Asianet Suvarna News Asianet Suvarna News

ಮೋದಿ ಸರ್ಕಾರದ ಮತ್ತೊಂದು ಬಂಪರ್‌: ಎಲ್‌ಪಿಜಿ ಆಯ್ತು.. ಶೀಘ್ರದಲ್ಲೇ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲೂ ಭಾರಿ ಕಡಿತ!

14.2 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ 200 ರೂ. ಕಡಿತಗೊಳಿಸಿತ್ತು. ಅಲ್ಲದೆ, ಉಜ್ವಲ ಯೋಜನೆಯವರಿಗೆ 200 ರೂ. ಹೆಚ್ಚುವರಿ ಸಬ್ಸಿಡಿಯನ್ನೂ ನೀಡಿತ್ತು.

govt may cut petrol diesel price by rs 3 to 5 a litre around diwali ash
Author
First Published Sep 7, 2023, 2:13 PM IST

ಹೊಸದಿಲ್ಲಿ (ಸೆಪ್ಟೆಂಬರ್ 7, 2023): ಲೋಕಸಭೆ ಎಲೆಕ್ಷನ್‌ ಹಾಗೂ ಅದಕ್ಕೂ ಮುನ್ನ ಈ ವರ್ಷ ನಡೆಯಲಿರೋ ಪಂಚರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ನೇತೃತ್ವದ ಕೆಂದ್ರ ಸರ್ಕಾರ ಭಾರಿ ಹರಸಾಹಸ ಪಡ್ತಿದೆ. ಇತ್ತೀಚೆಗೆ ರಕ್ಷಾಬಂಧನ ಗಿಫ್ಟ್‌ ಎಂದು ಎಲ್‌ಪಿಜಿ ಸಿಲಿಂಡರ್‌ ಬೆಲೆಯನ್ನು ಕಡಿತಗೊಳಿಸಿದ್ದ ಕೆಂದ್ರ ಸರ್ಕಾರ, ಈಗ ದೀಪಾವಳಿ ವೇಳೆಗೆ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಕಡಿತಗೊಳಿಸಲಿದೆ ಎಂದು ವರದಿಗಳು ಹೇಳುತ್ತಿವೆ.

14.2 ಕೆಜಿ ತೂಕದ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಅನ್ನು ಕೇಂದ್ರ ಸರ್ಕಾರ ಇತ್ತೀಚೆಗೆ 200 ರೂ. ಕಡಿತಗೊಳಿಸಿತ್ತು. ಅಲ್ಲದೆ, ಉಜ್ವಲ ಯೋಜನೆಯವರಿಗೆ 200 ರೂ. ಹೆಚ್ಚುವರಿ ಸಬ್ಸಿಡಿಯನ್ನೂ ನೀಡಿತ್ತು. ಈಗ ಕೇಂದ್ರ ಸರಕಾರವು ನವೆಂಬರ್ - ಡಿಸೆಂಬರ್ ವೇಳೆಗೆ ಪ್ರಮುಖ ರಾಜ್ಯಗಳ ಚುನಾವಣೆಗಳು ಪ್ರಾರಂಭವಾಗುವ ಹಿನ್ನೆಲೆಯಲ್ಲಿ ದೀಪಾವಳಿಯ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 3-5 ರೂ. ಕಡಿಮೆ ಮಾಡಲು ಮುಂದಾಗಲಿದೆ ಎಂದು ಜೆ.ಎಂ. ಫೈನಾನ್ಶಿಯಲ್‌ ಇನ್ಸ್ಟಿಟ್ಯೂಷನಲ್‌ ಸೆಕ್ಯುರಿಟೀಸ್‌ ವರದಿಯಲ್ಲಿ ಹೇಳಿದೆ. 

ಇದನ್ನು ಓದಿ: Good News: ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 158 ರೂ. ಇಳಿಕೆ; ಪರಿಷ್ಕೃತ ಬೆಲೆ ವಿವರ ಹೀಗಿದೆ..

