ಕೋಮು ಸಂಘರ್ಷದ ಬೆಂಕಿಗೆ ಹರ್ಯಾಯ ಗುರುಗಾಂನ ಹಲವು ಪ್ರದೇಶಗಳು ಹೊತ್ತಿ ಉರಿದಿದೆ. ಭೀಕರ ಹಿಂಸಾಚಾರದಲ್ಲಿ ಐವರು ಮೃತಪಟ್ಟಿದ್ದಾರೆ. ಇದೀಗ ಮುಂಜಾಗ್ರತ  ಕ್ರಮವಾಗಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಗುರುಗಾಂ(ಆ.01) ಹರ್ಯಾಣದಲ್ಲಿನ ಕೋಮು ಸಂಘರ್ಷ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಲಾಭಿಷೇಕ ಯಾತ್ರೆ ಮೇಲೆ ನಡೆದ ಕಲ್ಲ ತೂರಾಟದಿಂದ ಆರಂಭಗೊಂಡ ಸಂಘರ್ಷ ಗುುಂಡಿನ ದಾಳಿ, ಪೆಟ್ರೋಲ್ ಬಾಂಬ್ ಎಸೆತ ಸೇರಿದಂತೆ ಹಲವು ದುರ್ಘಟನೆಗಳು ಸಂಭವಿಸಿದೆ. ಈ ಹಿಂಸಾರದಲ್ಲಿ ಐವರು ಮೃತಪಟ್ಟಿದ್ದಾರೆ. ಎರಡು ಕೋಮುಗಳ ನಡುವೆ ಹೊತ್ತಿಕೊಂಡ ಬೆಂಕಿ ಕಿಡಿ ಇದೀಗ ಜ್ವಾಲೆಯಾಗಿ ಆವರಿಸಿದೆ. ಹರ್ಯಾಣದ ಅಕ್ಕ ಪಕ್ಕದಲ್ಲೂ ಹಿಂಸಾಚಾರ ಭುಗಿಲೆದ್ದಿದೆ. ಮುಂಜಾಗ್ರತಾ ಕ್ರಮವಾಗಿ ಗುರುಗಾಂನ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಆಗಸ್ಟ್ 2 ರಂದು ಗುರುಗಾಂವನ ಸೊಹ್ನ ಭಾಗದ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.ಶಾಲಾ ಕಾಲೇಜು, ಕೋಚಿಂಗ್ ಕೇಂದ್ರಗಳಿಗೂ ರಜೆ ಘೋಷಿಸಲಾಗಿದೆ.

ಗುರುಗಾಂ ಬದಶಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಇಂದು ಮಧ್ಯಾಹ್ನ ಆಕ್ರೋಶಿತರ ಗುಂಪು ಬದಶಪುರಕ್ಕೆ ನುಗ್ಗಿ ದಾಂಧಲೆ ಮಾಡಿದೆ. ಕೋಲು ಬಡಿಗೆ, ಕಲ್ಲುಗಳನ್ನು ಹಿಡಿದು ರೆಸ್ಟೋರೆಂಟ್ ಸೇರಿ ಅಂಗಡಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿದ್ದಾರೆ. ರೆಸ್ಟೋರೆಂಟ್‌ಗೆ ಬೆಂಕಿ ಹಚ್ಚಲಾಗಿದೆ. ಸುಮಾರು 200ಕ್ಕೂ ಹೆಚ್ಚು ಆಕ್ರೋಶಿತರ ಗುಂಪನಿಂದ ಬದಶಪುರದಲ್ಲಿ ಘರ್ಷಣೆ ಜೋರಾಗಿದೆ.

ವಿಶ್ವ ಹಿಂದು ಪರಿಷತ್‌ ಶೋಭಾಯಾತ್ರೆಯ ವೇಳೆ ಕಲ್ಲುತೂರಾಟ, 40ಕ್ಕೂ ಅಧಿಕ ವಾಹನಗಳಿಗೆ ಬೆಂಕಿ!

