ಸಂವಿಧಾನ, ಕಾನೂನು ಪರಿಗಣಿಸಿ ಜಡ್ಜ್‌ಗಳಿಂದ ತೀರ್ಪು ನೀಡಲಾಗುತ್ತದೆ ಎಂದ ಚಂದ್ರಚೂಡ್, ಸಂವಿಧಾನದ 370ನೇ ವಿಧಿ, ಸಲಿಂಗ ವಿವಾಹ ತೀರ್ಪಿನ ಟೀಕೆಗೆ ಪ್ರತಿಕ್ರಯಿಸಲು ನಿರಾಕರಿಸಿದರು.
ನವದೆಹಲಿ (ಜನವರಿ 2, 2024): ದಶಕಗಳಿಂದ ಇದ್ದ ರಾಮಮಂದಿರ ವಿವಾದದ ಗಂಭೀರತೆ ಅರಿತು ಒಮ್ಮತದ ತೀರ್ಪು ಪ್ರಕಟಿಸುವ ತೀರ್ಮಾನಕ್ಕೆ ಬರಲಾಯಿತು. ಹಾಗೂ ಈ ತೀರ್ಪನ್ನು ಇಂಥವರೇ ನೀಡಿದರು ಎಂಬ ಕರ್ತೃತ್ವವನ್ನು ನೀಡದಿರಲು ನಿರ್ಧರಿಸಲಾಗಿತ್ತು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾ| ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ಸೋಮವಾರ ಸಂದರ್ಶನ ನೀಡಿದ ಅವರು, ‘ತೀರ್ಪಿನಲ್ಲಿ ಪೀಠದಲ್ಲಿನ ಯಾವ ನ್ಯಾಯಮೂರ್ತಿಗಳ ಅನಿಸಿಕೆ ಏನಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಬರೆಯಲಿಲ್ಲ. ಪ್ರಕರಣದ ಇತಿಹಾಸ ಹಾಗೂ ವಿಭಿನ್ನ ಅನಿಸಿಕೆಗಳನ್ನು ಗಮನದಲ್ಲಿ ಇರಿಸಿಕೊಂಡು, ತೀರ್ಪಿಗೂ ಮುನ್ನ ಸಭೆ ನಡೆಸಿ ಒಂದೇ ಸ್ವರದ ತೀರ್ಪು ನೀಡಲು ತೀರ್ಮಾನಿಸಲಾಯಿತು. ಕೇಸಿನ ಗಂಭೀರತೆ ಅರಿತು ಜಡ್ಜ್‌ಗಳ ಅನಿಸಿಕೆಗಳನ್ನು ಅವರವರ ಹೆಸರಲ್ಲಿ ಪ್ರತ್ಯೇಕವಾಗಿ ಪ್ರಕಟಿಸದೇ ಕೇವಲ ‘ಕೋರ್ಟ್ ತೀರ್ಪು’ ಎಂದು ಬರೆಯಲಾಯಿತು’ ಎಂದರು.
ಇದನ್ನು ಓದಿ: ಮಥುರಾ ಕೃಷ್ಣ ಜನ್ಮಭೂಮಿ ಸರ್ವೇ: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ; ಹಿಂದೂಗಳಿಗೆ ಮತ್ತೆ ಜಯ!
370 ಬಗ್ಗೆ ಮಾತಾಡಲ್ಲ: ಇದೇ ವೇಳೆ ಸಂವಿಧಾನ, ಕಾನೂನು ಪರಿಗಣಿಸಿ ಜಡ್ಜ್‌ಗಳಿಂದ ತೀರ್ಪು ನೀಡಲಾಗುತ್ತದೆ ಎಂದ ಚಂದ್ರಚೂಡ್, ಸಂವಿಧಾನದ 370ನೇ ವಿಧಿ, ಸಲಿಂಗ ವಿವಾಹ ತೀರ್ಪಿನ ಟೀಕೆಗೆ ಪ್ರತಿಕ್ರಯಿಸಲು ನಿರಾಕರಿಸಿದರು. ತೀರ್ಪು ಪ್ರಕಟದ ಬಳಿಕ ಅದು ಸಾರ್ವಜನಿಕ ಆಸ್ತಿ, ಪ್ರತಿಕ್ರಿಯೆ ನೀಡಲು ಎಲ್ಲರೂ ಮುಕ್ತ ಎಂದರಲ್ಲದೆ, ನ್ಯಾಯಮೂರ್ತಿಗಳ ನೇಮಕ ಕುರಿತ ಕೊಲಿಜಿಯಂ ವ್ಯವಸ್ಥೆ ಸದೃಢವಾಗಿದೆ ಎಂದು ಸ್ಪಷ್ಟಪಡಿಸಿದರು.
ಜನವರಿ 22ರ ಮಧ್ಯಾಹ್ನ 12.20ಕ್ಕೆ ರಾಮಲಲ್ಲಾ ಪ್ರತಿಷ್ಠಾಪನೆ
ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮ ಲಲ್ಲಾ ವಿಗ್ರಹ ಪ್ರತಿಷ್ಠಾಪನೆಯು ಜನವರಿ 22ರ ಮಧ್ಯಾಹ್ನ 12.20ಕ್ಕೆ ನೆರವೇರಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಸೋಮವಾರ ನಡೆದ ‘ಅಕ್ಷತೆ ವಿತರಣೆ’ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಜನವರಿ 22ರಂದು ಶ್ರೀರಾಮ ಮಂದಿರ ಉದ್ಘಾಟನೆಯ ದಿನ ಮಧ್ಯಾಹ್ನ 12.20ಕ್ಕೆ ರಾಮ ಲಲ್ಲಾ ವಿಗ್ರಹವನ್ನು ದೇವಾಲಯದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ ‘ಪ್ರಾಣ ಪ್ರತಿಷ್ಠಾಪನೆ’ ಕಾರ್ಯಕ್ರಮ ನೆರವೇರಿಸಲಾಗುವುದು. ಇದಾದ ಬಳಿಕ ಜನರು ಆರತಿ ಮಾಡಬೇಕು. ನಂತರ ಪ್ರಸಾದ ವಿತರಿಸಬೇಕು. ಸೂರ್ಯಾಸ್ತದ ಬಳಿಕ ದೀಪ ಬೆಳಗಿಸಬೇಕು. ಪ್ರಧಾನಿ ನರೇಂದ್ರ ಮೋದಿಯವರು ಜಗತ್ತಿಗೆ ಇದೇ ಮನವಿ ಮಾಡಿದ್ದಾರೆ’ ಎಂದರು.
ಕಾಶ್ಮೀರಕ್ಕೆ ವಿಶೇಷ ಸ್ಥಾನ ರದ್ದು ನಿರ್ಧಾರ ಎತ್ತಿ ಹಿಡಿದ ಸುಪ್ರೀಂಕೋರ್ಟ್: ಮೋದಿ ಸರ್ಕಾರಕ್ಕೆ ಜಯ