ಕಳೆದ ವಾರ, ಆಗಸ್ಟ್ 30 ರಿಂದ ಜಾರಿಗೆ ಬರುವಂತೆ ಎಲ್ಲಾ 330 ಮಿಲಿಯನ್ ಗ್ರಾಹಕರಿಗೆ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು 200 ರೂ. ಅನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಇದು ಇತ್ತೀಚಿನ ಹಣದುಬ್ಬರದಿಂದ ಸಾಮಾನ್ಯ ಜನರಿಗೆ ಪರಿಹಾರವನ್ನು ನೀಡುತ್ತದೆ. ಮುಂದಿನ ಕ್ರಮವಾಗಿ, ಕೇಂದ್ರ ಸರ್ಕಾರವು ನವೆಂಬರ್ - ಡಿಸೆಂಬರ್‌ನಲ್ಲಿ ನಡೆಯಲಿರೋ ಪಂಚ ರಾಜ್ಯಗಳ ಚುನಾವಣೆಗ ಹಿನ್ನೆಲೆ ದೀಪಾವಳಿಯ ಆಸುಪಾಸಿನಲ್ಲಿ ಪೆಟ್ರೋಲ್/ಡೀಸೆಲ್ ಬೆಲೆಗಳನ್ನು ಲೀಟರ್‌ಗೆ 3 ರಿಂದ 5 ರಷ್ಟು ಕಡಿತಗೊಳಿಸಬಹುದು ಎಂದು ವರದಿ ಹೇಳಿದೆ.

"ಈ ಕಡಿತವು ಹೆಚ್ಚಾಗಿ ಅಬಕಾರಿ ಸುಂಕ ಮತ್ತು/ಅಥವಾ ವ್ಯಾಟ್ ಕಡಿತವಾಗಬಹುದು. ತೈಲ ಮಾರುಕಟ್ಟೆ ಕಂಪನಿಗಳು ಪ್ರಸ್ತುತ ಹೆಚ್ಚಿನ ಕಚ್ಚಾ ಬೆಲೆಯಲ್ಲಿ ಸ್ವಯಂ - ಇಂಧನ ವ್ಯಾಪಾರೋದ್ಯಮ ವ್ಯವಹಾರವನ್ನು ಕಳೆದುಕೊಳ್ಳುತ್ತಿವೆ. ಆದರೂ, ಆರ್ಥಿಕ ವರ್ಷ 24 ರ ಮೊದಲಾರ್ಧದಲ್ಲಿ ಬಲವಾದ ಲಾಭದ ಕಾರಣದಿಂದ ಅವರ ಬ್ಯಾಲೆನ್ಸ್ ಶೀಟ್‌ಗಳು ಹೆಚ್ಚಾಗಿ ದುರಸ್ತಿಗೊಂಡಿರುವುದರಿಂದ ಪೆಟ್ರೋಲ್ / ಡೀಸೆಲ್ ಬೆಲೆಗಳನ್ನು ಕಡಿತಗೊಳಿಸಲು OMC ಗಳನ್ನು ಸರ್ಕಾರವು ಒತ್ತಾಯಿಸುವ ಸನ್ನಿವೇಶವನ್ನು ನಾವು ತಳ್ಳಿಹಾಕಲು ಸಾಧ್ಯವಿಲ್ಲ" ಎಂದೂ ವರದಿ ತಿಳಿಸಿದೆ. 

ಇದನ್ನೂ ಓದಿ: ‘ಲೋಕ’ ಸಮರ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲ್ಯಾನ್‌: ಶೀಘ್ರದಲ್ಲೇ ಎಲ್‌ಪಿಜಿ ಬೆಲೆ ಇಳಿಕೆ, ರೈತರ ಖಾತೆಗೆ ಪರಿಹಾರ ಧನ ಹೆಚ್ಚಳ!

Follow Us:
Download App:
  • android
  • ios