನ್ನು ದಾಟಲು ಯೋಜಿಸಿದ್ದಾರೆ, ಬೆಟಿಯಾದಲ್ಲಿ ಊಟಕ್ಕೆ ನಿಲ್ಲಿಸುತ್ತಾರೆ, ಆ ಬಳಿಕ  ಗೋರಕ್‌ಪುರ ಮತ್ತು ಬಸ್ತಿಪುರ ಮೂಲಕ ಅಯೋಧ್ಯೆಗೆ ಆಗಮಿಸುತ್ತಾರೆ. ನಿಯೋಗವು ಜನವರಿ 6 ರಂದು ಬೆಳಿಗ್ಗೆ 8 ಗಂಟೆಗೆ ದೇವಾಲಯದ ಟ್ರಸ್ಟಿಗಳಿಗೆ 1,100 ಭರಗಳನ್ನು ನೀಡಲು ನಿರ್ಧಾರ ಮಾಡದೆ.

 

ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ First Look!

Latest Videos
Follow Us:
Download App:
  • android
  • ios