ಹರಾರ‍ಯಣದ ಗುರುಗ್ರಾಮ ನಗರಕ್ಕೆ ಹೊಂದಿಕೊಂಡಿರುವ ನೂಹ್‌ ಪಟ್ಟಣದಲ್ಲಿ ಸೋಮವಾರ ವಿಶ್ವ ಹಿಂದೂ ಪರಿಷತ್‌ ಹಮ್ಮಿಕೊಂಡಿದ್ದ ಜಲಾಭಿಷೇಕ ಯಾತ್ರೆ ವೇಳೆ 2 ಕೋಮುಗಳ ನಡುವೆ ಭಾರಿ ಸಂಘರ್ಷ ನಡೆದಿದೆ ಹಾಗೂ ಹತ್ತಾರು ಕಾರು, ಬೈಕುಗಳಿಗೆ ಬೆಂಕಿ ಹಚ್ಚಲಾಗಿದೆ. ಮೆರವಣಿಗೆಯಲ್ಲಿ ಕ್ರಿಮಿನಲ್‌ ಹಿನ್ನೆಲೆಯ ‘ಗೋರಕ್ಷಕ’ ಮೋನು ಮನೇಸಾರ್‌ ಪಾಲ್ಗೊಂಡಿದ್ದು, ಇನ್ನೊಂದು ಕೋಮನ್ನು ಕೆರಳಿಸಿದೆ ಹಾಗೂ ಹಿಂಸೆಗೆ ನಾಂದಿ ಹಾಡಿದೆ. ಈ ವೇಳೆ ದುಷ್ಕರ್ಮಿಗಳ ದಾಳಿಗೆ ಓರ್ವ ಹೋಮ್‌ಗಾರ್ಡ್‌ ಬಲಿಯಾಗಿದ್ದು, 10ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡಿದ್ದಾರೆ.

ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಲ್ಲದೆ, ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಬಳಿಕ ಪರಿಚ್ಛೇದ 144ರ ಅಡಿ ನಿಷೇಧಾಜ್ಞೆ ವಿಧಿಸಲಾಗಿದೆ ಹಾಗೂ ನಗರದಲ್ಲಿ ಮೊಬೈಲ್‌ ಇಂಟರ್ನೆಟ್‌ ಬಂದ್‌ ಮಾಡಲಾಗಿದೆ. ಘಟನೆಯಲ್ಲಿ ಹಲವರು ಮಂದಿ ಗಾಯಗೊಂಡಿದ್ದಾರೆ.ಇದೇ ವೇಳೆ, ಪರಿಸ್ಥಿತಿ ತ್ವೇಷಗೊಂಡ ಕಾರಣ ಮೆರವಣಿಗೆಗೆ ಬಂದಿದ್ದ 2500 ಭಕ್ತರಿಗೆ ಗುರುಗ್ರಾಮದ ನುಲ್ಹಾರ್‌ ಮಹದೇವ ಮಂದಿರದಲ್ಲಿ ಆಶ್ರಯ ನೀಡಲಾಗಿದೆ. ಗಲಾಟೆ ಕಾರಣ ಅವರು ಮಂದಿರದಿಂದ ಹೊರಬರಲು ಆಗುತ್ತಿಲ್ಲ.

ಹರಿಯಾಣ ಕೋಮುಗಲಭೆಯಲ್ಲಿ ನಾಲ್ವರ ಸಾವು, ನುಹ್‌ ಜಿಲ್ಲೆಯಲ್ಲಿ ಎರಡು ದಿನ ಕರ್ಫ್ಯೂ!

ವಿಎಚ್‌ಪಿ ಇಲ್ಲಿ ಬೃಜ್‌ಮಂಡಲ ಜಲಾಭಿಷೇಕ ಯಾತ್ರೆ ಹಮ್ಮಿಕೊಂಡಿತ್ತು ನೂಹ್‌ ಸಮೀಪದ ಗುರುಗ್ರಾಮ-ಅಲ್ವರ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಉದ್ರಿಕ್ತರು ಯಾತ್ರೆ ತಡೆದು ಕಲ್ಲು ತೂರಿದ್ದಾರೆ. ಆಗ ಭಾರಿ ಗಲಭೆ ಸಂಭವಿಸಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.