ಆಂಧ್ರಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಆಳ ಸಮುದ್ರ ಯೋಜನೆಯಿಂದ ಆರಂಭಿಕ ತೈಲ ಹೊರತೆಗೆಯುವಿಕೆ ಜನವರಿ 7 ರಂದು ನಡೆದಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. 

ನವದೆಹಲಿ (ಜ.8): ಆಂಧ್ರಪ್ರದೇಶದ ಕಾಕಿನಾಡ ಕರಾವಳಿಯಿಂದ 30 ಕಿಲೋಮೀಟರ್ ದೂರದಲ್ಲಿರುವ ಆಳ ಸಮುದ್ರ ಯೋಜನೆಯಿಂದ ಜನವರಿ 7 ರಂದು ಮೊದಲ ಬಾರಿಗೆ ತೈಲವನ್ನು ಹೊರತೆಗೆಯಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ಹೇಳಿದ್ದಾರೆ. ತೈಲ ಹೊರತೆಗೆದಿರುವ ವಿಚಾರದ ಬಗ್ಗೆ ಮಾತನಾಡಿದ ಪುರಿ, "ಕಾಕಿನಾಡ ಕರಾವಳಿಯಿಂದ 30 ಕಿಲೋಮೀಟರ್ ದೂರದಲ್ಲಿ ಕೃಷ್ಣ ಗೋದಾವರಿ ಜಲಾನಯನ ಪ್ರದೇಶದಲ್ಲಿ ದೊರೆತಿದ್ದ ಕಚ್ಚಾ ತೈಲದ ಮೀಸಲಿನಿಂದ ನಿನ್ನೆ ಮೊದಲ ಬಾರಿಗೆ ತೈಲವನ್ನು ಹೊರತೆಗೆಯಲಾಯಿತು. 2016-17 ರಲ್ಲಿ ಇದರ ಕೆಲಸ ಪ್ರಾರಂಭವಾಗಿತ್ತು. ಬಳಿಕ ಕೋವಿಡ್‌ನಿಂದ ಸ್ವಲ್ಪ ವಿಳಂಬವಾಯಿತು. ಆದರೆ ನಾನು ಅಲ್ಲಿರುವ 26 ಬಾವಿಗಳಲ್ಲಿ 4 ಬಾವಿಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ ಎನ್ನುವುದು ಖಚಿತವಾಗಿ ತಿಳಿಸಬಲ್ಲೆ ಎಂದು ಹೇಳಿದ್ದಾರೆ.

"ನಾವು ಅತಿ ಕಡಿಮೆ ಅವಧಿಯ ಅನಿಲವನ್ನು ಹೊಂದಿದ್ದೇವೆ, ಆದರೆ ಮೇ ಮತ್ತು ಜೂನ್ ವೇಳೆಗೆ, ನಾವು ದಿನಕ್ಕೆ 45,000 ಬ್ಯಾರೆಲ್‌ಗಳನ್ನು ಉತ್ಪಾದಿಸಲು ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ, ಇದು ನಮ್ಮ ಒಟ್ಟು ಕಚ್ಚಾ ತೈಲ ಉತ್ಪಾದನೆಯ ಶೇಕಡಾ 7ರಷ್ಟು ಹಾಗೂ ಅನಿಲ ಉತ್ಪಾದನೆಯ ಶೇ.7ರಷ್ಟಾಗಿದೆ ಎಂದು ತಿಳಿಸಿದ್ದಾರೆ.

ಭಾರತಕ್ಕೆ ಆಗಮಿಸುತ್ತಿದ್ದ ಹಡಗಿನ ಮೇಲೆ ಉಗ್ರರ ದಾಳಿ, ಹೌತಿ ಭಯೋತ್ಪಾದಕರಿಗೆ ಚೀನಾ ಕುಮ್ಮಕ್ಕು?

ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದೆ. "ಓಎನ್‌ಜಿಸಿ ತನ್ನ 'ಎಫ್‌ಪಿಎಸ್‌ಓಗೆ ಮೊದಲ ತೈಲ ಹರಿವನ್ನು' ಕೃಷ್ಣ ಗೋದಾವರಿ ಡೀಪ್-ವಾಟರ್ ಬ್ಲಾಕ್ 98/2 (ಬಂಗಾಳ ಕೊಲ್ಲಿಯಲ್ಲಿ) ಜನವರಿ 7 ರಂದು ಪ್ರಾರಂಭಿಸಿತು, ಯೋಜನೆಯ ಹಂತ-2 ಮುಕ್ತಾಯದ ಹಂತದಲ್ಲಿದೆ. ಹಂತ-3, ಗರಿಷ್ಠ ತೈಲಕ್ಕೆ ಉತ್ಪಾದನೆ ಮಾಡಲಿದೆ ಮತ್ತು ಅನಿಲ ಉತ್ಪಾದನೆಯು ಈಗಾಗಲೇ ನಡೆಯುತ್ತಿದೆ ಮತ್ತು ಜೂನ್ 2024 ರಲ್ಲಿ ಮುಗಿಯುವ ಸಾಧ್ಯತೆಯಿದೆ." ಅದು ತಿಳಿಸಿದೆ.

ಮಂಗಳೂರಿಗೆ ಬರ್ತಿದ್ದ ಹಡಗು ದಾಳಿಕೋರರು ಸಮುದ್ರದ ಆಳದಲ್ಲಿದ್ರೂ ಪತ್ತೆ ಮಾಡ್ತೇವೆ: ರಾಜನಾಥ್‌ ಸಿಂಗ್ ಎಚ್ಚರಿಕೆ

Scroll to load tweet…